ಆರ್ ಸಿಬಿ ಟೀಮ್ ಅನ್ನೇ ಖರೀದಿಸಲು ಮುಂದಾದ ಫ್ಯಾನ್ಸ್; ಯಾಕೆ ಗೊತ್ತ ? ಇಲ್ಲಿದೆ ನೋಡಿ ದೊಡ್ಡ ಕಾರಣ !
ನ್ಯೂಸ್ ಆ್ಯರೋ: ಮೆಗಾ ಆಕ್ಷನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಆಟಗಾರರನ್ನ ಖರೀದಿಸಿತ್ತು. ಇದು ಕನ್ನಡಿಗರಿಗೆ ಅಷ್ಟೇನೂ ಖುಷಿ ತಂದಿರಲಿಲ್ಲ. ಹೀಗಾಗಿಯೇ ಆರ್‌ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಸಿಡಿದ ಅಭಿಮಾನಿಗಳು ಇಡೀ ತಂಡವನ್ನ ಖರೀದಿ ಮಾಡಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿ ಮಾಡಲು ‘ಆಲ್ ಇಂಡಿಯಾ RCB ಟೀಮ್ ಫ್ಯಾನ್ಸ್ ಅಸ್ಸೋಸಿಯೆಷನ್’ ಪ್ಲಾನ್ ಮಾಡಿದೆ. ಈ ಬಗ್ಗೆ ಈಗಾಗಲೇ ಯೋಜನೆ ರೂಪಿಸಿದೆ. ಸದ್ಯ ಮಂಡ್ಯದ ಮಳವಳ್ಳಿಯ ಆರ್‌ಸಿಬಿ ಫ್ಯಾನ್ಸ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಟೀಮೂ ನಮ್ಮದೇ, ಕಪ್ಪು ನಮ್ಮದೇ ಎಂಬ ಧ್ಯೇಯವಾಕ್ಯ ಇಟ್ಟುಕೊಂಡು ಇವರು ಆರ್‌ಸಿಬಿ ಮಾಲೀಕತ್ವ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಪ್ಲಾನ್ ಅಸಾಧ್ಯವಾದರೂ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮೊನ್ನೆ ನಡೆದ ಆಕ್ಷನ್ನಲ್ಲಿ ಉತ್ತಮ ಪ್ಲೇಯರ್ಸ್ ಆಯ್ಕೆ ಮಾಡಿಕೊಳ್ಳುವಳ್ಳಿ ಆರ್‌ಸಿಬಿ ಮ್ಯಾನೇಜ್ಮೇಂಟ್ ಎಡವಿದೆ ಎಂದು ಹೇಳಲಾಗುತ್ತಿದೆ. ಕೆ.ಎಲ್ ರಾಹುಲ್ ಸೇರಿದಂತೆ ಪ್ರಮುಖ ಆಟಗಾರರನ್ನ ಖರೀದಿ ಮಾಡದಿದ್ದಕ್ಕೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
10 ಲಕ್ಷ ಆರ್‌ಸಿಬಿ ಅಭಿಮಾನಿಗಳಿಂದ ತಲಾ 10 ಸಾವಿರದಂತೆ ಷೇರು ಸಂಗ್ರಹ ಮಾಡಲಾಗುವುದು. ಸಂಗ್ರಹವಾಗುವ 1,000 ಕೋಟಿ ಹಣದಲ್ಲಿ ಇಡೀ ತಂಡವನ್ನ ಖರೀದಿ ಮಾಡುತ್ತಾರಂತೆ. ಅಭಿಮಾನಿಗಳ ವೋಟಿಂಗ್ ಮೂಲಕ ಆಟಗಾರರನ್ನ ಖರೀದಿ ಮಾಡಲಾಗುತ್ತದೆ. ಇದರಲ್ಲಿನ ಪ್ರತಿ ಸದಸ್ಯರಿಗೆ ಸೀಸನ್ನಲ್ಲಿ ಆರ್‌ಸಿಬಿ ಆಡುವ 1 ಪಂದ್ಯ ನೋಡಲು ಉಚಿತ ಅವಕಾಶ ಮಾಡಿಕೊಡಲಾಗುತ್ತದೆ. ತಂಡವನ್ನ ಆಯ್ಕೆ ಮಾಡಲು ಕೈ ಜೋಡಿಸಿ ಎಂದು ಮನವಿ ಮಾಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸುತ್ತಿದೆ.
ವೈರಲ್ ಆದ ಪೋಸ್ಟರ್ನಲ್ಲಿ ಏನಿದೆ?
- ಹಾಲಿ RCB ಮಾಲೀಕರಿಂದ ತಂಡವನ್ನು ಅಭಿಮಾನಿಗಳ ಸಂಘಕ್ಕೆ ಖರೀದಿ ಮಾಡಿಕೊಳ್ಳುವ ಮಹತ್ವದ ಗುರಿಯನ್ನು ಹೊಂದಲಾಗಿದೆ.
- 10 ಲಕ್ಷ ಅಭಿಮಾನಿಗಳಿಂದ ತಲಾ 10 ಸಾವಿರ ರೂ. ಹಣವನ್ನು ಚೇರಿನ ರೂಪದಲ್ಲಿ ಸಂಗ್ರಹಿಸುವ ಮೂಲಕ 1000 ಕೋಟಿ ಹಣ ಸಂಗ್ರಹಿಸುವ ಗುರಿ.
- ಸಂಗ್ರಹವಾದ ಹಣದಿಂದ RCB ತಂಡದ ಮಾಲೀಕತ್ವವನ್ನು ಅಭಿಮಾನಿಗಳ ಸಂಘವೇ ಖರೀದಿಸಿ ತಂಡದಲ್ಲಿ ಯಾವ್ಯಾವ ಆಟಗಾರರನ್ನು ಆಡಿಸಬೇಕೆಂಬುದನ್ನು ಅಭಿಮಾನಿಗಲೇ ವೋಟ್ ಮೂಲಕ ಆಯ್ಕೆ ಮಾಡಿ ಅಂತಹ ಆಟಗಾರರನ್ನು ನಿಯಮದಂತೆ ಬಿಡ್ಡಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳುವುದೇ ಸಂಘದ ಉದ್ದೇಶ.
- ಅಭಿಮಾನಿಗಳ ಸಂಘದ 1 ಲಕ್ಷ ಸದಸ್ಯರಲ್ಲಿ 10 ಮಂದಿಯನ್ನು 2 ವರ್ಷಕ್ಕೊಮ್ಮೆ ಚುನಾವಣೆಯ ಮೂಲಕ ಆಯ್ಕೆ ಮಾಡಿ ಬಿಡ್ಡಿಂಗ್‌ನಲ್ಲಿ ತಂಡವನ್ನು ಆಯ್ಕೆ ಮಾಡುವ ಅಧಿಕಾರ ನೀಡುವುದು.
- ಸಂಘದ ಪ್ರತಿ ಸದಸ್ಯರಿಗೂ ಒಂದು ಬಾರಿ RCB ಆಡುವ ಯಾವುದಾದರೂ ಪಂದ್ಯವನ್ನು ವೀಕ್ಷಿಸಲು ಉಚಿತವಾಗಿ ಅವಕಾಶ ನೀಡಲಾಗುವುದು.
- ಆಯ್ಕೆ ಮಂಡಲಿಯ ಬೇಜವಾಬ್ದಾರಿ ವಿರುದ್ಧ ಮಳವಳ್ಳಿ RCB ಅಭಿಮಾನಿಗಳಿಂದ/ ಕ್ರಾಂತಿಕಾರಿ ನಿರ್ಧಾರ. ನಮ್ಮ ತಂಡ. ನಮ್ಮದೇ ಮಾಲೀಕತ್ವ ಎಂದು ಕರೆ ಕೊಟ್ಟಿದ್ದಾರೆ.
Leave a Comment