ಮೈಸೂರು ದಸರಾದಲ್ಲಿ ಸ್ತಬ್ಧ ಚಿತ್ರಗಳ ಸಾಲು : ಈ ಬಾರಿ ಯಾವ್ಯಾವ ಸ್ತಬ್ದ ಚಿತ್ರಗಳಿರಲಿವೆ ಗೊತ್ತೇ?

51 tableaus
Spread the love

ನ್ಯೂಸ್ ಆ್ಯರೋ: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸಂಭ್ರಮ ಮನೆ ಮಾಡಿದ್ದು, ಜಂಬೂಸವಾರಿ ಕಣ್ತುಂಬಿಕೊಳ್ಳಲು ನೂರಾರು ಮಂದಿ ಕಾತುರದಿಂದ ಕಾಯುತ್ತಿದ್ದಾರೆ. ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಇಂದು (ಅಕ್ಟೋಬರ್ 12, ಶನಿವಾರ) ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವ ಸ್ತಬ್ಧ ಚಿತ್ರಗಳ ವಿರಗಳನ್ನು ಇಲ್ಲಿ ನೀಡಲಾಗಿದೆ. ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ಒಟ್ಟು 51 ಸ್ತಬ್ಧ ಚಿತ್ರಗಳು ಸಾಗಲಿವೆ. ಯಾವ ಜಿಲ್ಲೆಯಿಂದ ಯಾವ ಸ್ತಬ್ಧ ಚಿತ್ರ ಭಾಗವಹಿಸಿದೆ ಎಂಬುದನ್ನು ತಿಳಿಯೋಣ.

  • ಯಾದಗಿರಿ ಜಿಲ್ಲೆ: ತಿಂಥಣಿ ಮೌನೇಶ್ವರ ದೇವಾಲಯ
  • ಕೊಡಗು ಜಿಲ್ಲೆ: ಭೂ ಸಂರಕ್ಷಣೆ, ಹಾರಂಗಿ ಜಲಾಶಯ, ಕಾಫಿ -ಕಾಳುಮೆಣಸು ತೋಟ ಹಾಗೂ ಆನೆ ಕ್ಯಾಂಪ್
  • ರಾಯಚೂರು ಜಿಲ್ಲೆ: ಮುದ್ಗಲ್ ಕೋಟೆ ಮತ್ತು ಗಾಣದಾಳ ಪಂಚಮುಖಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ.
  • ಚಾಮರಾಜನಗರ ಜಿಲ್ಲೆ: ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು
  • ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ: ಕ್ಷೀರ ಭಾಗ್ಯ ಮತ್ತು ಕ್ಷೀರ ಸಂಜೀವಿನಿ ಯೋಜನೆಗಳ ಯಶಸ್ವಿ ಪಥ
  • ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ: ಮೈಸೂರು ಸ್ಯಾಂಡಲ್ ಸೋಪ್ ಕಿರು ಪರಿಚಯ
  • ವಿಜಯನಗರ ಜಿಲ್ಲೆ: ವಿಜಯನಗರ ಸಾಮ್ರಾಜ್ಯದ ವೈಭವ

  • ಬೆಂಗಳೂರು ನಗರ ಜಿಲ್ಲೆ: ರಾಷ್ಟಪಿತ ಮಹಾತ್ಮಗಾಂಧೀಜಿ ಮತ್ತು ವಿಧಾನಸೌಧ
  • ಬೀದರ್ ಜಿಲ್ಲೆ: ಕನ್ನಡ ಪಟ್ಟದೇವರು ಪೂಜ್ಯಶ್ರೀ ಮದ್ ಘನಲಿಂಗ ಚಕ್ರವರ್ತಿ ಚೆನ್ನಬಸವ ಪಟ್ಟದೇವರು
  • ಕೊಪ್ಪಳ ಜಿಲ್ಲೆ: ಕಿನ್ನಾಳ ಕಲೆ, ಶ್ರೀ ಹುಲಿಗಮ್ಮದೇವಿ ದೇವಸ್ಥಾನ, ಹಿರೇಬೆಣಕಲ್ ಶಿಲಾ ಸಮಾಧಿ, ಇಟಗಿಯ ಮಹದೇವ ದೇವಾಲಯ
  • ಪ್ರವಾಸೋದ್ಯಮ ಇಲಾಖೆ: ಒಂದು ರಾಜ್ಯ ಹಲವು ಜಗತ್ತುಗಳು
  • ಡಾಕ್ಟರ್ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ: ನಿಗಮದ ಉತ್ಪನ್ನಗಳ ಮಾದರಿ
  • ಉತ್ತರ ಕನ್ನಡ ಜಿಲ್ಲೆ: ಮುರುಡೇಶ್ವರದ ಬೃಹತ್ ಶಿವನ ಮೂರ್ತಿ
  • ಬೆಂಗಳೂರು ಗ್ರಾಮಾಂತರ ಜಿಲ್ಲೆ: ಪೊಕ್ಕುಂದ/ಹೆಗ್ಗುಂದದ ರಾಮದೇವರ ಬೆಟ್ಟ, ನಿಜಗಲ್ಲು ದುರ್ಗ, ಬಿನ್ನ ಮಂಗಲ ದೇವಸ್ಥಾನ
  • ದಾವಣಗೆರೆ ಜಿಲ್ಲೆ: ನಾವು ಮನುಜರು
  • ಕೋಲಾರ ಜಿಲ್ಲೆ: ವಿಶ್ವವಿಖ್ಯಾತ ಶ್ರೀ ಕೋಟಿಲಿಂಗೇಶ್ವರ ಸ್ವಾಮಿ ದೇವಸ್ಥಾನದ ಪರಿಚಯ
  • ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ: ಕರ್ನಾಟಕ ರೇಷ್ಮೆ ನಮ್ಮ ಹೆಮ್ಮೆ
  • ಕಾರ್ಮಿಕ ಇಲಾಖೆ: ಕಾರ್ಮಿಕರ ಹಿತ ರಕ್ಷಣೆ
  • ಉಡುಪಿ ಜಿಲ್ಲೆ: ಸಾಂಸ್ಕೃತಿಕ ವೈಭವ ಹಾಗೂ ಕರಾವಳಿಯ ಸೊಬಗು
  • ಶಿವಮೊಗ್ಗ ಜಿಲ್ಲೆ: ಸೊರಬ ತಾಲೂಕಿನ ಕೋಟಿಪುರ ಕೈತಭೇಶ್ವರ ದೇವಾಲಯ
  • ಬಳ್ಳಾರಿ ಜಿಲ್ಲೆ: ಕುರುಗೋಡು ದೇವಸ್ಥಾನ
  • ಬಾಗಲಕೋಟೆ ಜಿಲ್ಲೆ: ರತ್ನನ ಕಾವ್ಯ ಗದಾಯುದ್ಧ
  • ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ: ಗ್ರಾಮೀಣ ಜನರ ಆರೋಗ್ಯದಲ್ಲಿ ಸುಸ್ಥಿರತೆ ಸಾಧಿಸುವುದು

  • ಸಮಾಜ ಕಲ್ಯಾಣ ಇಲಾಖೆ: ಸಮ ಸಮಾಜ ನಿರ್ಮಾಣಕ್ಕಾಗಿ
  • ಹಾವೇರಿ ಜಿಲ್ಲೆ: ಏಲಕ್ಕಿ ಕಂಪಿನ ನಾಡು ಹಾಗೂ ಸಂತರ, ಸಾಹಿತಿಗಳ ನೆಲೆಬೀಡು
  • ಮಂಡ್ಯ ಜಿಲ್ಲೆ: ರಂಗನತಿಟ್ಟು ಪಕ್ಷಿಧಾಮ ಹಾಗೂ ಕೃಷ್ಣರಾಜಸಾಗರ ಅಣೆಕಟ್ಟು
  • ರಾಮನಗರ ಜಿಲ್ಲೆ: ರಾಮನಗರ ಜಿಲ್ಲಾ ವೈವಿಧ್ಯತೆಗಳು
  • ಕಲಬುರ್ಗಿ ಜಿಲ್ಲೆ: ತೊಗರಿಯ ಕಣಜ ಕಲಬುರ್ಗಿ ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲು
  • ಕಾವೇರಿ ನೀರಾವರಿ ನಿಗಮ: ಏಕತೆಯಲ್ಲಿ ಅನೇಕತೆ ಸಾರುವ ಅಣೆಕಟ್ಟು ಹಾಗೂ ಜಲ ಸಂರಕ್ಷಣೆ
  • ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ: ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
  • ವಿಜಯಪುರ ಜಿಲ್ಲೆ: ಬಸವನಬಾಗೇವಾಡಿಯ ಮೂಲ ನಂದಿ ಬಸವೇಶ್ವರ ದೇವಾಲಯ
  • ದಕ್ಷಿಣ ಕನ್ನಡ ಜಿಲ್ಲೆ: ಕರಾವಳಿಯ ವಾಣಿಜ್ಯ ಮತ್ತು ಪ್ರವಾಸೋದ್ಯಮ
  • ಮೈಸೂರು ಜಿಲ್ಲೆ: ಮಾನವಕುಲದ ಸಮಾನತೆ, ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದವರೆಗೆ
  • ಬೆಳಗಾವಿ ಜಿಲ್ಲೆ: ಕಿತ್ತೂರು ಕದನದ 200ನೇ ವರ್ಷಾಚರಣೆ
  • ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ, ಸಿಎಫ್‌ಟಿಆರ್‌ಐ ಮೈಸೂರು: ಕೃಷಿ ಸರಕುಗಳ ಮೌಲ್ಯವರ್ಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಂಸ್ಥೆಯ ಕೊಡುಗೆ ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆ: ಇಲಾಖೆಯ ಕಿರು ಪರಿಚಯ
  • ಚಿತ್ರದುರ್ಗ ಜಿಲ್ಲೆ: ಚಿತ್ರದುರ್ಗದ ಕೋಟೆ ಮತ್ತು ಗಾಳಿಯಂತ್ರಗಳು

  • ಚಿಕ್ಕ ಬಳ್ಳಾಪುರ ಜಿಲ್ಲೆ: ನಂದಿರೋಪ್ ವೇ
  • ಗದಗ ಜಿಲ್ಲೆ: ಗ್ರಾಮ ಸಭೆ-ಹಳ್ಳಿಯ ವಿಧಾನಸಭೆ
  • ಧಾರವಾಡ ಜಿಲ್ಲೆ: ಇಸ್ರೋ, ಗಗನಯಾನದಲ್ಲಿ ಹಣ್ಣಿನ ನೊಣಗಳು
  • ಭಾರತೀಯ ರೈಲ್ವೆ: ವಂದೇ ಭಾರತ್ ಎಕ್ಸ್‌ಪ್ರೆಸ್‌
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: ಹೆಣ್ಣು ಭ್ರೂಣಹತ್ಯೆ ತಡೆ ಅಂಧತ್ವ ಶ್ರವಣ ದೋಷ ನಿವಾರಣ ಕಾರ್ಯಕ್ರಮ
  • ಹಾಸನ ಜಿಲ್ಲೆ: ವಿಶ್ವ ಪಾರಂಪರಿಕ ತಾಣ ಬೇಲೂರು ಮತ್ತು ಹಳೆಬೀಡು
  • ಚಿಕ್ಕಮಗಳೂರು ಜಿಲ್ಲೆ: ತೇಜಸ್ವಿ ವಿಸ್ಮಯ ಲೋಕ
  • ತುಮಕೂರು ಜಿಲ್ಲೆ: ಔಷಧ ಸಸ್ಯಗಳ ಸಂಜೀವಿನಿ ಪರ್ವತ ಸಿದ್ದರಬೆಟ್ಟ ಮತ್ತು ಬಯಲುಸೀಮೆಯನ್ನಾಳಿದ ಹೆಮ್ಮೆಯ ಅರಸರು
  • ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ಕಾರ್ಯಕ್ರಮಗಳು
  • ವಾರ್ತಾ ಇಲಾಖೆ: ವಿಶ್ವಗುರು ಬಸವಣ್ಣ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ
  • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ: ನಿಮ್ಮ ಮನೆಯೇ ನಿರಂತರ ಪಾಠಶಾಲೆ
  • ಕೌಶಲ್ಯಾಭಿವೃದ್ಧಿ ಇಲಾಖೆ: ಕೌಶಲ್ಯ ಕರ್ನಾಟಕ
  • ಸ್ತಬ್ದ ಚಿತ್ರ ಉಪ ಸಮಿತಿ: ಸಾಮಾಜಿಕ ನ್ಯಾಯ
  • ಸ್ತಬ್ದ ಚಿತ್ರ ಉಪಸಮಿತಿ: ಆನೆ ಬಂಡಿ

ಇನ್ನು ಈ ಬಾರಿಯೂ ಅಂಬಾರಿಯನ್ನು ಅಭಿಮನ್ಯುವೇ ಹೊರಲಿದ್ದಾನೆ. ಆತನಿಗೆ ಸಾಥಿಗಳಾಗಿ ಲಕ್ಷ್ಮಿ ಹಾಗೂ ವರಲಕ್ಷ್ಮಿ ಆನೆಗಳು ಇರಲಿವೆ. ಧನಂಜಯ ಜಂಬೂ ಸವಾರಿ ಮೆರವಣಿಗೆ ಮಾರ್ಗ ತೋರಿಸುವ ನಿಶಾನೆ ಆನೆ ಆಗಲಿದ್ದರೆ, ಗೋಪಿಗೆ ನೌಫತ್‌ ಆನೆಯ ಜವಾಬ್ದಾರಿ ನೀಡಲಾಗಿದೆ. ಉಳಿದ ನಾಲ್ಕು ಆನೆಗಳು ತಂಡದಲ್ಲಿರಲಿವೆ.

ಒಟ್ಟು 51 ಸ್ತಬ್ಧ ಚಿತ್ರಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಇರಲಿವೆ. 31 ಜಿಲ್ಲೆಗಳ ಸಂಸ್ಕೃತಿ ಬಿಂಬಿಸುವ, ನಿಗಮ ಮಂಡಳಿಗಳು, ಭಾರತೀಯ ರೈಲ್ವೆ ಸೇರಿ ಕೇಂದ್ರ ಸರ್ಕಾರದ ಇಲಾಖೆಗಳ ಸ್ಥಬ್ದಚಿತ್ರಗಳೂ ಆಕರ್ಷಿಸಲಿವೆ. ಈ ಬಾರಿಯ ದಸರಾ ಮೆರವಣಿಗೆಯಲ್ಲಿ ನೂರಕ್ಕೂ ಅಧಿಕ ಕಲಾ ತಂಡಗಳು ಭಾಗಿಯಾಗಲಿವೆ.ಅದರಲ್ಲೂ ಕರ್ನಾಟಕದ ನಾನಾ ಭಾಗದ ಸಂಸ್ಕೃತಿಯನ್ನು ಬಿಂಬಿಸುವ ಕಲಾ ತಂಡಗಳು ಹೆಜ್ಜೆ ಹಾಕಿ ಜಂಬೂ ಸವಾರಿ ಮೆರವಣಿಗೆಗೆ ಮೆರಗು ತರಲಿವೆ.

Leave a Comment

Leave a Reply

Your email address will not be published. Required fields are marked *

error: Content is protected !!