ಕಾನೂನು ಪದವಿ ಪಡೆಯದೇ ನ್ಯಾಯಮೂರ್ತಿ ಹುದ್ದೆಗೇರಿದ್ದ ವಾಂಚೂ: ಭಾರತದ ನ್ಯಾಯಾಂಗದ ಇತಿಹಾಸದಲ್ಲೇ ಅಪರೂಪದ ದಾಖಲೆ

ಕಾನೂನು ಪದವಿ ಪಡೆಯದೇ ನ್ಯಾಯಮೂರ್ತಿ ಹುದ್ದೆಗೇರಿದ್ದ ವಾಂಚೂ: ಭಾರತದ ನ್ಯಾಯಾಂಗದ ಇತಿಹಾಸದಲ್ಲೇ ಅಪರೂಪದ ದಾಖಲೆ

ನ್ಯೂಸ್ ಆ್ಯರೋ: ವಕೀಲ ವೃತ್ತಿ, ನ್ಯಾಯಾಧೀಶ ಹುದ್ದೆಗೆ ಕಾನೂನು ಪದವಿಯೇ ಮೊದಲ ಮಾನದಂಡ. ಆದರೆ, ಕಾನೂನು ಪದವಿ ಪಡೆಯದೇ ಆ ಹುದ್ದೆಗಳನ್ನು ಪಡೆಯಲು ಸಾಧ್ಯ ಎಂಬುದನ್ನು ಜಸ್ಟೀಸ್ ಕೈಲಾಶ್ ನಾಥ್ ವಾಂಚೂ ತೋರಿಸಿಕೊಟ್ಟಿದ್ದಾರೆ.

ಜಸ್ಟೀಸ್ ಕೈಲಾಶ್ ನಾಥ್ ವಾಂಚೂ ಅವರು ಕಾನೂನು ಪದವಿ ಪಡೆಯದೇ ಭಾರತದ ಸುಪ್ರೀಂ ಕೋರ್ಟ್‌ನ 10ನೇ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಕಾನೂನು ಪದವಿಯನ್ನ ಪಡೆಯದೆಯೇ ಈ ಸ್ಥಾನವನ್ನ ಅಲಂಕರಿಸಿದ ಏಕೈಕ ವ್ಯಕ್ತಿ ಎಂಬ ಹಿರಿಮೆಯೂ ಅವರ ಹೆಸರಿನಲ್ಲಿದೆ.

1903 ಫೆಬ್ರವರಿ 25ರಂದು ವಾಂಚೂ ಅವರು ಮಧ್ಯಪ್ರದೇಶದಲ್ಲಿ ಜನಿಸಿದರು. 1924ರಲ್ಲಿ ಐಸಿಎಸ್ ತೇರ್ಗಡೆಯಾಗಿ 2 ವರ್ಷ ಇಂಗ್ಲೆಂಡ್‌ನಲ್ಲಿ ತರಬೇತಿ ಪಡೆದುಕೊಂಡರು. ಐಸಿಎಸ್ ತರಬೇತಿಯಲ್ಲಿ ಕ್ರಿಮಿನಲ್ ಲಾ ಓದಿಕೊಂಡು, 1926ರಲ್ಲಿ ಭಾರತಕ್ಕೆ ಮರಳಿದ ಅವರು ಸಂಯುಕ್ತ ಪ್ರಾಂತ್ಯದಲ್ಲಿ ಕಾರ್ಯನಿರ್ವಹಿಸಿದರು.

ಉತ್ತರಪ್ರದೇಶ ಹಾಗೂ ಉತ್ತರಾಖಂಡ್​ಅಲ್ಲಿ ಸಹಾಯಕ ಮ್ಯಾಜಿಸ್ಟ್ರೇಟ್, ಕಲೆಕ್ಟರ್ ಆಗಿ ಕಾರ್ಯನಿರ್ವಹಿಸಿದರು. ನಂತರ ರಾಯಬರೇಲಿಯ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡರು. 1947ರಲ್ಲಿ ಅಲಹಾಬಾದ್ ಹೈಕೋರ್ಟ್​ನ ಕಾರ್ಯನಿರ್ವಾಹಕ ನ್ಯಾಯಮೂರ್ತಿ ಆದರು. 1956ರಲ್ಲಿ ಹೊಸದಾಗಿ ಸ್ಥಾಪನೆಗೊಂಡ ರಾಜಸ್ಥಾನನ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾದರು. 1967ರಲ್ಲಿ ಭಾರತದ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನೂ ಅಲಂಕರಿಸಿದರು. ಅಂದಿನ ಸಿಜೆಐ ಆಗಿದ್ದ ಸುಬ್ಬಾರಾವ್​ರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇವರು ನೇಮಕಗೊಂಡರು. ಸುಪ್ರೀಂನ ಮುಖ್ಯನ್ಯಾಯಮೂರ್ತಿಯಾಗಿ 10 ತಿಂಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಭಾರತದ ನ್ಯಾಯಾಂಗದ ಇತಿಹಾಸದಲ್ಲಿ ಕಾನೂನು ಪದವಿಯನ್ನ ಪಡೆಯದೇ, ವಕೀಲಿಕೆ ಮಾಡದೆ ಸುಪ್ರೀಂಕೋರ್ಟ್​ ಸಿಜೆಐ ಆಗಿದ್ದ ಮತ್ತು ಇಂಡಿಯನ್ ಸಿವಿಲ್ ಸರ್ವೀಸ್ ಪರೀಕ್ಷೆ ಮಾಡಿದವರೊಬ್ಬರು ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಿದ ಉದಾಹರಣೆ ಅಂದ್ರೆ ಅದು ಜಸ್ಟೀಸ್ ವಾಂಚೂ ಮಾತ್ರ ಎನ್ನುತ್ತದೆ ಇತಿಹಾಸದ ದಾಖಲೆಗಳು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *