ಪಬ್ಜಿ ಪ್ರೇಮಿಗಾಗಿ ಪಾಕಿಸ್ತಾನದಿಂದ ಬಂದ ಸೀಮಾ ಹೈದರ್ ಹಿಂದೆ ಬಿದ್ದ ಬಾಲಿವುಡ್! – ಈಕೆಯ ಮೊದಲ ಸಿನಿಮಾಗೆ ಸಂಭಾವನೆ ಎಷ್ಟು ಗೊತ್ತಾ? ಸಿನಿಮಾ ಯಾವುದು?

ಪಬ್ಜಿ ಪ್ರೇಮಿಗಾಗಿ ಪಾಕಿಸ್ತಾನದಿಂದ ಬಂದ ಸೀಮಾ ಹೈದರ್ ಹಿಂದೆ ಬಿದ್ದ ಬಾಲಿವುಡ್! – ಈಕೆಯ ಮೊದಲ ಸಿನಿಮಾಗೆ ಸಂಭಾವನೆ ಎಷ್ಟು ಗೊತ್ತಾ? ಸಿನಿಮಾ ಯಾವುದು?

ನ್ಯೂಸ್ ಆ್ಯರೋ : ಪಬ್ಜಿ ಆಡುವಾಗ ಪರಿಚಯವಾದ ಭಾರತೀಯ ಗೆಳೆಯನಿಗಾಗಿ ಪಾಕಿಸ್ತಾನದ ಗಡಿ ದಾಟಿ ಬಂದ ಸೀಮಾ ಹೈದರ್ ಸಾಕಷ್ಟು ಸುದ್ದಿಯಲ್ಲಿದ್ದಾಳೆ. ಹಲವು ವಿವಾದಗಳ ನಡುವೆಯೂ ಕೂಡ ಸೀಮಾಳ ಅದೃಷ್ಟದ ಬಾಗಿಲು ತೆರೆದಿದ್ದು, ಇದೀಗ ಬಾಲಿವುಡ್ ಈಕೆಯ ಹಿಂದೆ ಬಿದ್ದಿದೆ ಎನ್ನಲಾಗಿದೆ‌. ಈಕೆಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಲಭಿಸಿದ್ದು, 6 ಲಕ್ಷ ಸಂಭಾವನೆ ನೀಡಲು ಚಿತ್ರತಂಡ ಒಪ್ಪಿಕೊಂಡಿದೆ ಎನ್ನಲಾಗಿದೆ.

ಸೀಮಾ‌ ನಟಿಸಲಿರುವ ಸಿನಿಮಾ‌ ಯಾವುದು?

ಬಾಲಿವುಡ್‌ನಲ್ಲಿ ಇದೀಗ ‘ಎ ಟೇಲರ್ ಮರ್ಡರ್ ಸ್ಟೋರಿ’ ಎಂಬ ಚಿತ್ರ ಸುದ್ದಿಯಲ್ಲಿದೆ. ಉದಯಪುರದಲ್ಲಿ ಭಯೋತ್ಪಾದಕರಿಂದ ಹತ್ಯೆಗೀಡಾದ ಟೇಲರ್ ಕನ್ಹಯ್ಯ ಲಾಲ್ ಹತ್ಯೆಯನ್ನು ಆಧರಿಸಿ ಈ ಸಿನಿಮಾ ತಯಾರಾಗುತ್ತದ್ದು, ಈ ಸಿನಿಮಾದಲ್ಲಿ ರಾ ಅಧಿಕಾರಿಯ ಪಾತ್ರದಲ್ಲಿ ನಟಿಸಲು ಸೀಮಾ ಹೈದರ್ ಗೆ ಆಫರ್ ಬಂದಿದೆ. ಇದಕ್ಕಾಗಿ ಚಿತ್ರದ ನಿರ್ದೇಶಕ ಆಡಿಷನ್ ಕೂಡ ನಡೆಸಿದ್ದಾರಂತೆ‌.

ಮೊದಲ ಸಿನಿಮಾಗೆ ₹6 ಲಕ್ಷ ಸಂಭಾವನೆ!

‘ಎ ಟೇಲರ್ ಮರ್ಡರ್’ ಸಿನಿಮಾದ ನಿರ್ದೇಶಕರಾದ ಜಯಂತ್ ಸಿನ್ಹಾ ಹಾಗೂ ಭರತ್ ಸಿಂಗ್ ಇತ್ತೀಚೆಗಷ್ಟೇ ಸೀಮಾ ಹೈದರ್ ನನ್ನು ಆಡಿಷನ್ ಮೂಲಕ ಸಿನಿಮಾದ ರಾ ಅಧಿಕಾರಿ ಪಾತ್ರಕ್ಕೆ ಆಯ್ಕೆ ಮಾಡಿದ್ದು, 6 ಲಕ್ಷ ಸಂಭಾವನೆ ನೀಡುವುದಾಗಿ ತಿಳಿಸಿದ್ದಾರಂತೆ. ಆದರೆ ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳದಿಂದ ಕ್ಲೀನ್ ಚೀಟ್ ಸಿಕ್ಕ ನಂತರವಷ್ಟೇ ಸಿ‌ನಿಮಾದಲ್ಲಿ ನಟಿಸಲು ಸಾಧ್ಯ ಎಂದು ಸೀಮಾ ಚಿತ್ರತಂಡಕ್ಕೆ ತಿಳಿಸಿದ್ದಾಳೆ ಎನ್ನಲಾಗಿದೆ.

ನೈಜ್ಯ ಘಟನೆಯಾಧಾರಿತ ಸಿನಿಮಾ?

ಪ್ರವಾದಿ ಮಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಬೆಂಬಲ ನೀಡಿದ್ದ ಕಾರಣಕ್ಕಾಗಿ ವರ್ಷಗಳ ಹಿಂದೆ ಉದಯಪುರದಲ್ಲಿ ಟೇಲರ್ ಆಗಿದ್ದ ಕನ್ಹಯ್ಯ ಲಾಲ್ ನನ್ನು ಹಾಡು ಹಗಲೇ ಹತ್ಯೆ ಮಾಡಲಾಗಿತ್ತು. ಈ ವಿಚಾರ ದೇಶದಾದ್ಯಂತ ಸದ್ದು ಮಾಡಿದ್ದಷ್ಟೇ ಅಲ್ಲದೇ, ರಾಜಕೀಯವಾಗಿಯೂ ಸಂಚಲನ ಸೃಷ್ಟಿಸಿತ್ತು‌. ಇದೀಗ ಈ ಘಟನೆ ‘ಎ ಟೇಲರ್ ಮರ್ಡರ್ ಸ್ಟೋರಿ’ ಯಾಗಿ ತೆರೆ ಮೇಲೆ ಬರಲು ಸಿದ್ಧವಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *