ಅವಳಿ ಸಹೋದರಿಯರನ್ನು ಮದುವೆಯಾಗಿದ್ದ ವರನಿಗೆ ಸಂಕಷ್ಟ – ಮದುಮಗ ಅತುಲ್ ವಿರುದ್ಧ ಕೇಸ್ ಜಡಿದ ಪೋಲಿಸರು : ಕಾರಣವೇನು ಗೊತ್ತಾ…!?

ಅವಳಿ ಸಹೋದರಿಯರನ್ನು ಮದುವೆಯಾಗಿದ್ದ ವರನಿಗೆ ಸಂಕಷ್ಟ – ಮದುಮಗ ಅತುಲ್ ವಿರುದ್ಧ ಕೇಸ್ ಜಡಿದ ಪೋಲಿಸರು : ಕಾರಣವೇನು ಗೊತ್ತಾ…!?

ನ್ಯೂಸ್ ಆ್ಯರೋ : ಮುಂಬೈನಲ್ಲಿ ಐಟಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಅವಳಿ ಸಹೋದರಿಯರು ಇತ್ತೀಚೆಗಷ್ಟೇ ಅತುಲ್ ಹೆಸರಿನ ಒಂದೇ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಭಾರಿ ಸುದ್ದಿಯಲ್ಲಿದ್ದರೆ, ಅತ್ತ ಮುಂಬೈ ಪೋಲಿಸರು‌ ಅತುಲ್ ವಿರುದ್ಧ ಕೇಸ್ ಜಡಿದಿದ್ದಾರೆ‌.


ಅವಳಿ ಸಹೋದರಿಯರು ಮಂದಹಾಸ ಬೀರುತ್ತಾ ವರ ಅತುಲ್ಗೆ ಹಾರ ಹಾಕುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅತುಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೊದಲ ಸಂಗಾತಿಯು ಬದುಕಿರುವಾಗ ಅಥವಾ ಮೊದಲು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸದೆ ಮರುಮದುವೆಯಾಗುವುದು ಕಾನೂನುಬಾಹಿರ ಎಂಬ ಆಧಾರದ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.ಕೆಲವು ವರದಿಗಳ ಪ್ರಕಾರ ಅತುಲ್ ಈಗಾಗಲೇ ಹಲವು ಮದುವೆಗಳಾಗಿದ್ದಾನೆಂದು ಆರೋಪಿಸಲಾಗಿದೆ. ಪ್ರಸ್ತುತ ನಡೆದ ಮದುವೆ ವಿಚಾರ ತಿಳಿದ ಕೂಡಲೇ ಮೊದಲ ಪತ್ನಿ ಅತುಲ್ ವಿರುದ್ಧ ದೂರು ದಾಖಲಿಸಿರುವುದಾಗಿಯೂ ವರದಿಯಾಗಿದೆ.ಅಲ್ಲದೆ, ಮಹಾರಾಷ್ಟ್ರದ ಮಹಿಳಾ ಆಯೋಗವು ಅತುಲ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ. ಆದರೆ, ಅವಳಿ ಸಹೋದರಿಯೇ ಸ್ವಇಚ್ಛೆಯಿಂದ ಅತುಲ್ನನ್ನು ಮದುವೆ ಆಗಿದ್ದರೆ, ಕಾನೂನಿನಲ್ಲಿ ಖಂಡಿತವಾಗಿಯೂ ಅತುಲ್ಗೆ ವಿನಾಯಿತಿ ನೀಡಬೇಕೆಂದು ಕೆಲವರು ಆಗ್ರಹಿಸಿದ್ದಾರೆ.ವಿಡಿಯೋ ವೈರಲ್ ಆದ ಬೆನ್ನಲ್ಲೇ ಮದುವೆಯ ಕಾನೂನುಬದ್ಧತೆ ಮತ್ತು ನೈತಿಕತೆಯನ್ನು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಇನ್ನು ಕೆಲವರು ಇದಪ್ಪಾ ಅದೃಷ್ಟ ಅಂತಾ ಬಗೆಬಗೆಯ ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅಂದಹಾಗೆ ಅವಳಿ ಸಹೋದರಿಯ ಹೆಸರು ಪಿಂಕಿ ಎಂ.ಪಡಗಾಂವ್ಕರ್ ಮತ್ತು ರಿಂಕಿ ಎಂ.ಪಡಗಾಂವ್ಕರ್. ಇವರು ಮುಂಬೈನಲ್ಲಿ ಟೆಕ್ಕಿಗಳಾಗಿದ್ದಾರೆ. ಚಿಕ್ಕಂದಿನಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದ ಕಾರಣ, ಒಬ್ಬರನ್ನೊಬ್ಬರು ಬಿಟ್ಟು ದೂರ ಇರಲಾಗದೇ ಇಬ್ಬರು ಸಹೋದರಿಯರು ಅತುಲ್ ಅವರನ್ನು ಮದುವೆಯಾಗಲು ನಿರ್ಧರಿಸಿದರು ಎಂದು ವರದಿಯಾಗಿದೆ.ಅತುಲ್ ಕೂಡ ಮೊದಲಿನಿಂದಲೂ ಅವಳಿ ಸಹೋದರಿಯರ ಕುಟುಂಬಕ್ಕೆ ಪರಿಚಿತನಾಗಿದ್ದ. ಕೆಲ ದಿನಗಳ ಹಿಂದೆ ತಂದೆ ನಿಧನರಾದ ಹಿನ್ನೆಲೆಯಲ್ಲಿ ಸಹೋದರಿಯರು ತಾಯಿಯೊಂದಿಗೆ ವಾಸವಾಗಿದ್ದರು. ಯಾವಾಗ ತಾಯಿಗೂ ಅನಾರೋಗ್ಯ ಕಾಡಲು ಆರಂಭಿಸಿತೋ ಆಗ ಅತುಲ್ ಕಾರಿನಲ್ಲಿ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿಕೊಂಡು ಬರುತ್ತಿದ್ದರು. ಈ ವೇಳೆ ಅತುಲ್ ಅವಳಿ ಸಹೋದರಿಯರ ಜೊತೆ ತುಂಬಾ ಸಲುಗೆ ಬೆಳೆಸಿಕೊಂಡಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *