ಪುತ್ತೂರು : ಶಾಂತಿ ಸೌಹಾರ್ದತೆಗೆ ಸಾಕ್ಷಿಯಾದ ಗೆಳೆಯನ ಹುಟ್ಟು ಹಬ್ಬ – ಹಿಂದೂ ಗೆಳೆಯನ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ಮುಸ್ಲಿಂ ಯುವಕರು, ವಿಡಿಯೋ ವೈರಲ್
- ಕರಾವಳಿ
- August 29, 2023
- No Comment
- 121
ನ್ಯೂಸ್ ಆ್ಯರೋ : ಕರಾವಳಿಯ ಕೋಮುವಾದದ ಕಿಚ್ಚಿನ ನಡುವೆ ಪುತ್ತೂರಲ್ಲೊಂದು ಸೌಹಾರ್ದತೆಯ ಪಾಠ ನಡೆದಿದೆ. ಮುಸ್ಲಿಂ ಯುವಕರು ಜೊತೆ ಸೇರಿ ಹಿಂದೂ ಗೆಳೆಯನ ಹುಟ್ಟು ಹಬ್ಬವನ್ನ ಅದ್ದೂರಿಯಾಗಿ ಆಚರಿಸಿದ್ದಾರೆ.
ದ.ಕ. ಜಿಲ್ಲೆಯ ಪುತ್ತೂರಿನ ಪುಣಚದಲ್ಲಿ ಸೌಹಾರ್ದತೆಯ ಹುಟ್ಟುಹಬ್ಬ ಆಚರಣೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಬರ್ತ್ ಡೇ ವೀಡಿಯೋ ಭಾರೀ ವೈರಲ್ ಆಗಿದೆ.
ಪುಣಚದ ದಿವಾಕರ ಅವರ ಹುಟ್ಟು ಹಬ್ಬವನ್ನ ಆಚರಿಸಿದ ‘ಪಿರ್ಸತೆ ಚಂಹಿಮಾರ್’ ಮುಸ್ಲಿಂ ಗ್ರೂಪ್ ಜೊತೆಯಾಗಿ ಆಚರಿಸಿದ್ದಾರೆ. ಕರಾವಳಿಯ ಕೋಮುವಾದದ ಕಿಚ್ಚಿನ ನಡುವೆ ಪುತ್ತೂರಲ್ಲೊಂದು ಸೌಹಾರ್ದತೆಯ ಪಾಠವಾಗಿದ್ದು, ಶಾಂತಿ ಸೌಹಾರ್ದತೆಗೆ ಹುಟ್ಟು ಹಬ್ಬದ ಮೂಲಕ ಸಂದೇಶ ರವಾನೆ. ಹಿಂದೂ-ಮುಸ್ಲಿಂ ಯುವಕರ ಸೌಹಾರ್ದತೆಗೆ ಕರಾವಳಿಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.