
ಬಾಹ್ಯಾಕಾಶದಿಂದ ಭೂಮಿ ಮತ್ತು ಚಂದ್ರನ ಫೋಟೋ ಕ್ಲಿಕ್ಕಿಸಿದ ‘ಆದಿತ್ಯ L1’ – ಇಸ್ರೋದಿಂದ ಅತ್ಯದ್ಭುತ ಫೋಟೋ ರಿಲೀಸ್..!!
- ಕೌತುಕ-ವಿಜ್ಞಾನ
- September 7, 2023
- No Comment
- 82
ನ್ಯೂಸ್ ಆ್ಯರೋ : ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷಿ ಸೂರ್ಯಯಾನ ಯಶಸ್ವಿ ಉಡಾವಣೆಯಾಗಿದ್ದು, ಇದೀಗ ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆ ಬಾಹ್ಯಾಕಾಶದಿಂದ ಸೆಲ್ಫಿ ಹಂಚಿಕೊಂಡಿದೆ, ಭೂಮಿ, ಚಂದ್ರನನ್ನು ಸೆರೆಹಿಡಿದಿದೆ.
ಟ್ವೀಟರ್ ನಲ್ಲಿ ಈ ಬಗ್ಗೆ ಇಸ್ರೋ ಮಾಹಿತಿ ಹಂಚಿಕೊಂಡಿದ್ದು, ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು ಲ್ಯಾಗ್ರೇಂಜ್ ಪಾಯಿಂಟ್ 1 ಗೆ ಪ್ರಯಾಣಿಸುವ ಮೊದಲು ಗ್ರಹದ ಸುತ್ತಲೂ ಸುತ್ತುತ್ತಿರುವಾಗ ತನ್ನದೇ ಆದ ಸೆಲ್ಫಿಯೊಂದಿಗೆ ಭೂಮಿ ಮತ್ತು ಸೂರ್ಯನನ್ನು ಸೆರೆಹಿಡಿದಿದೆ.
ಸದ್ಯ ಭಾರತದ ಮಹತ್ವಾಕಾಂಕ್ಷೆಯ ‘ಸೂರ್ಯಯಾನʼ ಆದಿತ್ಯ L1 (Aditya L1 Mission) ಭೂಮಿಯ ಸುತ್ತ ಎರಡನೇ ಸುತ್ತನ್ನು ಮುಗಿಸಿದೆ. ಸೆಪ್ಟೆಂಬರ್ 5ರ ರಾತ್ರಿ 2.45ಕ್ಕೆ ಆದಿತ್ಯ ಎಲ್1 ಭೂಮಿಗೆ ಎರಡನೇ ಸುತ್ತು ಪೂರ್ಣಗೊಳಿಸಿತು. ಆದಿತ್ಯ L1 ಸೆಪ್ಟೆಂಬರ್ 10ರಂದು ರಾತ್ರಿ 2:30ಕ್ಕೆ ಮೂರನೇ ಕಕ್ಷೆಯನ್ನು ಪೂರ್ಣಗೊಳಿಸಲಿದೆ ಎಂದು ಇಸ್ರೋ ತಿಳಿಸಿದೆ.
ಕಳೆದ ಶನಿವಾರ ಬೆಳಿಗ್ಗೆ 11.45ರ ಸುಮಾರಿಗೆ ಇಸ್ರೋ ಭೂಮಿಯಿಂದ ಜಿಗಿದಿತ್ತು. ಸೆಪ್ಟೆಂಬರ್ 3ರಂದು ಆದಿತ್ಯ L1 ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಮುಗಿಸಿತ್ತು. ಅದರ ಸಹಾಯದಿಂದ ಆದಿತ್ಯ ಎಲ್1 ಮುಂದಿನ ಕಕ್ಷೆಗೆ ಹೋಗಿತ್ತು. ಸದ್ಯ ಭಾರತೀಯ ಬಾಹ್ಯಾಕಾಶ ಸಂಸ್ಥೆ ಮಾಡಿರುವ ಟ್ವೀಟ್‌ನಲ್ಲಿ, ʼಆದಿತ್ಯ-ಎಲ್1 ಮಿಷನ್ ಉಪಗ್ರಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮೊದಲ ಭೂಮಿಯ ಕಕ್ಷೆಯ ಸುತ್ತನ್ನು ಬೆಂಗಳೂರಿನ ISTRACನಿಂದ ಯಶಸ್ವಿಯಾಗಿ ಕಾರ್ಯಗತಗೊಳಿಸಲಾಯಿತು. ಹೊಸ ಕಕ್ಷೆಯಲ್ಲಿ ಆದಿತ್ಯ ಎಲ್1 245 ಕಿಮೀ x 22,459 ಕಿಮೀನಂತೆ ಚಲಿಸಲಿದೆ ಎಂದು ತಿಳಿಸಿದೆ.