ವಿಶ್ವದ ಶಕ್ತಿಶಾಲಿ ಸೈನಿಕರನ್ನೊಳಗೊಂಡ ದೇಶಗಳ ಪಟ್ಟಿ ಬಿಡುಗಡೆ – ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ವಿಶ್ವದ ಶಕ್ತಿಶಾಲಿ ಸೈನಿಕರನ್ನೊಳಗೊಂಡ ದೇಶಗಳ ಪಟ್ಟಿ ಬಿಡುಗಡೆ – ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ನ್ಯೂಸ್ ಆ್ಯರೋ‌ : ವಿಶ್ವದ ಅತ್ಯಂತ ಶಕ್ತಿಶಾಲಿ ಸೈನಿಕರನ್ನು ಹೊಂದಿದ ದೇಶಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತ ನಾಲ್ಕನೇಯ ಸ್ಥಾನದಲ್ಲಿದೆ. ಜಾಗತಿಕ ರಕ್ಷಣಾ ಮಾಹಿತಿಯನ್ನು ಮೇಲ್ವಿಚಾರಣೆ ನಡೆಸುವ ಡೇಟಾ ವೆಬ್ ಸೈಟ್ ಗ್ಲೋಬಲ್ ಫೈರ್ ಪವರ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮೊದಲ ಸ್ಥಾನದಲ್ಲಿ ಯುಎಸ್ಎ
ಪ್ರಕಟಗೊಂಡಿರುವ ಪಟ್ಟಿಯಲ್ಲಿ ಯುಎಸ್ ಮೊದಲ ಸ್ಥಾನದಲ್ಲಿದ್ದು, ರಷ್ಯಾ ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ. ಮೂರನೇ ಸ್ಥಾನದಲ್ಲಿ ಚೀನಾ ಇದೆ. ಭಾರತ ನಾಲ್ಕನೇ ಸ್ಥಾನದೊಂದಿಗೆ ಟಾಪ್ ಫೈವ್ ಲಿಸ್ಟ್ ನಲ್ಲಿ ಕಾಣಿಸಿಕೊಂಡಿದೆ.

ಶಕ್ತಿಶಾಲಿ ಸೈನಿಕ ವ್ಯವಸ್ಥೆ ಹೊಂದಿದ ಟಾಪ್ 10 ದೇಶಗಳು

  1. ಅಮೆರಿಕ
  2. ರಷ್ಯಾ
  3. ಚೀನಾ
  4. ಭಾರತ
  5. ಯುಕೆ
  6. ದಕ್ಷಿಣ ಕೊರಿಯಾ
  7. ಪಾಕಿಸ್ತಾನ
  8. ಜಪಾನ್
  9. ಫ್ರಾನ್ಸ್
  10. ಇಟಲಿ

ಇದರ ಜೊತೆಗೆ ವಿಶ್ವದ ದುರ್ಬಲ ಮಿಲಿಟರಿ ಪಡೆಗಳನ್ನು ಹೊಂದಿರುವ ದೇಶಗಳನ್ನೂ ಹೆಸರಿಸಲಾಗಿದೆ. ಇದರಲ್ಲಿ ನಮ್ಮ ನೆರೆ ದೇಶ ಭೂತಾನ್ ಮತ್ತು ಐಸ್ ಲ್ಯಾಂಡ್ ಕೂಡ ಸೇರಿದೆ.

ಕಡಿಮೆ ಶಕ್ತಿಶಾಲಿ ಸೈನ್ಯವನ್ನು ಹೊಂದಿರುವ 10 ರಾಷ್ಟ್ರಗಳು

  1. ಭೂತಾನ್
  2. ಬೆನಿನ್
  3. ಮೊಲ್ಡಾವಾ
  4. ಸೊಮಾಲಿಯ
  5. ಲೈಬೀರಿಯ
  6. ಸುರಿನಾಮ್
  7. ಬೆಲೀಜ್
  8. ಮದ್ಯ ಆಫ್ರಿಕನ್ ಗಣರಾಜ್ಯ
  9. ಐಸ್ ಲ್ಯಾಂಡ್
  10. ಸಿಯೆರ್ರಾ ಲಿಯೋನ್

ಮಾನದಂಡವೇನು?

60ಕ್ಕೂ ಹೆಚ್ಚು ಅಂಶಗಳ ಆಧಾರದಲ್ಲಿ ಮೌಲ್ಯ ಮಾಪನ ಮಾಡಲಾಗಿದೆ. ಮಿಲಿಟರಿ ಘಟಕಗಳ ಪ್ರಮಾಣ, ಆರ್ಥಿಕ ಸ್ಥಿತಿ, ಲಾಜಿಸ್ಟಿಕ್ಸ್ ಶಕ್ತಿ ಮತ್ತು ಭೌಗೋಳಿಕ ಸ್ಥಳದವರೆಗಿನ ವಿಭಾಗಗಳೊಂದಿಗೆ ತುಲನೆ ಮಾಡಲಾಗಿದೆ ಎಂದು ವೆಬ್ ಸೈಟ್ ಹೇಳಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *