ಸಂತೆಯಲ್ಲಿ ತರಕಾರಿ ಕೊಳ್ಳುವಂತೆ ದುಬಾರಿ ಕಾರುಗಳನ್ನು ಖರೀದಿಸಿ ಅರೆಸ್ಟ್ ಆದ ವ್ಯಕ್ತಿ – ಈ ವೈರಲ್ ವಿಡಿಯೋ ಹಿಂದಿನ ಅಸಲಿಯತ್ತು ಏನ್ ಗೊತ್ತಾ?

ಸಂತೆಯಲ್ಲಿ ತರಕಾರಿ ಕೊಳ್ಳುವಂತೆ ದುಬಾರಿ ಕಾರುಗಳನ್ನು ಖರೀದಿಸಿ ಅರೆಸ್ಟ್ ಆದ ವ್ಯಕ್ತಿ – ಈ ವೈರಲ್ ವಿಡಿಯೋ ಹಿಂದಿನ ಅಸಲಿಯತ್ತು ಏನ್ ಗೊತ್ತಾ?

ನ್ಯೂಸ್ ಆ್ಯರೋ : ಫೇಮಸ್ ಆಗುವುದಕ್ಕಾಗಿ ಭಿನ್ನ ವಿಭಿನ್ನ ರೀತಿಯಲ್ಲಿ ರೀಲ್ಸ್ ಗಳನ್ನು ಮಾಡುವ ಲಕ್ಷಾಂತರ ಜನ‌ ಇಂದು‌ ಸೋಶಿಯಲ್ ಮೀಡಿಯಾದಲ್ಲಿ ಇದ್ದಾರೆ. ಇತ್ತೀಚೆಗೆ ವ್ಯಕ್ತಿಯೊಬ್ಬ ಸಂತೆಯಲ್ಲಿ ಹಣ್ಣು ತರಕಾರಿ ಖರೀದಿಸುವಂತೆ ದುಬಾರಿ ಕಾರುಗಳನ್ನು ಖರೀದಿ ಮಾಡುವ ವಿಡಿಯೋ ಒಂದು ಸಕ್ಕತ್ ವೈರಲ್ ಆಗಿತ್ತು. ಇದನ್ನು‌ ಕಂಡ ನೆಟ್ಟಿಗರು‌ ದಂಗಾದರು. ಯಾರಾಪ್ಪಾ ಈ ಕುಬೇರ ಪುತ್ರ ಎಂದು ಆಶ್ಚರ್ಯ ಪಟ್ಟರು. ಆದರೆ ಇದೀಗ ಆ ವ್ಯಕ್ತಿಯನ್ನು‌ ಪೊಲೀಸರು‌ ಕಂಬಿ ಹಿಂದೆ ಕಳುಹಿಸಿದ್ದಾರೆ.

ಯಾಕೆ ಗೊತ್ತಾ?

ದುಬೈ ಸೇರಿದಂತೆ ಇನ್ನಿತರ ಮುಸ್ಲಿಂ ರಾಷ್ಟ್ರದ ಶೇಖ್ ಗಳು ಬಿಳಿ ಬಣ್ಣದ ನಿಲುವಂಗಿ ಧರಿಸುತ್ತಾರೆ. ಆದರೆ ಶ್ರೀಮಂತ ಶೇಖ್ ಗಳಂತೆ ಈ ಬಟ್ಟೆ ಧರಿಸಿದವರೆಲ್ಲ ಅತೀ ಶ್ರೀಮಂತರು‌ ಎಂದು ನೆನೆಯುವುದು ತಪ್ಪು. ಇತ್ತೀಚೆಗೆ ದುಬೈನಲ್ಲಿ ಶೇಖ್ ಗಳಂತೆ ಬಟ್ಟೆ ತೊಟ್ಟು ಕಾರ್ ಶೋ ರೂಂ ನಲ್ಲಿ ಸಂತೆಯಲ್ಲಿ ತರಕಾರಿ ಖರೀದಿ ಮಾಡಿದಂತೆ ದುಬಾರಿ ವಾಹನಗಳನ್ನು ಖರೀದಿ ಮಾಡುವ ವಿಡಿಯೋ ವೈರಲ್ ಆಗಿತ್ತು.

ವಿಡಿಯೋದಲ್ಲಿ ಏನಿದೆ?

ಬಿಳಿ‌ ನಿಲುವಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಬಾಕ್ಸ್ ತುಂಬ ಹಣ ಹೊತ್ತು‌ ತಂದು ದುಬಾರಿ‌ ಕಾರಿಗಳನ್ನು ಸಂತೆಯಲ್ಲಿ ತರಕಾರಿ ಖರೀದಿಸುವಂತೆ ಕೊಳ್ಳುತ್ತಾನೆ‌. ಜೊತೆಗೆ ಅಲ್ಲಿದ್ದ ಕಾರ್ಮಿಕರತ್ತ ಹಣ ಎಸೆಯುತ್ತಾನೆ. ಇದನ್ನು‌ ಕಂಡವರೆಲ್ಲ ಆಶ್ಚರ್ಯ ಪಟ್ಟಿದ್ದರು. ಅಬ್ಬಬ್ಬಾ.. ಎಷ್ಟೊಂದು ಶ್ರೀಮಂತ ಈತ ಎಂದು ಉದ್ಘರಿಸಿದ್ದರು. ಎಷ್ಟೋ ಜನ ಮನುಷ್ಯ ಬದುಕಿದರೆ ಇವನಂತೆ ಬದುಕಬೇಕು ಎಂದು ಕಮೆಂಟ್ ಹಾಕಿದ್ದರು.

ರೀಲ್ಸ್ ಮೇಕರ್ ಬಂಧನ!

ಈ ರೀತಿ ಐಶಾರಾಮಿ‌ ಬದುಕಿನ ರೀಲ್ಸ್ ವೈರಲ್ ಆಗುತ್ತಿದ್ದಂತೆ ವ್ಯಕ್ತಿಯ ಬಂಧನವಾಗಿದೆ‌. ಅಸಲಿಗೆ ಇದು ನಕಲಿ ವಿಡಿಯೋವಾಗಿತ್ತು. ದುಬೈ ಶೇಖ್ ನಂತೆ ಪೋಸ್ ಕೊಡುತ್ತಿರುವ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಜೊತೆಗೆ ವಿಡಿಯೋ ಮಾಡಲು ಆತ ದುಬೈನ ಸಾಂಪ್ರದಾಯಿಕ ಬಟ್ಟೆ ತೊಟ್ಟ ಕಾರಣ ದುಬೈ ಸರ್ಕಾರ ಈತನನ್ನು ಹಾಗೂ ವಿಡಿಯೋ ಮಾಡಿದ್ದ ಶೋ ರೂಂ ಮಾಲೀಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *