ಬ್ರಹ್ಮಾಂಡದ ರಹಸ್ಯ ಅರಿಯಲು ಹೊರಟ ಎಲಾನ್ ಮಸ್ಕ್ – ಕನಸಿನ ಎಕ್ಸ್.ಎ.ಐ. ಸಂಸ್ಥೆ ಸ್ಥಾಪನೆ

ಬ್ರಹ್ಮಾಂಡದ ರಹಸ್ಯ ಅರಿಯಲು ಹೊರಟ ಎಲಾನ್ ಮಸ್ಕ್ – ಕನಸಿನ ಎಕ್ಸ್.ಎ.ಐ. ಸಂಸ್ಥೆ ಸ್ಥಾಪನೆ

ನ್ಯೂಸ್ ಆ್ಯರೋ‌ : ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಇದೀಗ ಬ್ರಹ್ಮಾಂಡದ ರಹಸ್ಯ ತಿಳಿಯಲು ಹೊರಟಿದ್ದಾರೆ. ಇದಕ್ಕಾಗಿ ತಮ್ಮದೇ ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆಂಟ್ಸ್-ಎ.ಐ.) ಕಂಪೆನಿ ಹುಟ್ಟು ಹಾಕಿದ್ದಾರೆ.

ವಿಶ್ವದ ನಿಜ ಸ್ವರೂಪ ತಿಳಿಯಲು ಯತ್ನ

ಎಕ್ಸ್.ಎ.ಐ. ಎಂಬ ಸಂಸ್ಥೆ ಸ್ಥಾಪಿಸಿರುವ ಎಲಾನ್ ಮಸ್ಕ್ ವಿಶ್ವದ ನಿಜ ಸ್ವರೂಪದ ಅಧ್ಯಯನ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಈ ಸ್ಟಾರ್ಟ್ ಅಪ್ ನಲ್ಲಿ ಗೂಗಲ್ ರಿಸರ್ಚ್, ಮೈಕ್ರೋಸಾಫ್ಟ್ ರಿಸರ್ಚ್, ಓಪನ್ ಎ.ಐ., ಡೀಪ್ ಮೈಂಡ್, ಟ್ವಿಟರ್, ಟೆಸ್ಲಾ ಮುಂತಾದ ಕಂಪೆನಿಗಳಲ್ಲಿ ಕೆಲಸ ಮಾಡಿದ ಪರಿಣಿತರು ಇದ್ದಾರೆ ಎನ್ನಲಾಗಿದೆ.

ಆರಂಭದಲ್ಲಿ ಓಪನ್ ಎ.ಐ.ಗೆ ಎಲಾನ್ ಮಸ್ಕ್ ಬಂಡವಾಳ ಹೂಡಿದ್ದರು. ಬಳಿಕ ಅದರಿಂದ ಹೊರ ಬಂದಿದ್ದರು. ಓಪನ್ ಎ.ಐ.ಯಿಂದ ಜಿಪಿಟಿ-4 ಬಿಡುಗಡೆಯಾದಾಗ ಎಲಾನ್ ಮಸ್ಕ್ ತಾವೂ ಒಂದು ಎ.ಐ. ಮಾಡಲ್ ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದರು. ಅದರ ಭಾಗವಾಗಿ ಅವರು ಎನ್ ವಿಡಿಯಾ ಸಂಸ್ಥೆಯಿಂದ ಸಾವಿರಾರು ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್ ಪಡೆದುಕೊಂಡಿದ್ದರು.

ಭಾರೀ ಮೊತ್ತದ ಬಂಡವಾಳ ಹೂಡಿ ಎ.ಐ. ಜಗತ್ತಿನಲ್ಲಿ ಅಧಿಪತ್ಯ ಸ್ಥಾಪಿಸಿರುವ ಗೂಗಲ್ ಓಪನ್ ಎ.ಐ. ಕಂಪೆನಿಗಳಿಗೆ ಎಲಾನ್ ಮಸ್ಕ್ ಅವರ ಎಕ್ಸ್.ಎ.ಐ. ಎಷ್ಟರ ಮಟ್ಟಿಗೆ ಸ್ಪರ್ಧೆ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *