
ಮನೆಯಲ್ಲಿ ಇರುವೆ ಕಾಟದಿಂದ ಬೇಸತ್ತಿದ್ದೀರಾ? – ಈ ಸಿಂಪಲ್ ಟ್ರಿಕ್ಸ್ ಬಳಸಿ, ಇರುವೆ ಓಡಿಸಿ..
- ಲೈಫ್ ಸ್ಟೈಲ್
- September 7, 2023
- No Comment
- 74
ನ್ಯೂಸ್ ಆ್ಯರೋ : ಇರುವೆ ಕಾಟದಿಂದ (Ants Problem) ತೊಂದರೆ ಅನುಭವಿಸದವರು ಯಾರಿದ್ದಾರೆ ಹೇಳಿ? ಮನೆಯ ಸಂದಿ-ಗೊಂದು, ಅಡುಗೆ ಕೋಣೆ, ಬಾತ್ ರೂಮ್, ಜಗುಲಿ ಹೀಗೆ ಎಲ್ಲಾ ಕಡೆ ಕಾಣಿಸಿಕೊಂಡು ಉಪಟಳ ನೀಡುತ್ತದೆ.
ನಾನಾ ರೂಪ
ಈ ಇರುವೆಯಲ್ಲಿ ನಾನಾ ರೂಪಗಳಿವೆ. ಒಂದೊಂದು ಒಂದೊಂದು ರೀತಿಯ ತೊಂದರೆ ಕೊಡುತ್ತವೆ. ಅದರಲ್ಲೂ ಹಳ್ಳಿ ಮನೆಗಳ್ಳಿ ಇದರ ಕಾಟ ವಿಪರೀತ. ಬಟ್ಟೆಯನ್ನು ಕಡಿದು ಹಾಕುವುದರಿಂದ ಹಿಡಿದು ಅಂಗಳದಲ್ಲಿ ಮಣ್ಣನ್ನು ಎಳೆದು ರಾಶಿ ಹಾಕುತ್ತವೆ. ಇನ್ನು ದುರ್ವಾಸನೆ ಬೀರುವ ಸಣ್ಣ ಇರುವೆ ಮಜ್ಜಿಗೆ, ಹಾಲು, ಮೊಸರಿಗೆ ಮುತ್ತಿಗೆ ಹಾಕುತ್ತವೆ. ಹೀಗಾಗಿ ನಾವು ಇರುವೆ ಕಾಟದಿಂದ ಮುಕ್ತಿ ಪಡೆಯುವ ಮಾರ್ಗ ವಿವರಿಸುತ್ತೇವೆ.
ಮನೆಯಲ್ಲೇ ಇದೆ ಪರಿಹಾರ
ಇರುವೆಯನ್ನು ಓಡಿಸಲು ಮನೆಯಲ್ಲೇ ಇದೆ ಪರಿಹಾರ. ಒಂದು ಚಮಚ ಉಪ್ಪು ತೆಗೆದುಕೊಂಡು ಅದಕ್ಕೆ ನಿಂಬೆ ರಸ ಹಿಂಡಿ ಚೆನ್ನಾಗಿ ಮಿಶ್ರ ಮಾಡಿ. ಬಳಿಕ ಅದನ್ನು ಇರುವೆ ಹಿಂಡು ಇರುವಲ್ಲಿಗೆ ಚಿಮುಕಿಸಿ. ತಕ್ಷಣ ಇರುವೆಗಳೆಲ್ಲ ಜಾಗ ಖಾಲಿ ಮಾಡುತ್ತವೆ.
ಇನ್ನು ದಾಲ್ಚಿನಿ ಚಕ್ಕೆಯನ್ನು ಚೆನ್ನಾಗಿ ಹುಡಿ ಮಾಡಿ. ಬಳಿಕ ಇದನ್ನು ಇರುವೆಗಳ ಮೇಲೆ ಸಿಂಪಡಿಸಿ ಸ್ವಲ್ಪ ಹೊತ್ತು ಬಿಟ್ಟು ನೋಡಿ. ಒಂದು ಇರುವೆಯೂ ಅಲ್ಲಿರುವುದಿಲ್ಲ.
ಒಂದು ಚಮಚ ಕರಿಮೆಣಸಿನ ಪುಡಿಯನ್ನು ಒಂದು ಲೋಟ ಬಿಸಿನೀರಿಗೆ ಹಾಕಿಟ್ಟುಕೊಳ್ಳಿ. ಇರುವೆಗಳ ಸಾಲು ಕಂಡಾಗ ಇದನ್ನು ಅವುಗಳ ಮೇಲೆ ಸಿಂಪಡಿಸಿದರೆ ಸಾಕು.
ಅರಶಿನ ಹುಡಿಯಿಂದಲೂ ಇರುವೆಯನ್ನು ಓಡಿಸಲು ಸಾಧ್ಯ. ಇರುವೆ ಕಂಡು ಬಂದಲ್ಲಿ ಅರಶಿನ ಹುಡಿ ಚಿಮುಕಿಸಿ ಅಥವಾ ನೀರಿಗೆ ಸ್ವಲ್ಪ ಅರಶಿನ ಹುಡಿ ಮಿಶ್ರ ಮಾಡಿಟ್ಟುಕೊಂಡರೆ ಬೇಕಾದಾಗ ಬಳಸಿಕೊಳ್ಳಬಹುದು. ಅರಶಿನ ನೀರಿನಿಂದಲೂ ಇರುವೆಗಳು ಓಡಿ ಹೋಗುತ್ತವೆ.