ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಭರ್ಜರಿ ಗುಡ್‌ ನ್ಯೂಸ್; ‘ಮ್ಯಾಕ್ಸ್’ ಸಿನಿಮಾ ರಿಲೀಸ್‌‌ ಡೇಟ್ ಅನೌನ್ಸ್

Max Update
Spread the love

ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರದ ಬಿಗ್ ಅಪ್‌ಡೇಟ್ ಅನೌನ್ಸ್ ಆಗಿದೆ. ಸುದೀಪ್ ನಟನೆಯ ಈ ಚಿತ್ರದ ನಿರೀಕ್ಷೆ ಜಾಸ್ತಿನೇ ಇದೆ. ರಿಲೀಸ್ ಯಾವಾಗ ಅನ್ನುವ ಕುತೂಹಲ ಕೂಡ ಇದೆ. ಆ ಹಿನ್ನೆಲೆಯಲ್ಲಿಯೇ ಈಗ ಕಾತರದಿಂದಲೇ ಕಾಯುತ್ತಿರೋ ಫ್ಯಾನ್ಸ್‌ಗೆ ಕಿಚ್ಚನ ಮ್ಯಾಕ್ಸ್ ಸಿನಿಮಾ ಟೀಮ್ ಬಿಗ್ ನ್ಯೂಸ್ ಕೊಟ್ಟಿದೆ. ಈ ಮೂಲಕ ಅಭಿಮಾನಿಗಳು ಹಬ್ಬ ಮಾಡೋಕೆ ದಾರಿ ಮಾಡಿಕೊಟ್ಟಿದೆ.

ಹೌದು, ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದೇ ವರ್ಷ ಡಿಸೆಂಬರ್ -25 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಎಲ್ಲೆಡೆ ಈ ಚಿತ್ರ ರಿಲೀಸ್ ಆಗೋದು ಪಕ್ಕಾ ಆಗಿದೆ.

ಡಿಸೆಂಬರ್ 25 ರಂದು ಕಿಚ್ಚನ ಈ ಚಿತ್ರ ಎಲ್ಲೆಡೆ ರಿಲೀಸ್ ಆಗುತ್ತಿದೆ. ಬಹು ಕೋಟಿ ಮತ್ತು ಬಹು ನಿರೀಕ್ಷಿತ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲಗಳೂ ಇವೆ. ಸಿನಿಮಾದ ಟೀಸರ್ ಮತ್ತು ಹಾಡುಗಳು ಈಗಾಗಲೇ ಕುತೂಹಲ ಮೂಡಿಸಿವೆ.

ಆದರೆ, ಕಿಚ್ಚನ ಈ ಚಿತ್ರ ಡಿಸೆಂಬರ್ -26 ರಂದು ರಿಲೀಸ್ ಆಗುತ್ತದೆ ಅನ್ನುವ ಸುದ್ದಿ ಇತ್ತು. ಈಗ ಅದು ಡಿಸೆಂಬರ್ 25 ಅಂತ ಕನ್ಫರ್ಮ್ ಆಗಿದೆ. ಸಿನಿಮಾ ತಂಡವೇ ಈ ಮಾಹಿತಿಯನ್ನ ಅಧಿಕೃತವಾಗಿಯೆ ಕೊಟ್ಟಿದೆ.

ಮ್ಯಾಕ್ಸ್ ಚಿತ್ರದ ರಿಲೀಸ್ ಡೇಟ್‌ ಅನೌನ್ಸ್ ಮಾಡಲು ಒಂದು ವಿಶೇಷ ವಿಡಿಯೋ ಮಾಡಿದೆ. ಈ ವಿಡಿಯೋದ ಕೊನೆಯಲ್ಲಿ ರಿಲೀಸ್ ಡೇಟ್ ಇದೆ. ಅಲ್ಲಿಗೆ ಡಿಸೆಂಬರ್ 25 ರಂದು ನೀವು ದೊಡ್ಡ ಹಬ್ಬ ಮಾಡಿ ಅಂತಲೇ ಕಿಚ್ಚ ಸುದೀಪ್ ಈಗ ತಮ್ಮ ಫ್ಯಾನ್ಸ್‌ಗೆ ಹೇಳಿದಂತೇನೆ ಇದೆ.

ಈ ಮೂಲಕ ಕಿಚ್ಚನ ಒಂದು ಚಿತ್ರಕ್ಕಾಗಿಯೇ ಕಾದು ಕುಳಿತ ಫ್ಯಾನ್ಸ್‌ಗೆ ಗುಡ್‌ ನ್ಯೂಸ್ ಸಿಕ್ಕಿದೆ. ಕಳೆದ ಎರಡು ವರ್ಷದಿಂದಲೂ ಕಾದು ಕುಳಿತ ಫ್ಯಾನ್ಸ್‌ಗೆ ಸುದೀಪ್ ಈಗ ಒಳ್ಳೆ ಸುದ್ದಿಯನ್ನೆ ಕೊಟ್ಟಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!