ಮುನಿರತ್ನ HIV ಸಿರಿಂಜ್ ಕಹಾನಿ: ಸತ್ಯ ಯಾವುದು ಮಿಥ್ಯ ಯಾವುದು..?
ಬೆಂಗಳೂರು: ಸದ್ಯಕ್ಕೆ ಇಡೀ ರಾಜ್ಯದಲ್ಲಿ ಸದ್ದು ಮಾಡ್ತಿರೋ ಸುದ್ದಿ ಅಂದ್ರೆ ಬಿಜೆಪಿ ಶಾಸಕ ಮುನಿರತ್ನ ಅವರ HIV ಸ್ಪ್ರೆಡ್ ಮಾಡುವ ಸಿರಿಂಜ್ ಕಹಾನಿ. ಹನಿಟ್ರ್ಯಾಪ್ , ಜಾತಿನಿಂದನೆ ಸೇರಿದಂತೆ ಬಹಳಷ್ಟು ಪ್ರಕಣಗಳಲ್ಲಿ ಆರೋಪಿಯಾಗಿರುವ ಮುನಿರತ್ನ ಇಂಥದ್ದೊಂದು ಎದೆನಡುಗಿಸುವ ಪ್ಲ್ಯಾನ್ ಮಾಡಿದ್ದರೆಂದು ಆತನ ಆಪ್ತನ ಹೇಳಿಕೆ ಕೇಳಿ ಎಲ್ಲರಿಗು ನಿಂತ ನೆಲವೆ ಕುಸಿದಂತಾಗಿದೆ. ಇಷ್ಟಕ್ಕೂ ಈ HIV ಸಿರಿಂಜ್ ತಮ್ಮದೇ ಪಕ್ಷದ ನಾಯಕರಾದ R ಅಶೋಕ್ ಗೆ ಚುಚ್ಚೋ ಸ್ಕೆಚ್ ಹಾಕಿದ್ರಂತೆ . ಹೀಗಾಗಿ ಬಿಜೆಪಿಯಿಂದ ಗೇಟ್ ಪಾಸ್ ಕೊಡೋ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ .
ಆರ್ ಅಶೋಕ್ ಬಿಜೆಪಿಯ ಪ್ರಮುಖ ರಾಜಕೀಯ ಮುಖಂಡ ಹಾಗೂ ಪ್ರಸ್ತುತ ವಿಪಕ್ಷ ನಾಯಕನೂ ಹೌದು. ಆದರೆ ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದು ಶಾಸಕರಾಗಿರುವ ಮುನಿರತ್ನ ಬಿಜೆಪಿಯಲ್ಲಿ ಈಗ ಪ್ರಬಲ ನಾಯಕರಾಗಿ ಬೆಳೆಯುತ್ತಿದ್ದರು.ಆದ್ರೆ ಇದಕ್ಕೆ ಅಶೋಕ್ ಅಡ್ಡ ಬರುತ್ತಿದ್ದರೇನೊ ಗೊತ್ತಿಲ್ಲ, ಹೀಗಾಗಿ ಅಶೋಕ್ ರನ್ನು ಹಣಿಯಲು ಎಚ್‌ಐವಿ ಇಂಜೆಕ್ಷನ್ ರೆಡಿ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ.
ಇನ್ನು ಮುನಿರತ್ನ HIV ಇಂಜೆಕ್ಟ್ ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದ ಅನ್ನೊ ಎದೆಯೊಡೆದು ಹೋಗುವ ಆರೋಪಗಳು ಕೇಳಿಬಂದ ಬೆನ್ನಲ್ಲೇ ಬಿಜೆಪಿ ನಾಯಕರು ಹೈ ಅಲರ್ಟ್ ಆಗಿದ್ದಾರೆ. ಇದು ಸಾಬೀತಾದರೆ ಪಕ್ಷಕ್ಕೆ ಭಾರೀ ಡ್ಯಾಮೇಜ್ ಆಗಲಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಮುನಿರತ್ನ ಪ್ರಕರಣ ಇಟ್ಟುಕೊಂಡು ಬಿಜೆಪಿ ಕಾಲೆಳೆಯುತ್ತಿದ್ದಾರೆ.
ಹೀಗಾಗಿ ಮುನಿರತ್ನರನ್ನು ಪಕ್ಷದಿಂದಲೇ ಉಚ್ಛಾಟಿಸಲು ತಯಾರಿ ನಡೆದಿದೆ ಎನ್ನಲಾಗಿದೆ. ಮುನಿರತ್ನರನ್ನು ಪಕ್ಷದಿಂದ ಉಚ್ಛಾಟಿಸುವ ಮೂಲಕ ಪಕ್ಷಕ್ಕೆ ಕಳಂಕ ಬಾರದಂತೆ ನೋಡಿಕೊಳ್ಳಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಆರ್ ಅಶೋಕ್ ಕೂಡಾ ಮುನಿರತ್ನಗೆ ನಮ್ಮ ಬೆಂಬಲವಿಲ್ಲ ಎಂದಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಮುನಿರತ್ನ ವಿಕೆಟ್ ಬಹುತೇಕ ಔಟ್ ಆಗಿದ್ದು ಅಧಿಕೃತ ಆದೇಶ ಹೊರಬೀಳಬೇಕಿದೆ..
Leave a Comment