ಭೇಟಿಯ ಬಳಿಕ ‘ನಾನು ಮೋದಿಯ ಅಭಿಮಾನಿ’ ಎಂದ ಎಲಾನ್ ಮಸ್ಕ್! – ಭಾರತದಲ್ಲೂ ಹೂಡಿಕೆ ಮಾಡಲು ವಿಶ್ವದ ನಂ.1 ಶ್ರೀಮಂತ ರೆಡಿ!

ಭೇಟಿಯ ಬಳಿಕ ‘ನಾನು ಮೋದಿಯ ಅಭಿಮಾನಿ’ ಎಂದ ಎಲಾನ್ ಮಸ್ಕ್! – ಭಾರತದಲ್ಲೂ ಹೂಡಿಕೆ ಮಾಡಲು ವಿಶ್ವದ ನಂ.1 ಶ್ರೀಮಂತ ರೆಡಿ!

ನ್ಯೂಸ್ ಆ್ಯರೋ : ಜಗತ್ತಿನ ನಂ.1 ನಾಯಕ ನರೇಂದ್ರ ಮೋದಿ ಹಾಗೂ ಜಗತ್ತಿನ ನಂ.1 ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಲಾನ್ ಮಸ್ಕ್ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಟ ಸುದ್ದಿಯಾಗಿದೆ. ಸದ್ಯ, ಅಮೆರಿಕಾ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ನ್ಯೂಯಾರ್ಕ್ ನಲ್ಲಿ ಅನಿವಾಸಿ ಭಾರತೀಯರು ಹಾಗೂ ಅಮೆರಿಕನ್ನರಿಂದ ಭರ್ಜರಿ ಸ್ವಾಗತ ಲಭಿಸಿದೆ.‌ಇದೇ ವೇಳೆ ಮೋದಿ ಟೆಸ್ಲಾ ಹಾಗೂ ಟ್ವಿಟ್ಟರ್ ಒಡೆಯ ಎಲಾನ್ ಮಾಸ್ಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಭೇಟಿಯ‌ ನಂತರ ಮಸ್ಕ್ ಭಾರತ ಹಾಗೂ ಪ್ರಧಾನಿಯನ್ನು ಹಾಡಿ‌ ಹೊಗಳಿರುವ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

‘ನಾನು ಮೋದಿಯ ಅಭಿಮಾನಿ’ ಎಂದ ಮಸ್ಕ್!

ಅಮೆರಿಕಾ ಪ್ರವಾಸದ ವೇಳೆ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಎಲಾನ್ ಮಸ್ಕ್ ಭೇಟಿಯ ನಂತರ, ‘ನಾನು ಮೋದಿಯವರು ಅಭಿಮಾನಿ. ಭಾರತದಲ್ಲಿ ಹೊಸ ಕಂಪೆನಿಗಳ ಸ್ಥಾಪನೆಗೆ ಮೋದಿ ಪ್ರೋತ್ಸಾಹ ನೀಡುತ್ತಾರೆ. ನಾವು ಕೂಡ ಭಾರತಕ್ಕೆ ಅಗತ್ಯವಿರುವ ಸಹಕಾರ ನೀಡಲು ಸಿದ್ಧರಾಗಿದ್ದೇವೆ. ವ್ಯಾಪಾರ, ವಾಣಿಜ್ಯ ಹಾಗೂ ರಾಜತಾಂತ್ರಿಕ ವಿಚಾರದಲ್ಲಿ ಭಾರತ ಹಾಗೂ ಅಮೆರಿಕಾದ ಸಂಬಂಧ ಹೀಗೆ ಇರಬೇಕು ಎಂಬುದು ನನ್ನ ಆಶ್ರಯ’ ಎಂದಿದ್ದಾರೆ.

ಭಾರತಕ್ಕೆ ಉತ್ತಮ ಭವಿಷ್ಯವಿದೆ..!

ಮಾತು ಮುಂದುವರೆಸಿದ ಮಸ್ಕ್, ‘ನನಗೆ ಭಾರತದ ಮಹೋನ್ನತ ಭವಿಷ್ಯದ ಬಗ್ಗೆ ಭರವಸೆಯಿದೆ. ಅದನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದೇನೆ. ಪ್ರಪಂಚದ ಬಹುತೇಕ ರಾಷ್ಟ್ರಗಳಿಗಿಂತ ಭಾರತ ಹೆಚ್ಚು ಅಭಿವೃದ್ಧಿಯಾಗಿದೆ. ಸದ್ಯದಲ್ಲೇ ಟೆಸ್ಲಾ ಕಂಪೆನಿ‌ ಭಾರತದಲ್ಲೂ ಸ್ಥಾಪನೆಯಾಗಲಿದೆ. ಇದರೊಂದಿಗೆ ಭಾರತದಲ್ಲೂ ಸ್ಟಾರ್ ಲಿಂಕ್ ಸೇವೆ ಆರಂಭಿಸುವುದರಿಂದ ಅಲ್ಲಿನ ಗ್ರಾಮೀಣ ಜನರಿಗೆ ಹೆಚ್ಚು ಉಪಯೋಗವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ವಿಶ್ವದ ಪ್ರಬಲ ನಾಯಕರ ಸಾಲಿನಲ್ಲಿರುವ ನರೇಂದ್ರ ಮೋದಿ ಅಮೆರಿಕಾ ಹಾಗೂ ಈಜಿಪ್ಟ್ ದೇಶಗಳಿಗೆ ಐತಿಹಾಸಿಕ‌ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸ ಹಲವು ಹೊಸತುಗಳಿಗೆ ವೇದಿಕೆಯಾಗಲಿದೆ. ಅಮೆರಿಕಾದ ಆಹ್ವಾನಿತರಾಗಿ ದೇಶಕ್ಕೆ ಭೇಟಿ ನೀಡುತ್ತಿರುವ ಭಾರತದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಗೆ ಮೋದಿಯವರದ್ದು. ಇದರೊಂದಿಗೆ ಅಮೆರಿಕದ ಸಂಸತ್ತು ಉದ್ದೇಶಿಸಿ ಎರಡನೇ ಬಾರಿ ಭಾಷಣ ಮಾಡುತ್ತಿರುವ ಏಕೈಕ‌ ಪ್ರಧಾನಿ ನರೇಂದ್ರ ಮೋದಿ’ ಎಂದು ಎಲಾನ್ ಮಸ್ಕ್ ಬಣ್ಣಿಸಿದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *