Missing Submarine : ಮುಳುಗಿದ ಟೈಟಾನಿಕ್ ನೋಡಲು ಹೋದವರ ನಾಪತ್ತೆ ಘಟನೆಗೆ ಟ್ವಿಸ್ಟ್ – ಸಿಕ್ಕಿತು ಮಹತ್ವದ ಸುಳಿವು, ಸಮುದ್ರದ ಆಳದಲ್ಲಿ ಏನಾಗ್ತಿದೆ?

Missing Submarine : ಮುಳುಗಿದ ಟೈಟಾನಿಕ್ ನೋಡಲು ಹೋದವರ ನಾಪತ್ತೆ ಘಟನೆಗೆ ಟ್ವಿಸ್ಟ್ – ಸಿಕ್ಕಿತು ಮಹತ್ವದ ಸುಳಿವು, ಸಮುದ್ರದ ಆಳದಲ್ಲಿ ಏನಾಗ್ತಿದೆ?

ನ್ಯೂಸ್ ಆ್ಯರೋ : ದಶಕಗಳ ಹಿಂದೆ ಜಗತ್ತಿನ ಅತ್ಯಂತ ದೊಡ್ಡ ಹಾಗೂ ಶಕ್ತಿಶಾಲಿ ಹಡಗು ಎಂಬ ಹಿರಿಮೆಯ ಗರಿ ಹೊತ್ತಿದ್ದ ಟೈಟಾನಿಕ್ ತನ್ನ 1912ರಲ್ಲಿ ತನ್ನ ಮೊದಲ ಜಲಯಾನದಲ್ಲೇ ಮುಳುಗಿದ್ದು, 1500 ಜನರ ಬದುಕು ನಾಶವಾಗಿದ್ದೆಲ್ಲವೂ ನಮಗೆ ಗೊತ್ತೇ ಇದೆ. ಆ ಬೃಹತ್ ಹಡಗಿನ ಅವಶೇಷಗಳು ಇನ್ನೂ ಕೂಡ ಸಮುದ್ರದ ಆಳದಲ್ಲಿದೆ‌. ಅವುಗಳ ಬಗ್ಗೆ ವಿಜ್ಞಾನಿಗಳು ಇಂದಿಗೂ ಸಾಕಷ್ಟು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ.

ಸದ್ಯ, ಟೈಟಾನಿಕ್ ಹಡಗಿನ ಅವಶೇಷವನ್ನು ಜಲಾಂತರ್ಗಾಮಿ ಮೂಲಕ ನೋಡಲು ಹೋದ 5 ಜನ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಅಸಲಿಗೆ ಅಲ್ಲಿಗೆ ಅವರು ಹೋಗಿದ್ದು ಯಾಕೆ? ಜಲಾಂತರ್ಗಾಮಿ ಸಂಪರ್ಕ ಕಳೆದುಕೊಂಡಿದ್ದು ಹೇಗೆ? ಇವೆಲ್ಲವುಗಳನ್ನು ಈ ವರದಿಯಲ್ಲಿ ನೋಡೋಣ.

2 ಕೋಟಿ ಕೊಟ್ಟು ಟೈಟಾನಿಕ್ ನೋಡಲು ಹೋದವರು ನಾಪತ್ತೆ!

ಓಷಿಯನ್ ಗೇಟ್ ಎಕ್ಸ್ಪಡೀಷನ್ ಮಾಲಿಕತ್ವದ ಟೈಟಾನಿಕ್ ಎಂಬ ಪ್ರವಾಸಿ ಸಬ್ ಮರ್ಸಿಬಲ್ ಜಲಾಂತರ್ಗಾಮಿಯು ದುರಂತ ಅಂತ್ಯಕಂಡ ಟೈಟಾನಿಕ್ ಹಡಗಿನ ಅವಶೇಷ ವೀಕ್ಷಿಸಲು 5 ಜನ ಪ್ರವಾಸಿಗರೊಂದಿಗೆ ತೆರಳಿತ್ತು. ಇದರಲ್ಲಿ ಪ್ರಯಾಣ ಮಾಡಿದ 5 ಜನ ತಲಾ ಒಂದು ಟಿಕೆಟಿಗೆ 2.28 ಕೋಟಿ ನೀಡಿದ್ದರು. ಈ ಜಲಾಂತರ್ಗಾಮಿ ಸಮುದ್ರದಾಳಕ್ಕೆ ಇಳಿದ ಎರಡು ಗಂಟೆಗಳ ಬಳಿಕ ಸಂಪೂರ್ಣ ಸಂಪರ್ಕ ಕಳೆದುಕೊಂಡಿದ್ದು, ಅನಂತರ ಲಭ್ಯವಾಗಲಿಲ್ಲ ಎನ್ನಲಾಗಿದೆ.

ಕೇವಲ 40 ಗಂಟೆಗಳಿಗಷ್ಟೇ ಆಕ್ಸಿಜನ್ ಲಭ್ಯವಿತ್ತು..!

ಹೌದು, ಉತ್ತರ ಅಟ್ಲಾಂಟಿಕ್ ಕೇಪ್ ಕೋಡ್ ನಿಂದ 900 ಮೈಲಿ ಪ್ರಯಾಣಿಸುತ್ತಿದ್ದಂತೆ ಸಂಪರ್ಕ ಕಳೆದುಕೊಂಡ ಈ ಜಲಾಂತರ್ಗಾಮಿಯಲ್ಲಿ ತೆರಳಿದ 5 ಜನ ಕೇವಲ 40 ಗಂಟೆಗಳಿಗೆ ಸೀಮಿತವಾದ ಆಕ್ಸಿಜನ್ ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ. ನಿನ್ನೆಯವರೆಗೂ ಅಮೇರಿಕನ್ ಕೋಸ್ಟ್ ಗಾರ್ಡ್, ಕೆನಡಿಯನ್ ಕೋಸ್ಟ್ ಗಾರ್ಡ್, ಹಾಗೂ ನೌಕಾ ಸೇನೆಗಳು ಇವರ ಪತ್ತೆಗೆ ಪ್ರಯತ್ನಿಸುತ್ತಿದೆ. ಆದರೆ ಯಾವುದೇ ಮಾಹಿತಿ‌ ಲಭ್ಯವಾಗಿಲ್ಲ. ಆದರೆ ಇದೇ ವೇಳೆ ಕೆನಡಾದ ವಿಮಾನ ಒಂದು ಅತ್ಯಾಧುನಿಕ ಉಪಕರಣಗಳ ಮೂಲಕ ಟೈಟಾನಿಕ್ ಮುಳುಗಡೆಯಾದ ಆಸುಪಾಸಿನಲ್ಲಿ ಸಮುದ್ರದಾಳದಲ್ಲಿ ಜೋರಾದ ಶಬ್ದವನ್ನು ಗ್ರಹಿಸಿದ್ದು ನಾಪತ್ತೆಯಾದವರು ಇನ್ನೂ ಕೂಡ ಜೀವಂತ ಇರುವ ಬಗ್ಗೆ ಸುಳುಹು ಸಿಕ್ಕಿದ್ದು, ಈ ಬಗ್ಗೆಯೂ ಸಾಕಷ್ಟು ತನಿಖೆಗಳಾಗುತ್ತಿವೆ ಎಂದು ತಿಳಿದು ಬಂದಿದೆ. ಇತ್ತೀಚಿನ ಮಾಹಿತಿ ಪ್ರಕಾರ ನಾಪತ್ತೆಯಾದವರು ಇನ್ನೂ ಕೂಡ ಜೀವಂತ ಇರುವ ಸಾದ್ಯತೆಯಿದ್ದು, ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *