
ಎಚ್ಚರ! ಮೊಬೈಲ್ ಕವರ್ ಒಳಗೆ ಕರೆನ್ಸಿ ನೋಟು, ಕಾರ್ಡ್ ಇಡುತ್ತೀರಾ? – ಹಾಗಾದ್ರೆ ಈ ಸುದ್ದಿ ಓದ್ಲೇಬೇಕು..!
- ಟೆಕ್ ನ್ಯೂಸ್
- August 29, 2023
- No Comment
- 183
ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬ್ಲಾಸ್ಟ್ ಸುದ್ದಿಗಳು ಹೆಚ್ಚಾಗಿ ಕೇಳಿ ಬರಲಾರಂಭಿಸಿವೆ. ಕೆಲವೊಮ್ಮೆ ನಾವು ಮಾಡುವ ತಪ್ಪುಗಳಿಂದಲೇ ಇದು ಸಂಭವಿಸುತ್ತದೆ. ಅದು ಹೇಗೆ? ಯಾವ ರೀತಿ ಎಚ್ಚರಿಕೆ ವಹಿಸಬೇಕು? ಎನ್ನುವುದರ ವಿವರ ಇಲ್ಲಿದೆ.
ಈ ರೀತಿಯ ಅಭ್ಯಾಸ ಇದ್ದರೆ ಈಗಲೇ ಬಿಟ್ಟುಬಿಡಿ
ಕೆಲವರು ಮೊಬೈಲ್‍ನ ಹಿಂಬದಿ ಕವರ್ ಒಳಗೆ ಎಟಿಎಂ, ಆಧಾರ್, ಕಾರ್ಡ್, ಕರೆನ್ಸಿ ನೋಟು, ಕಾಯಿನ್, ಕೀ ಮುಂತಾದವುಗಳನ್ನು ಇಡುತ್ತಾರೆ. ಬಳಕೆಗೆ ಅನುಕೂಲ ಎಂದುಕೊಂಡಿದ್ದರೂ ಇದು ಸೃಷ್ಟಿಸಬಲ್ಲ ಅಪಾಯ ಕೂಡ ಅಪಾರವಾದುದು ಎನ್ನುತ್ತಾರೆ ತಜ್ಞರು.
ಬೆಂಕಿ ಹತ್ತಿಕೊಳ್ಳಬಹುದು
ತಪ್ಪಾದ ಬಳಕೆಯೇ ಮೊಬೈಲ್ ಫೋನ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಮುಖ್ಯ ಕಾರಣ. ಫೋನ್ ಅತಿಯಾಗಿ ಬಿಸಿಯಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬ್ಯಾಟರಿ ಮತ್ತು ಫೋನ್ ನ ಪ್ರೊಸೆಸರ್ ಮೇಲೆ ಅತಿಯಾದ ಒತ್ತಡ ಬಿದ್ದಾಗ ಬೆಂಕಿ ಕಾನಿಸಿಕೊಳ್ಳುತ್ತದೆ. ಮೊಬೈಲ್ ಕವರ್ ನಲ್ಲಿ ನಾವು ತುರುಕುವ ವಸ್ತುಗಳಿಂದಲೇ ಈ ಒತ್ತಡ ಸೃಷ್ಟಿಯಾಗುತ್ತದೆ.
ಅಲ್ಲದೆ ಕರೆನ್ಸಿ ನೋಟುಗಳನ್ನು ತಯಾರಿಸಲು ಪ್ರತ್ಯೇಕವಾದ ಕಾಗದವನ್ನು ಬಳಸಲಾಗುತ್ತದೆ. ಜೊತೆಗೆ ವಿವಿಧ ರಾಸಾಯನಿಕಗಳನ್ನೂ ಉಪಯೋಗಿಸಲಾಗುತ್ತದೆ. ಮೊಬೈಲ್ ಹೊರ ಸೂಸುವ ಉಷ್ಣತೆಯನ್ನು ಹೊರ ಹೋಗದಂತೆ ಕರೆನ್ಸಿ ನೋಟುಗಳು ಅಥವಾ ಇತರ ವಸ್ತುಗಳು ತಡೆಯುತ್ತವೆ. ಇದರಿಂದ ಮೊಬೈಲ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು ಜೊತೆಗೆ ಸ್ಫೋಟಗೊಳ್ಳಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಹೀಗಾಗಿ ಈ ತಪ್ಪನ್ನು ಎಂದಿಗೂ ಮಾಡಬೇಡಿ.