ಸಮ್ಮತಿಯ ಸೆಕ್ಸ್ ವಯೋಮಿತಿ 18 ರಿಂದ 16ವರ್ಷಕ್ಕೆ‌ ಇಳಿಕೆ – ಹೈಕೋರ್ಟ್ ನೀಡಿದ ತೀರ್ಪಿನ ಉದ್ದೇಶ ಏನ್ ಗೊತ್ತಾ?

ಸಮ್ಮತಿಯ ಸೆಕ್ಸ್ ವಯೋಮಿತಿ 18 ರಿಂದ 16ವರ್ಷಕ್ಕೆ‌ ಇಳಿಕೆ – ಹೈಕೋರ್ಟ್ ನೀಡಿದ ತೀರ್ಪಿನ ಉದ್ದೇಶ ಏನ್ ಗೊತ್ತಾ?

ನ್ಯೂಸ್ ಆ್ಯರೋ : ದೇಶದಾದ್ಯಂತ ಹೆಣ್ಣು ಮಕ್ಕಳ ಮೇಲೆ ಹಾಗೂ ಅಪ್ರಾಪ್ತರ ಮೇಲೆ ನಿರಂತರವಾಗಿ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ‌. ಈ ನಡುವೆ ಮಧ್ಯಪ್ರದೇಶ ಹೈಕೋರ್ಟಿನ (MP high court) ಗ್ವಾಲಿಯರ್ ಪೀಠವು ಪುರುಷ ಹಾಗೂ ಮಹಿಳೆಯ ನಡುವಿನ ಸಮ್ಮತಿಯ ಸೆಕ್ಸ್ ವಯೋಮಿತಿಯನ್ನು (Age Of Consent) 18 ರಿಂದ 16ಕ್ಕೆ ಇಳಿಸಿ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಹೈಕೋರ್ಟ್ ಈ ನಿರ್ಧಾರಕ್ಕೆ ಬರಲು ಕಾರಣವೇನು? ಕೋರ್ಟ್ ತೀರ್ಪಿನಲ್ಲಿ ಏನಿದೆ? ಬನ್ನಿ ನೋಡೋಣ.

ಪ್ರಕರಣದ ಹಿನ್ನೆಲೆ

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ದೀಪಕ್ ಅಗರ್ವಾಲ್ ಈ ಆದೇಶ ನೀಡಿದ್ದಾರೆ. ಮಧ್ಯಪ್ರದೇಶದ ಹಾರುಲ್ ಜಟವ್ ಎಂಬ ವ್ಯಕ್ತಿ 18 ವರ್ಷ ಪ್ರಾಯದ ಯುವತಿಯೊಂದಿಗೆ ಆಕೆಯ ಸಮ್ಮತಿಯ ಮೇರೆಗೆ ಲೈಂಗಿಕ ಕ್ರಿಯೆ ನಡೆಸಿದ್ದ. ಆದರೆ 2022 ಜುಲೈ ತಿಂಗಳಲ್ಲಿ ಆ ಯುವತಿ ರಾಹುಲ್ ಜಟವ್ ಮೇಲೆ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಳು. ಆದರೆ ವಿಚಾರಣೆ ನಡೆಸಿದ ಹೈಕೋರ್ಟ್ ಆರೋಪಿಯು ನಿರ್ದೋಷಿ ಮತ್ತು ಆತನ ಮೇಲಿನ ಕೇಸ್ ಹಿಂತೆಗೆಯಲು ಪೊಲೀಸ್ ಠಾಣೆಗೆ ಆದೇಶ ನೀಡಿದೆ‌.

ಹೈಕೋರ್ಟ್ ಈ ತೀರ್ಪು ನೀಡಲು ಕಾರಣವೇನು?

ತನ್ನ ತೀರ್ಪಿನ ಬಗ್ಗೆ ಸ್ಪಷ್ಟನೆ ನೀಡಿದ ಹೈಕೋರ್ಟ್ ನ್ಯಾಯಮೂರ್ತಿ ದೀಪಕ್ ಅಗರ್ವಾಕ್, ‘ಸೋಶಿಯಲ್ ಮೀಡಿಯಾಗಳ ಮೂಲಕ ಪರಿಚಯವಾಗುವ ಹಾಗೂ ಪರಸ್ಪರ ಸಲುಗೆಯಿಂದ ವರ್ತಿಸುವ ಹುಡುಗ – ಹುಡುಗಿಯರು ವಯೋಸಹಜವಾಗಿ ಏರ್ಪಡುವ ತಮ್ಮ ಆಸೆಗಳನ್ನು, ಬೇಕು ಬೇಡಗಳನ್ನು ನಿರ್ಧರಿಸಿಕೊಳ್ಳುವಷ್ಟು ಅರ್ಹರಾಗಿರುತ್ತಾರೆ. 16ನೇ ವಯಸ್ಸು ತಲುಪುವ ವೇಳೆ ಸಹಜವಾಗಿಯೇ ಮಕ್ಕಳಲ್ಲಿ ಆ ಬೌದ್ಧಿಕತೆ ಬೆಳವಣಿಗೆಯಾಗಿರುತ್ತದೆ’ ಎಂದಿದ್ದಾರೆ.

ಮುಂದುವರೆದು, ‘ಈ ಹಿಂದೆ ಸಮ್ಮತಿಯ ಸೆಕ್ಸ್ ವಯೋಮಿತಿಯನ್ನು 18ವರ್ಷಕ್ಕೆ ಹೆಚ್ಚಿಸಲಾಗಿತ್ತು. ಇದು ಸಮಾಜದಲ್ಲಿ ಏರುಪೇರುಗಳನ್ನು ಸೃಷ್ಟಿಸುತ್ತದೆ. 16ನೇ ವಯಸ್ಸಿನ ನಂತರ ಸಹಜವಾಗಿ ಆ ಸಂಬಂಧ ಏರ್ಪಡುತ್ತದೆ. ಎಲ್ಲಾ ಪ್ರಕರಣಗಳಲ್ಲಿ ಹುಡುಗರನ್ನೇ ತಪ್ಪಿತಸ್ಥರು ಎನ್ನಲಾಗದು. ಕೆಲವು ಯುವತಿಯರು ದೈಹಿಕ ಸಂಬಂಧ ಬೆಳೆಸಿ ಕೊನೆಗೆ ಕಾಯ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಹೀಗಾಗಿ ಈ ಮಿತಿಯನ್ನು 16 ವರ್ಷಕ್ಕೆ ಇಳಿಸುವುದು ಸೂಕ್ತ‌. ಐಪಿಸಿ ಸೆಕ್ಷನ್ 375 ಇದನ್ನೇ ಹೇಳುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *