
ಸ್ನಾನ ಗೃಹದ ಗೋಡೆ ಬಣ್ಣ ಯಾವುದಿರಬೇಕು? – ವಾಸ್ತು ಪ್ರಕಾರ ಬಾತ್ ರೂಂ ಕಟ್ಟದಿದ್ದರೆ ಸಮಸ್ಯೆ ಗ್ಯಾರಂಟಿ..
- ಲೈಫ್ ಸ್ಟೈಲ್
- September 7, 2023
- No Comment
- 37
ನ್ಯೂಸ್ ಆ್ಯರೋ : ಮನೆಕಟ್ಟುವಾಗ ವಾಸ್ತು ನೋಡುವುದು ತುಂಬಾನೇ ಮುಖ್ಯ. ವಾಸ್ತುಗೆ ಅನುಗುಣವಾಗಿ ಮನೆ ಕಟ್ಟದಿದ್ದರೆ ಕೌಟುಂಬಿಕ, ಆರ್ಥಿಕ ಸಮಸ್ಯೆಗಳು ಕ್ರಮೇಣ ಎದುರಾಗಬಹುದು. ಅದ್ರಲ್ಲೂ ಮುಖ್ಯವಾಗಿ ಸ್ನಾನಗೃಹ ಕಟ್ಟುವ ಮುನ್ನಾ ತುಂಬಾನೇ ಎಚ್ಚರಿಕೆಯಿಂದ ವಾಸ್ತುವನ್ನು ನೋಡಬೇಕು. ಯಾವ ಮೂಲೆಯಲ್ಲಿ ಸ್ನಾನಗೃಹವನ್ನು ಮಾಡಬೇಕು, ಗೋಡೆಯ ಬಣ್ಣ ಯಾವುದಿರಬೇಕೆಂದು ತಿಳಿಯಬೇಕು. ಈ ಲೇಖನದಲ್ಲಿ ಸ್ನಾನಗೃಹದಲ್ಲಿ ವಾಸ್ತುಪ್ರಕಾರ ಮಾಡಬೇಕಾದ ಕೆಲ ವಿಚಾರಗಳನ್ನು ತಿಳಿಸಲಾಗಿದೆ.
ಸ್ನಾನಗೃಹದ ಗೋಡೆ ಬಣ್ಣ ಯಾವುದು ಒಳ್ಳೆಯದು?
ಸ್ನಾನಗೃಹದ ಗೋಡೆಗಳ ಬಣ್ಣವು ಗಾಢ ನೀಲಿ, ಹಳದಿ, ನೇರಳೆ ಅಥವಾ ಕೆಂಪು ಬಣ್ಣದ್ದಾಗಿರಬಾರದು. ಬಾತ್ ರೂಂಗೆ ಕೇವಲ ತಿಳಿ ಬಣ್ಣಗಳನ್ನು ಬಳಸಬೇಕು. ಅಂದರೆ ಬಿಳಿ, ಕೆನೆ ಮತ್ತು ಆಕಾಶ ಬಣ್ಣಗಳನ್ನು ಮಾತ್ರ ಬಳಸುವುದು ವಾಸ್ತು ಪ್ರಕಾರ ಮಂಗಳಕರವೆಂದು ಹೇಳಲಾಗುತ್ತದೆ.
ಸ್ನಾನಗೃಹದ ಬಾಗಿಲ ಬಣ್ಣ ಹೇಗಿರಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಮರದ ಬಾಗಿಲನ್ನು ಸ್ನಾನಗೃಹಕ್ಕೆ ಬಳಸುವುದು ಒಳ್ಳೆಯದೆಂದು ನಂಬಲಾಗಿದೆ. ಕಬ್ಬಿಣದ ಬಾಗಿಲನ್ನು ಬಳಸಬಾರದು. ಇನ್ನೂ ಬಾತ್ ರೂಂ ಬಾಗಿಲಿನ ಮೇಲೆ ಕಪ್ಪು ಬಣ್ಣವನ್ನು ಬಳಸುವುದನ್ನು ತಪ್ಪಿಸಿ. ಅದು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ಅಲ್ಲದೆ, ಯಾವುದೇ ಕಾರಣಕ್ಕೆ ಮುರಿದ ಬಾಗಿಲನ್ನು ಬಾತ್ ರೂಂ ಗೆ ಬಳಸದಿರಿ. ಒಂದಾ ದುರಸ್ತಿ ಮಾಡಿಸಿ, ಇಲ್ಲವಾದರೆ ಅದನ್ನು ಬದಲಾಯಿಸಿ.
ಮಗ್ ಮತ್ತು ಬಕೆಟ್ ಯಾವ ಬಣ್ಣದಾಗಿರಬೇಕು?
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಬಾತ್‌ರೂಮ್‌ನಲ್ಲಿರುವ ಮಗ್ ಮತ್ತು ಬಕೆಟ್‌ಗಳ ಬಣ್ಣದ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಅವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಬಾತ್ ರೂಂನಲ್ಲಿ ನೀವು ಕಪ್ಪು ಉಣ್ಣೆಬಟ್ಟೆ, ಕಂದು ಮತ್ತು ನೇರಳೆ ಬಣ್ಣದ ಮಗ್ ಮತ್ತು ಬಕೆಟ್ ಗಳನ್ನು ಬಳಸಬಾರದು.
ವಾಷ್ ಬೇಸಿನ್ ಈ ಬಣ್ಣದಲ್ಲಿದ್ದರೆ ಉತ್ತಮ?
ನಿಮ್ಮ ಮನೆಯ ಬಾತ್ ರೂಂ ನ ವಾಶ್ ಬೇಸಿನ್ ಬಗ್ಗೆ ಕೂಡ ನೀವು ಹೆಚ್ಚು ಕಾಳಜಿ ವಹಿಸಿಬೇಕು. ಏಕೆಂದರೆ ವಾಸ್ತು ಶಾಸ್ತ್ರದಲ್ಲಿ ವಾಷ್ ಬೇಸಿನ್ ಬಣ್ಣ ತಿಳಿ ಬಣ್ಣವಾಗಿದ್ದರೆ ಒಳ್ಳೆಯದು.