ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ 3 – ಇಸ್ರೋ ಸಾಧನೆಗೆ ಇನ್ನೊಂದೇ ಮೆಟ್ಟಿಲು ಬಾಕಿ

ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ 3 – ಇಸ್ರೋ ಸಾಧನೆಗೆ ಇನ್ನೊಂದೇ ಮೆಟ್ಟಿಲು ಬಾಕಿ

ನ್ಯೂಸ್ ಆ್ಯರೋ : ಚಂದ್ರಯಾನ -3 (Chandrayaan-3) ಚಂದ್ರನ ಹೊರ ಕಕ್ಷೆಯನ್ನು ಸೆರೆಹಿಡಿದಿದ್ದು, ಈಗ ಚಂದ್ರಯಾನ -3 ಚಂದ್ರನ ಸುತ್ತ 166 ಕಿ.ಮೀ x 18054 ಕಿ.ಮೀ ಅಂಡಾಕಾರದ ಕಕ್ಷೆಯಲ್ಲಿ ಸುತ್ತಲಿದೆ.

ಚಂದ್ರನ ಕಕ್ಷೆಯನ್ನು (Moon orbit) ಸೆರೆಹಿಡಿಯಲು ಇಸ್ರೋ ಚಂದ್ರಯಾನ -3ನ್ನ ಸುಮಾರು 20 ರಿಂದ 25 ನಿಮಿಷಗಳ ಕಾಲ ಥ್ರಸ್ಟರ್ಗಳಲ್ಲಿ ಇರಿಸಿತು. ಇದರೊಂದಿಗೆ ನೌಕೆ ಚಂದ್ರನ ಗುರುತ್ವಾಕರ್ಷಣೆಯಲ್ಲಿ ಸಿಲುಕಿಕೊಂಡಿತು. ಶನಿವಾರ ಸಂಜೆ ಏಳು ಗಂಟೆಯ ಸುಮಾರಿಗೆ ಚಂದ್ರನ ಕಕ್ಷೆಗೆ ನೌಕೆ ಸೇರುವುದಾಗಿ ಇಸ್ರೋ ವಿಜ್ಞಾನಿಗಳು ನಿರೀಕ್ಷೆಯಲ್ಲಿದ್ದರು.

ಇದನ್ನು ಲೂನಾರ್ ಆರ್ಬಿಟ್ ಇಂಜೆಕ್ಷನ್ ಅಥವಾ ಇನ್ಸರ್ಷನ್ (LoI) ಎಂದೂ ಕರೆಯಲಾಗುತ್ತದೆ. ಚಂದ್ರನ ಸುತ್ತ ಐದು ಕಕ್ಷೆಗಳು ಬದಲಾಗುತ್ತವೆ. ಇಂದಿನ ನಂತರ, ಆಗಸ್ಟ್ 6 ರಂದು ರಾತ್ರಿ 11 ಗಂಟೆ ಸುಮಾರಿಗೆ, ಚಂದ್ರಯಾನದ ಕಕ್ಷೆಯನ್ನ 10 ರಿಂದ 12 ಸಾವಿರ ಕಿಲೋಮೀಟರ್ ಕಕ್ಷೆಯಲ್ಲಿ ಇರಿಸಲಾಗುವುದು.

ಆಗಸ್ಟ್ 9 ರಂದು, ಮಧ್ಯಾಹ್ನ 1.45 ರ ಸುಮಾರಿಗೆ, ಅದರ ಕಕ್ಷೆಯನ್ನು 4 ರಿಂದ 5 ಸಾವಿರ ಕಿಲೋಮೀಟರ್ ಕಕ್ಷೆಗೆ ಬದಲಾಯಿಸಲಾಗುವುದು. ನೌಕೆಯ ಸ್ವಾಸ್ಥ್ಯವನ್ನು ಹಗಲಿರುಳೂ ಇಸ್ರೋ ವಿಜ್ಞಾನಿಗಳು ಪರಿಶೀಲಿಸುತ್ತಲಿದ್ದಾರೆ.

ಬೆಂಗಳೂರಿನಲ್ಲಿರುವ ISTRAC (ಇಸ್ರೋ ಟ್ರಾಕಿಂಗ್‌ ಅಂಡ್‌ ಕಮಾಂಡ್‌ ನೆಟ್‌ ವರ್ಕ್‌ ) ಮೂಲಕ ಸತತ ಸಂಪರ್ಕ ಕಾಯ್ದುಕೊಂಡಿದ್ದಾರೆ. ಚಂದ್ರಯಾನ 3 ರ ಎಲ್ಲಾ ತಾಂತ್ರಿಕ ವ್ಯವಸ್ಥೆಯೂ ಇದುವರೆಗೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಇಸ್ರೋ ತಿಳಿಸಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *