ಕೊನೆಗೂ ಪತ್ನಿಗೆ ಓಪನ್ ಆಗಿ ಧನ್ಯವಾದ ಹೇಳಿದ ಅಭಿಷೇಕ್; ನನ್ನನ್ನು ಮೂರನೇ ವ್ಯಕ್ತಿ ಆಗಿ ನೋಡಲ್ಲ ಎಂದಿದ್ಯಾಕೆ ?
ನ್ಯೂಸ್ ಆ್ಯರೋ: ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮಧ್ಯೆ ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತಿವೆ. ಅವರು ಬೇರೆ ಆಗಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಆದರೆ, ಅಭಿಷೇಕ್ ಬಚ್ಚನ್ ಹಾಗೂ ಅಮಿತಾಭ್ ಬಚ್ಚನ್ ಇದನ್ನು ಅಲ್ಲಗಳೆಯುತ್ತಾ ಬರುತ್ತಿದ್ದಾರೆ.
ಆದರೆ, ಐಶ್ವರ್ಯಾ ಹಾಗೂ ಅಭಿಷೇಕ್ ಒಟ್ಟಾಗಿ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ, ಆ ಅನುಮಾನ ಹಾಗೆಯೇ ಇರುವಂತೆ ಮಾಡಿದ್ದಾರೆ. ಈಗ ಅಭಿಷೇಕ್ ಅವರು ತಾಯಿ ಆಗಿ ಐಶ್ವರ್ಯಾ ಹಾಗೂ ಜಯಾ ಬಚ್ಚನ್ ನಿರ್ವಹಿಸುತ್ತಿರುವ ಜವಾಬ್ದಾರಿ ಬಗ್ಗೆ ಮಾತನಾಡಿದ್ದಾರೆ.
‘ನನ್ನ ತಾಯಿ ನಾನು ಜನಿಸಿದ ಬಳಿಕ ನಟನೆ ತೊರೆದರು. ಮಕ್ಕಳ ಜೊತೆ ಸಮಯ ಕಳೆಯುವ ಉದ್ದೇಶ ಅವರದ್ದಾಗಿತ್ತು. ನನ್ನ ತಂದೆ ಹತ್ತಿರ ಇಲ್ಲ ಎಂದು ಅನುಭವಿಸೋಕೆ ತಾಯಿ ಬಿಡಲಿಲ್ಲ. ರಾತ್ರಿ ತಂದೆ ಬರುತ್ತಿದ್ದರು’ ಎಂದಿದ್ದಾರೆ ಅಭಿಷೇಕ್.
‘ನನ್ನ ಮನೆಯಲ್ಲಿ ನಾನು ಹೊರಗೆ ಹೋಗಿ ಸಿನಿಮಾ ಮಾಡಲು ಲಕ್ಕಿ ನಾನು. ಐಶ್ವರ್ಯಾ ಅವರು ಯಾವಾಗಲೂ ಆರಾಧ್ಯಳೊಂದಿಗೆ ಮನೆಯಲ್ಲಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಅಪಾರ ಧನ್ಯವಾದ ಹೇಳುತ್ತೇನೆ. ನಾನು ಮಕ್ಕಳ ಜೊತೆ ಇಲ್ಲ ಎಂಬ ಕಾರಣಕ್ಕೆ ಅವರು ನನ್ನನ್ನು ಮೂರನೇ ವ್ಯಕ್ತಿ ಆಗಿ ನೋಡಲ್ಲ. ಅವರಲ್ಲಿ ಒಬ್ಬರು ಎಂದು ನನ್ನ ನೋಡುತ್ತಾರೆ’ ಎಂದಿದ್ದಾರೆ ಅಭಿಷೇಕ್.
ಇನ್ನು ಇತ್ತೀಚೆಗೆ ‘ಕೋಟ್ಯಾಧಿಪತಿ’ ಕಾರ್ಯಕ್ರಮಕ್ಕೆ ಅಭಿಷೇಕ್ ಬಚ್ಚನ್ ಅತಿಥಿಯಾಗಿ ತೆರಳಿದ್ದರು. ಈ ವೇಳೆ ಅವರು ಮಗಳ ಬಗ್ಗೆ ಮಾತನಾಡಿದ್ದಾರೆ. ‘ಆರಾಧ್ಯಾ ಯಾವಾಗಲೂ ನನ್ನ ಮಗಳು’ ಎಂದಿದ್ದಾರೆ.
Leave a Comment