
SBI ಬ್ಯಾಂಕ್ ನಲ್ಲಿ 2,000 ಪದವೀಧರರಿಗೆ ಉದ್ಯೋಗಾವಕಾಶ – ವೇತನ 40 ಸಾವಿರ, ಅರ್ಜಿ ಸಲ್ಲಿಸಲು ಹೀಗೆ ಮಾಡಿ…
- ಉದ್ಯೋಗ ಮಾಹಿತಿ
- September 7, 2023
- No Comment
- 170
ನ್ಯೂಸ್ ಆ್ಯರೋ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು 2 ಸಾವಿರ ಪ್ರೊಬೇಷನರಿ ಆಫೀಸರ್ (ಪಿಒ) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಈ ಮೂಲಕ ಪದವಿ ಪಡೆದವರು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿದ್ದಾರೆ.
ಅರ್ಜಿ ಸಲ್ಲಿಸುವ ಮುನ್ನಾ ಇದನ್ನು ತಿಳಿದುಕೊಳ್ಳಿ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 60 ಪ್ರತಿಶತ ಅಂಕಗಳೊಂದಿಗೆ ಯಾವುದೇ ಪದವಿಯನ್ನು ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಇಂದಿನಿಂದ (ಸೆಪ್ಟೆಂಬರ್ 7 ರಿಂದ) ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆನ್ ಲೈನ್ ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರಿಲಿಮ್ಸ್, ಮುಖ್ಯ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶಾದ್ಯಂತ ವಿವಿಧ ಸ್ಥಳಗಳಲ್ಲಿರುವ ಎಸ್‌ಬಿಐ ಶಾಖೆಗಳಲ್ಲಿ ನೇಮಿಸಲಾಗುತ್ತದೆ.
ಹುದ್ದೆಗಳ ವರ್ಗವಾರು ವಿವರ:
- ಎಸ್ಸಿ ವರ್ಗದ ಹುದ್ದೆಗಳು: 300
- ಎಸ್ಟಿ ವರ್ಗದ ಹುದ್ದೆಗಳು: 150
- ಒಬಿಸಿ ವರ್ಗದ ಹುದ್ದೆಗಳು: 540
- ಇಡಬ್ಲ್ಯೂಎಸ್ ವಿಭಾಗದಲ್ಲಿ ಹುದ್ದೆಗಳು: 200
- ಯುಆರ್ ವಿಭಾಗದಲ್ಲಿ ಹುದ್ದೆಗಳು: 810
ವಯೋಮಿತಿ: ಏಪ್ರಿಲ್ 1, 2023ಕ್ಕೆ ಅನ್ವಯವಾಗುವಂತೆ 20 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ವರ್ಗಗಳಿಗೆ ವಯಸ್ಸಿನ ದೃಷ್ಟಿಯಿಂದ ವಿನಾಯಿತಿ ಇರುತ್ತದೆ.
ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 27 ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ 750 ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಮಾಸಿಕ ವೇತನ 41,960 ರೂ., ಇತರ ಭತ್ಯೆಗಳನ್ನು ನೀಡಲಾಗುವುದು.
ನೆನಪಿನಲ್ಲಿಟ್ಟುಕೊಳ್ಳಬೇಕಾದ ದಿನಾಂಕ:
- ಅರ್ಜಿ ಸಲ್ಲಿಸಲು ಆರಂಭ ದಿನ: ಸೆಪ್ಟೆಂಬರ್ 7, 2023
- ಅರ್ಜಿ ಸಲ್ಲಿಸಲು ಕೊನೆ ದಿನ: ಸೆಪ್ಟೆಂಬರ್ 27,2023
- ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ: ಸೆಪ್ಟೆಂಬರ್ 27
- ಪ್ರಿಲಿಮಿನರಿ ಪರೀಕ್ಷೆಯ ಕಾಲ್ ಲೆಟರ್ ಡೌನ್ಲೋಡ್ ಮಾಡಿ: ಅಕ್ಟೋಬರ್ ಎರಡನೇ ವಾರದಿಂದ, 2023
- ಪ್ರಿಲಿಮಿನರಿ ಪರೀಕ್ಷೆಯ ದಿನಾಂಕ: ನವೆಂಬರ್ 2023
- ಪ್ರಿಲಿಮಿನರಿ ಪರೀಕ್ಷೆ ಫಲಿತಾಂಶ ದಿನಾಂಕ: ನವೆಂಬರ್ 2023
- ಮುಖ್ಯ ಪರೀಕ್ಷೆಯ ಕಾಲ್ ಲೆಟರ್ ಡೌನ್ಲೋಡ್ ಮಾಡಿ: ನವೆಂಬರ್ ಅಥವಾ ಡಿಸೆಂಬರ್ 2023
- ಮುಖ್ಯ ಪರೀಕ್ಷೆ ದಿನಾಂಕ: ಡಿಸೆಂಬರ್ 2023 ಅಥವಾ ಜನವರಿ 2024
- ಮುಖ್ಯ ಪರೀಕ್ಷೆಯ ಫಲಿತಾಂಶ ದಿನಾಂಕ: ಡಿಸೆಂಬರ್ 2023 ಅಥವಾ ಜನವರಿ 2024
- ಸಂದರ್ಶನದ ದಿನಾಂಕ: ಜನವರಿ ಅಥವಾ ಫೆಬ್ರವರಿ 2024
- ಅಂತಿಮ ಫಲಿತಾಂಶ ಪ್ರಕಟಣೆ ದಿನಾಂಕ: ಫೆಬ್ರವರಿ ಅಥವಾ ಮಾರ್ಚ್ 2024