20 ವರ್ಷಗಳಲ್ಲಿ ಒಮ್ಮೆ ಮಾತ್ರ KMF ತುಪ್ಪ ನೀಡಿದ್ದಂತೆ..! – 42 ಟ್ರಕ್ ತುಪ್ಪಕ್ಕೆ ತಿರುಪತಿ ದೇವಸ್ಥಾನದಿಂದ‌ ಗೇಟ್ ಪಾಸ್ : ಟಿಟಿಡಿ ಹೇಳಿದ್ದೇನು?

20 ವರ್ಷಗಳಲ್ಲಿ ಒಮ್ಮೆ ಮಾತ್ರ KMF ತುಪ್ಪ ನೀಡಿದ್ದಂತೆ..! – 42 ಟ್ರಕ್ ತುಪ್ಪಕ್ಕೆ ತಿರುಪತಿ ದೇವಸ್ಥಾನದಿಂದ‌ ಗೇಟ್ ಪಾಸ್ : ಟಿಟಿಡಿ ಹೇಳಿದ್ದೇನು?

ನ್ಯೂಸ್ ಆ್ಯರೋ : ಗುಣಮಟ್ಟದ ಕೊರತೆಯಿರುವ 42 ಟ್ರಕ್ ಹಸುವಿನ ತುಪ್ಪವನ್ನು ತಿರುಪತಿ‌ ತಿರುಮಲದ ವೆಂಕಟೇಶ್ವರ ದೇವಸ್ಥಾನವು 2022ರ ಜುಲೈ 22ರಿಂದ 2023ರ ಜೂನ್ 30ರ ವರೆಗಿನ ಅವದಿಯಲ್ಲಿ ತಿರಸ್ಕರಿಸಿದೆ. ತಿರಸ್ಕರಿಸಲ್ಪಟ್ಟ ಪ್ರತಿ ಟ್ರಕ್ ನಲ್ಲಿ 18 ಟನ್ ತುಪ್ಪ ಇರುತ್ತಿತ್ತು. ಈ ಬಗ್ಗೆ ಟಿಟಿಡಿ ಖರೀದಿ ವಿಭಾಗದ ಮುಖ್ಯ ವ್ಯವಸ್ಥಾಪಕ ಮುರಳಿಕೃಷ್ಣ ಮಾಹಿತಿ‌ ನೀಡಿದ್ದು, ‘ಟ್ರಕ್ ಗಳನ್ನು‌ ತಿರಸ್ಕರಿಸುವ ಮುನ್ನ ತುಪ್ಪದ ಮಾದರಿಯನ್ನು ಆರೋಗ್ಯ, ವಿಚಕ್ಷಣ ದಳ, ಎಂಜಿನಿಯರಿಂಗ್ ಹಾಗೂ ಇನ್ನಿತರ ವಿಭಾಗಗಳನ್ನು‌ ಒಳಗೊಂಡಿರುವ ಗುಣ ಮಟ್ಟ ಪರೀಕ್ಷಾ ತಂಡ ಪರೀಕ್ಷಿಸಿದೆ’ ಎಂದಿದ್ದಾರೆ.

ತುಪ್ಪ ತಿರಸ್ಕಾರಕ್ಕೆ ಕಾರಣವೇನು?

ಹಸುವಿನ‌‌‌ ತುಪ್ಪ ತಯಾರಿಕೆಗೆ ಪೂರ್ವದಲ್ಲಿ ಬೆಣ್ಣೆಯನ್ನು 60 ರಿಂದ 70 ಡಿಗ್ರಿ ಸೆಲ್ಸಿಯಸ್ ನಲ್ಲಿ ಶೇಖರಿಸದ‌ ಕಾರಣ ತುಪ್ಪ ತಿರಸ್ಕರಿಸಲಾಗಿದೆ. ಇನ್ನು ಗೋದಾಮು ಹಾಗೂ ಟ್ರಕ್‌ ನಲ್ಲಿರುವ ತುಪ್ಪದ ಮಾದರಿಯನ್ನು ಟಿಟಿಡಿಯ ನೀರು ಮತ್ತು ಆಹಾರ ವಿಶ್ಲೇಷಣಾ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಟೆಂಡರ್ ಪಡೆಯುವ ಮುನ್ನ ಡೇರಿ ಪರಿಣಿತರು ಈ ಮಾದರಿಯನ್ನು ರಾಷ್ಟ್ರ ಮಟ್ಟದ ಮಾನ್ಯತೆ ಪಡೆದ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಸಿದ್ಧಪಡಿಸುತ್ತಾರೆ’ ಎಂದು ಕೃಷ್ಣ ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ಈ ತುಪ್ಪದ ಬಳಕೆ ಹೇಗೆ?

ಇನ್ನು ದೇವಸ್ಥಾನದಲ್ಲಿ ತುಪ್ಪದ ಬಳಕೆಯ ಬಗ್ಗೆ ಮಾತನಾಡಿರುವ ಅವರು, ‘ಖರೀದಿಸುವ ತುಪ್ಪವನ್ನು ವಿಶ್ವ ಪ್ರಸಿದ್ಧ ತಿರುಪತಿ‌ ಲಾಡು ತಯಾರಿಕೆಗೆ, ಅನ್ನಪ್ರಸಾದಂ, ಅನ್ನದಾನಂ‌‌ ನಲ್ಲೂ ಬಳಸಲಾಗುತ್ತದೆ. ಜತೆಗೆ ಟಿಟಿಡಿಯ ಆಡಳಿತಕ್ಕೆ ಒಳಪಟ್ಟಿರುವ ಶಾಲೆಗಳಿಗೆ, ದೇವಸ್ಥಾನ, ಸಂಸ್ಥೆಗಳಿಗೂ ಬಳಕೆಯಾಗುತ್ತದೆ. ಇದರೊಂದಿಗೆ ದೇವಸ್ಥಾನದಲ್ಲಿ ಹಚ್ಚುವ ದೀಪಗಳಿಗೂ ಈ ತುಪ್ಪ ಬಳಸಲಾಗುತ್ತದೆ’ ಎಂದಿದ್ದಾರೆ.

ಕೆಎಂಎಫ್ ತುಪ್ಪಕ್ಕೆ ಎಲ್1 ಬಿಡ್ಡರ್ ಅರ್ಹತೆಯಿಲ್ಲ!

‘ತಿರುಪತಿ ತಿರುಮಲ ದೇವಸ್ಥಾನ‌ ಕಡಿಮೆ ಗುಣಮಟ್ಟದ ತುಪ್ಪ ಖರೀದಿಸುತ್ತದೆ’ ಎಂಬ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಭೀಮಾ‌ನಾಯ್ಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಟಿಟಿಡಿ ಖರೀದಿಸುವ ತುಪ್ಪವನ್ನು ಎರಡು ಹಂತಗಳ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಷರತ್ತು ಬದ್ಧ ಇ-ಟೆಂಡರ್ ನಲ್ಲಿ‌ ಕಡಿಮೆ ದರ ನಮೂದಿಸಿದವರಲ್ಲಿ ಮೊದಲಿಗರಿಗೆ ಮಾತ್ರ ನೀಡಲಾಗುತ್ತಿದೆ. ಕಳೆದ 20 ವರ್ಷಗಳಲ್ಲಿ ಕೆಎಂಎಫ್ ಒಂದು ಬಾರಿ ಮಾತ್ರ ಟಿಟಿಡಿಗೆ ತುಪ್ಪ ಪೂರೈಕೆ ಮಾಡಿದೆ. ಉಳಿದ ಯಾವ ಸಮಯದಲ್ಲೂ ಕೆಎಂಎಫ್ ಎಲ್ 1 ಬಿಡ್ಡರ್ ಅರ್ಹತೆ ಪಡೆದಿಲ್ಲ’ ಎಂದು ಟಿಟಿಡಿ ಕಾರ್ಯನಿರ್ವಾಹಣಾಧಿಕಾರಿ ಧರ್ಮ ರಡ್ಡಿ ತಿಳಿಸಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *