ಜಗತ್ತಿನ ‘ಅತ್ಯಂತ ಹೆಚ್ಚಿನ ನೋವು’ ಅನುಭವಿಸುತ್ತಿರುವ 10 ವರ್ಷದ ಬಾಲೆ – ಆಸ್ಟ್ರೇಲಿಯಾದ ಈ ಬಾಲಕಿಗೇನಾಯ್ತು?

ಜಗತ್ತಿನ ‘ಅತ್ಯಂತ ಹೆಚ್ಚಿನ ನೋವು’ ಅನುಭವಿಸುತ್ತಿರುವ 10 ವರ್ಷದ ಬಾಲೆ – ಆಸ್ಟ್ರೇಲಿಯಾದ ಈ ಬಾಲಕಿಗೇನಾಯ್ತು?

ನ್ಯೂಸ್ ಆ್ಯರೋ‌ : ಆಸ್ಟ್ರೇಲಿಯಾದ 10 ವರ್ಷದ ಬೆಲ್ಲಾ ಮ್ಯಾಕೆ (Bella Macey) ಎನ್ನುವ 10 ವರ್ಷದ ಬಾಲಕಿ ಅಪರೂಪದಲ್ಲಿ ಅಪರೂಪ ಎನಿಸುವ ಕಾಂಪ್ಲೆಕ್ಸ್ ರೀಜನಲ್ ಪೈನ್ ಸಿಂಡ್ರೋಮ್ (ಸಿ.ಆರ್.ಪಿ.ಎಸ್.) ಕಾಯಿಲೆಯಿಂದ ಬಳಲುತ್ತಿದ್ದಾಳೆ. ಮಾನವ ಕುಲದ ಅತ್ಯಂತ ಹೆಚ್ಚಿನ ನೋವಿನ ಸ್ಥಿತಿ (most painful condition known to mankind) ಇದು ಎಂದೇ ಇದನ್ನು ಪರಿಗಣಿಸಲಾಗುತ್ತದೆ. ಈ ಕಾಯಿಲೆ ಆಕೆಯ ಬಲಗಾಲಿಗೆ ಕಾಣಿಸಿಕೊಂಡಿದ್ದು ಸ್ವಲ್ಪ ಚಲಿಸಿದರೆ ಅಥವಾ ಯಾರಾದರೂ ಮೆಲ್ಲನೆ ಸ್ಪರ್ಶಿಸಿದರೂ ಸಹಿಸಲಸಾಧ್ಯ ನೋವು ಉಂಟಾಗುತ್ತದೆ.

ಪ್ರವಾಸದ ಬಳಿಕ ಒಕ್ಕರಿಸಿದ ಕಾಯಿಲೆ

”ಬೆಲ್ಲಾ ಆರಂಭದಲ್ಲಿ ಆರೋಗ್ಯವಂತಳಾಗಿಯೇ ಇದ್ದಳು. ಕೊರೊನಾ ಬಳಿಕ ಫಿಜಿ ಪ್ರವಾಸಕ್ಕೆ ಹೋಗಿ ಬಂದ ನಂತರ ಹೀಗಾಗಿದ್ದಾಳೆ. ರಜೆಯ ಸಂದರ್ಭದಲ್ಲಿ ಆಕೆಯ ಕಾಲಿನಲ್ಲಿ ಚಿಕ್ಕ ಗುಳ್ಳೆ ಕಾಣಿಸಿಕೊಂಡಿತ್ತು. ಬಳಿಕ ಇಡೀ ಕಾಲು ಸೋಂಕಿಗೆ ಒಳಗಾಯಿತು” ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.

”ತೀಕ್ಷ್ಣ ನೋವು ಕಾಣಿಸಿಕೊಳ್ಳುತ್ತಿದೆ. ಕಾಲು ಉರಿಯುವುದು ಮಾತ್ರವಲ್ಲ ಜುಮುಗುಡುತ್ತಿದೆ. ಒಟ್ಟಿನಲ್ಲಿ ಎಲ್ಲಾ ರೀತಿಯ ನೋವಿನ ಅನುಭವವೂ ಆಗುತ್ತಿದೆ. ಸ್ನಾನ ಮಾಡಲು ಆಗುತ್ತಿಲ್ಲ. ಕಾಲಿಗೆ ಪೇಪರ್ ತುಂಡು ಬಿಡಿ ಟಿಶ್ಯೂ ಪೇಪರ್ ತಾಗಿದರೂ ಭಯಂಕರ ನೋವಾಗುತ್ತದೆ” ಎಂದು ಬೆಲ್ಲಾ ತಿಳಿಸಿದ್ದಾಳೆ.

ಅಮೆರಿಕಕ್ಕೆ ಹಾರಲು ಸಿದ್ದತೆ

ಈ ಕಾಯಿಲೆಗೆ ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ ಲಭ್ಯವಿಲ್ಲ ಎಂದು ತಿಳಿದ ಆಕೆಯ ಕುಟುಂಬ ಇದೀಗ ಅಮೆರಿಕಕ್ಕೆ ಹಾರಲು ಚಿಂತನೆ ನಡೆಸಿದೆ. ಅರ್ಕಾನ್ಸಾಸ್ನ ಫಯೆಟ್ಟೆವಿಲ್ಲೆಯಲ್ಲಿರುವ ಸ್ಪೆರೊ ಕ್ಲಿನಿಕ್ ನಲ್ಲಿ ಬೆಲ್ಲಾಗೆ ಸೂಕ್ತ ಚಿಕಿತ್ಸೆ ದೊರೆಯುವ ನಿರೀಕ್ಷೆಯಲ್ಲಿದೆ ಆಕೆಯ ಕುಟುಂಬ.

ಹರಿದು ಬಂದ ನೆರವು

ಬೆಲ್ಲಾ ಚಿಕಿತ್ಸೆಗೆ ಲಕ್ಷಗಟ್ಟಲೆ ರೂ. ಬೇಕಾಗಿರುವುದರಿಂದ ಹೆತ್ತವರು ದಾನಿಗಳ ಮೊರೆ ಹೋಗಿದ್ದರು. ”ಕೆಲವು ತಿಂಗಳ ಹಿಂದೆ ಎಲ್ಲವೂ ಬದಲಾಯಿತು. ಬೆಲ್ಲಾ ನೋವಿನಿಂದ ಕುಸಿದು ಬಿದ್ದಳು. ಈ ಸಿ.ಆರ್.ಪಿ.ಸಿ. ಕಾಯಿಲೆ ಆಕೆಯ ಬಾಲ್ಯವನ್ನು ಕಸಿಯುತ್ತಿದೆ. ಬಲಗಾಲನ್ನು ಚಲಿಸಲು ಸಾಧ್ಯವಾಗದೆ ಒದ್ದಾಡುತ್ತಿದ್ದಾಳೆ. ಅವಳು ಹಾಸಿಗೆಯಲ್ಲಿ ಅಥವಾ ವ್ಹೀಲ್ ಚೇರ್ ನಲ್ಲಿಯೇ ದಿನ ದೂಡಬೇಕಾಗಿದೆ” ಎಂದು ಹೆತ್ತವರು ನೋವಿನಿಂದ ಹೇಳುತ್ತಾರೆ. ಇದೀಗ ಸುಮಾರು 2,000 ಮಂದಿ ನೆರವು ನೀಡಿ ಪುಟಾಣಿಯ ಚಿಕಿತ್ಸೆಗೆ ನೆರವಾಗಿದ್ದಾರೆ. ಇವರಿಗೆಲ್ಲ ಬೆಲ್ಲಾ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.

ಏನಿದು ಸಿ.ಆರ್.ಪಿ.ಸಿ.?

ಅಮೆರಿಕದಲ್ಲಿ ಸಿ.ಆರ್.ಪಿ.ಸಿ. (CRPC) ಯನ್ನು ಆತ್ಮಹತ್ಯೆಯ ಕಾಯಿಲೆ ಎಂದು ಕರೆಯಲಾಗುತ್ತದೆ. ಈ ಅಪರೂಪದ ಕಾಯಿಲೆ ಬಾಧಿಸಿದವರು ನೋವು ತಡೆದುಕೊಳ್ಳುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ಭಾವಿಸುವುದೇ ಇದಕ್ಕೆ ಕಾರಣ. ಈ ಸೋಂಕಿಗೆ ಒಳಗಾದವರಿಗೆ ಓಡಾಡಲು, ಸರಿಯಾಗಿ ನಿದ್ರಿಸಲು, ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *