ಫ್ರಾನ್ಸ್ ಜೊತೆ 90 ಸಾವಿರ ಕೋಟಿ ರೂ. ಒಪ್ಪಂದಕ್ಕೆ ಮುಂದಾದ ಭಾರತ; ರಫೇಲ್, ಜಲಾಂತರ್ಗಾಮಿ ಖರೀದಿಸಲು ಆಸಕ್ತಿ

ಫ್ರಾನ್ಸ್ ಜೊತೆ 90 ಸಾವಿರ ಕೋಟಿ ರೂ. ಒಪ್ಪಂದಕ್ಕೆ ಮುಂದಾದ ಭಾರತ; ರಫೇಲ್, ಜಲಾಂತರ್ಗಾಮಿ ಖರೀದಿಸಲು ಆಸಕ್ತಿ

ನ್ಯೂಸ್ ಆ್ಯರೋ‌: ಈ ಹಿಂದೆ ಫ್ರಾನ್ಸ್ ನಿಂದ 36 ರಫೇಲ್ ಯುದ್ದ ವಿಮಾನಗಳನ್ನು ಖರೀದಿಸಿದ್ದ ಭಾರತ ಇದೀಗ ಇನ್ನೂ 26 ಈ ಮಾದರಿಯ ವಿಮಾನ ಖರೀದಿಸಲು ಮುಂದಾಗಿದೆ.

ಶೀಘ್ರ ಒಪ್ಪಂದ ಸಾಧ್ಯತೆ
ಭಾರತೀಯ ರಕ್ಷಣಾ ಪಡೆಗಳು ಸಚಿವಾಲಯದ ಮುಂದೆ ರಫೇಲ್ ಖರೀದಿಯ ಪ್ರಸ್ತಾವನೆಯನ್ನಿಟ್ಟಿವೆ. ಈ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಫ್ರಾನ್ಸ್ ಗೆ ಭೇಟಿ ನೀಡಲಿದ್ದು, ಈ ವೇಳೆ ರಫೇಲ್ ಖರೀದಿಗೆ ಸಂಬಂಧಿಸಿದ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

90 ಸಾವಿರ ಕೋಟಿ ರೂ. ವೆಚ್ಚ
ರಫೇಲ್ ಜೊತೆಗೆ ಭಾರತ ಫ್ರಾನ್ಸ್ ನಿಂದ 3 ಸ್ಕಾರ್ಪೀನ್ ವರ್ಗದ ಜಲಾಂತರ್ಗಾಮಿ ನೌಕೆಗಳನ್ನೂ ಖರೀದಿಸಲಿದೆ. ಇದಕ್ಕೆಲ್ಲ ಒಟ್ಟು 90 ಸಾವಿರ ಕೋಟಿ ರೂ. ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಪೂರ್ಣ ಮಾತುಕತೆ ನಡೆದ ಬಳಿಕವೇ ಅಂತಿಮ ವೆಚ್ಚ ಸ್ಪಷ್ಟವಾಗಲಿದೆ. ಭಾರತಕ್ಕೆ ರಿಯಾಯಿತಿ ದೊರೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ದೇಶಾದ್ಯಂತ ಭದ್ರತಾ ಸವಾಲುಗಳ ದೃಷ್ಟಿಯಿಂದ ಭಾರತೀಯ ನೌಕಾಪಡೆಯು ಕೊರತೆ ಎದುರಿಸುತ್ತಿರುವ ಕಾರಣ ಈ ಯುದ್ಧ ವಿಮಾನ ಮತ್ತು ಜಲಾಂತರ್ಗಾಮಿ ನೌಕೆಗಳ ಖರೀದಿಗೆ ರಕ್ಷಣಾ ಪಡೆಗಳು ಪ್ರಸ್ತಾವ ಸಲ್ಲಿಸಿವೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *