ಗೂಗಲ್‌ ಫೋಟೋಸ್‌ನಿಂದ ಅಗತ್ಯವಾದ ಚಿತ್ರ ಡಿಲೀಟ್‌ ಆಯಿತೇ?; ಚಿಂತೆ ಬಿಡಿ, ಸುಲಭವಾಗಿ ವಾಪಸ್‌ ಪಡೆಯುವ ಟಿಪ್ಸ್‌ ಇಲ್ಲಿದೆ.

ಗೂಗಲ್‌ ಫೋಟೋಸ್‌ನಿಂದ ಅಗತ್ಯವಾದ ಚಿತ್ರ ಡಿಲೀಟ್‌ ಆಯಿತೇ?; ಚಿಂತೆ ಬಿಡಿ, ಸುಲಭವಾಗಿ ವಾಪಸ್‌ ಪಡೆಯುವ ಟಿಪ್ಸ್‌ ಇಲ್ಲಿದೆ.

ನ್ಯೂಸ್‌ಆ್ಯರೋ: ಮೊಬೈಲ್‌ಗಳಲ್ಲಿ ಸ್ಟೋರೇಜ್ ಕಡಿಮೆ ಇದ್ದಾಗ ಗೂಗಲ್‌ ಫೋಟೋಸ್‌ನಲ್ಲಿ ಫೋಟೊ, ವಿಡಿಯೋಗಳನ್ನು ಸಂಗ್ರಹಿಸುವುದು ಎಲ್ಲರಿಗೂ ಗೊತ್ತೆ ಇದೆ. ಆದರೆ, ಕೆಲವೊಂದು ಬಾರಿ ಆಕಸ್ಮಿಕವಾಗಿ ಫೋಟೋ, ವಿಡಿಯೋ ಡಿಲೀಟ್ ಆದಾಗ ಚಡಪಡಿಸುತ್ತೇವೆ. ಆದರೆ, ಅದನ್ನು ಸುಲಭವಾಗಿ ಮರಳಿ ಪಡೆಯಲು ಸಾಧ್ಯ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ.

ಆಂಡ್ರಾಯ್ಡ್ ಅಥವಾ ಆ್ಯಪಲ್ ಐಫೋನ್‌ಗಳಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಕ್ಲೌಡ್‌ನಲ್ಲಿ ಅಂದರೆ ಆನ್‌ಲೈನ್ ಸರ್ವರ್‌ನಲ್ಲೇ ಉಳಿಸಲು ಗೂಗಲ್ ಒಂದೊಳ್ಳೆಯ ಆಯ್ಕೆಯನ್ನು ಈಗಾಗಲೇ ನೀಡಿದ್ದು, ಬಹುತೇಕ ಮಂದಿ ಬಳಸುತ್ತಾರೆ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್‌ ಫೋಟೋಸ್‌ ಮೊದಲೇ ಅಳವಡಿಕೆಯಾಗಿದ್ದರೆ, ಐಫೋನ್‌ನಲ್ಲಿ ನಾವೇ ಆ್ಯಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಕ್ಲೌಡ್‌ನಲ್ಲಿ ನಾವು ಶೇಖರಿಸಿದ ಫೋಟೋಗಳು, ವಿಡಿಯೋಗಳು ಆಕಸ್ಮಿಕವಾಗಿ ಡಿಲೀಟ್‌ ಆದರೆ ಗ್ರಾಹಕರು ತಬ್ಬಿಬ್ಬಾಗುವುದು ಸಹಜ. ಆದರೆ, ಅದನ್ನು ವಾಪಸ್‌ ಪಡೆಯುವ ಮಾಹಿತಿ ನಿಮಗಿದ್ದರೆ ಚಿಂತಿಸುವ ಅಗತ್ಯವೂ ಇರುವುದಿಲ್ಲ. ಯಾಕೆಂದರೆ ಗೂಗಲ್ ಫೋಟೋಸ್​ನಲ್ಲಿ ಡಿಲೀಟ್ ಆದ ಫೋಟೋಗಳನ್ನು ರಿಸ್ಟೋರ್‌ ಮಾಡುವುದಕ್ಕೆ ಅವಕಾಶವಿದೆ. 30 ಅಥವಾ 60 ದಿನಗಳ ಹಿಂದೆ ಫೋಟೋ ಅಥವಾ ವಿಡಿಯೋ ಡಿಲೀಟ್‌ ಮಾಡಿದರೆ ಮತ್ತೆ ವಾಪಸ್‌ ಪಡೆಯಲು ಸಾಧ್ಯವಾಗುವುದಿಲ್ಲ.

ರಿಕವರಿ ಹೇಗೆ?

  • ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಗೂಗಲ್ ಫೋಟೋಸ್ ಆ್ಯಪ್ ತೆರೆಯಬೇಕು
  • ಪರದೆಯ ಕೆಳಭಾಗದಲ್ಲಿ ಲೈಬ್ರರಿ ಟ್ಯಾಬ್ ಇದೆ, ಅದರ ಮೇಲೆ ಟ್ಯಾಪ್ ಮಾಡಬೇಕು
  • ನಂತರ ಮೇಲ್ಭಾಗದಲ್ಲಿ ಟ್ರಾಶ್ ಫೋಲ್ಡರ್ ಅನ್ನು ಕಾಣಬಹುದು. ನಿಮ್ಮ ಎಲ್ಲಾ ಅಳಿಸಿದ ಫೋಟೋಗಳನ್ನು ಪರೀಕ್ಷಿಸಲು ಅದರ ಮೇಲೆ ಟ್ಯಾಪ್ ಮಾಡಿ
  • ರಿಸ್ಟೋರ್‌ ಮಾಡಲು ಬಯಸಿದರೆ, ಫೋಟೋ ಅಥವಾ ವಿಡಿಯೋವನ್ನು ಟಚ್‌ ಮಾಡಿ ಮತ್ತು ಪ್ರೆಸ್‌ ಮಾಡಿ. ನಂತರ, ರಿಸ್ಟೋರ್‌ ಟ್ಯಾಪ್ ಮಾಡಿ. ಫೋಟೋ ಅಥವಾ ವಿಡಿಯೋ ಮರಳಿ ಬರುತ್ತದೆ

ನೀವು ಐಫೋನ್ ಬಳಸುತ್ತಿದ್ದರೆ, ಗೂಗಲ್ ಫೋಟೋಗಳಿಂದ ಡಿಲೀಟ್ ಆದ ಫೋಟೋಗಳನ್ನು ರಿಸ್ಟೋರ್ ಮಾಡಬಹುದು. ಇದಕ್ಕಾಗಿ, ಗೂಗಲ್ ಫೋಟೋ ಒಪನ್ ಮಾಡಿದ ನಂತರ, ಎಡಭಾಗದಲ್ಲಿರುವ ಹ್ಯಾಂಬರ್ಗರ್ ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ಬಾಕ್ಸ್ ಅನ್ನು ಚೆಕ್ ಮಾಡಿ. ಅದರ ನಂತರ, 3 ಡಾಟ್ ಗಳನ್ನು ಹೊಂದಿರುವ ಐಕಾನ್ ಮೇಲೆ ಕ್ಲಿಕ್ ಮಾಡಿ. ಇದಾದ ನಂತರ ಸೆಕೆಲ್ಟ್ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *