ವಿಶ್ವಮಾನ್ಯ ಕನ್ನಡಿಗ ಪುರಸ್ಕೃತ ಕೋಟಿಯಪ್ಪ ಪೂಜಾರಿ ಸೇರ ನಿಧನ
ನ್ಯೂಸ್ ಆ್ಯರೋ: ರಾಜ್ಯ ಮಟ್ಟದ ವಿಶ್ವಮಾನ್ಯ ಕನ್ನಡಿಗ ಪುರಸ್ಕೃತರಾದ ಕೋಟಿಯಪ್ಪ ಪೂಜಾರಿ ಸೇರ ವಿಧಿವಶರಾಗಿದ್ದಾರೆ.
ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾ ಪುತ್ತೂರಿನಲ್ಲಿ ಶಿಕ್ಷಣ ತಜ್ಞರಾಗಿ ಚಿರಪರಿಚಿತರಾಗಿದ್ದ ಕೋಟಿಯಪ್ಪ ಪೂಜಾರಿ ನ.25ರಂದು ಬೆಳಗ್ಗೆ ಬೋಳುವಾರಿನ ಬಾಡಿಗೆ ಮನೆಯೊಂದರಲ್ಲಿ ನಿಧನರಾಗಿದ್ದಾರೆ.
ಸುಳ್ಯ ಗಾಂಧಿನಗರ ಶಾಲೆಯಲ್ಲಿ ಮುಖ್ಯಗುರುಗಳಾಗಿದ್ದು, ಅನಾರೋಗ್ಯದ ಹಿನ್ನಲೆಯಲ್ಲಿ ಸ್ವಯಂ ನಿವೃತ್ತಿ ಹೊಂದಿದ್ದ ಕೋಟಿಯಪ್ಪ ಪೂಜಾರಿ ಅವರು ಪುತ್ತೂರು ಬೊಳುವಾರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು.
ಪ್ರತಿ ದಿನ ಪುತ್ತೂರು ಕೊಂಬೆಟ್ಟು ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ವಿವಿಧ ಶಿಕ್ಷಣ ಚಟುವಟಿಕೆಗಳಿಗೆ ಪ್ರಾಯೋಜಕರಾಗಿ ಪ್ರೋತ್ಸಾಹ ನೀಡುತ್ತಿದ್ದರು. ನ.25ರಂದು ಅವರು ಮನೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರು ತೆರಳಿದ್ದಾರೆಂದು ತಿಳಿದು ಬಂದಿದೆ.
Leave a Comment