ಹಗಲಿಗಿಂತ ರಾತ್ರಿ ರೈಲಿನ ವೇಗ ಹೆಚ್ಚಿರುತ್ತದೆ ಯಾಕೆ? – ಸಿಂಪಲ್‌ ಆದ್ರೂ ನಿಮಗೆ ಈ ಸತ್ಯ‌ ತಿಳಿದಿರಲಿ..!!

ಹಗಲಿಗಿಂತ ರಾತ್ರಿ ರೈಲಿನ ವೇಗ ಹೆಚ್ಚಿರುತ್ತದೆ ಯಾಕೆ? – ಸಿಂಪಲ್‌ ಆದ್ರೂ ನಿಮಗೆ ಈ ಸತ್ಯ‌ ತಿಳಿದಿರಲಿ..!!

ನ್ಯೂಸ್ ಆ್ಯರೋ‌ : ಆರಾಮದಾಯಕ ದೂರ ಪ್ರಯಾಣಕ್ಕೆ ಹಲವರ ಮೊದಲ ಆಯ್ಕೆ ರೈಲು. ನೀವು ರೈಲು ಪ್ರಯಾಣದ ವೇಳೆ ಹಗಲಿಗಿಂತ ರಾತ್ರಿ ವೇಗ ಹೆಚ್ಚಿರುವುದನ್ನು ಗಮನಿಸಿರಬಹುದು. ಅದು ಯಾಕೆ ಎನ್ನುವುದರ ವಿವರ ಇಲ್ಲಿದೆ.

ರಾತ್ರಿ ರೈಲುಗಳು ವೇಗವಾಗಿ ಹೋಗಲು ಹಲವು ಕಾರಣಗಳಿವೆ. ಈ ವೇಳೆ ರೈಲ್ವೇ ಹಳಿಯಲ್ಲಿ ಸಂಚಾರ ತೀರಾ ಕಡಿಮೆ ಇರುತ್ತದೆ. ರಾತ್ರಿಯಾದರೆ ರೈಲು ಹಳಿ ಮೇಲೆ ಜನ, ಪ್ರಾಣಿಗಳ ಓಡಾಟ ಕಡಿಮೆ ಆಗುತ್ತದೆ. ಜೊತೆಗೆ ರಾತ್ರಿ ಹಳಿಯಲ್ಲಿ ಯಾವುದೇ ನಿರ್ವಹಣಾ ಕಾರ್ಯ ನಡೆಯುವುದಿಲ್ಲ. ಹಾಗಾಗಿ ರೈಲಿನ ವೇಗ ಹೆಚ್ಚಾಗಿರುತ್ತದೆ.

ಲೋಕೋ ಪೈಲಟ್‌ಗೆ ಅನುಕೂಲ

ಒಂದು ರೀತಿಯಲ್ಲಿ ರಾತ್ರಿ ಸಂಚಾರ ಲೋಕೋ ಪೈಲಟ್‌ (ರೈಲಿನ ಚಾಲಕ) ಗೆ ಹೆಚ್ಚು ಅನುಕೂಲ. ಸಿಗ್ನಲ್‌ಗಳನ್ನು ದೂರದಿಂದ ಸುಲಭದಲ್ಲಿ ನೋಡಬಹುದು ಎನ್ನುವುದು ಇದಕ್ಕೆ ಮುಖ್ಯ ಕಾರಣ. ಇದರಿಂದ ಲೋಕೋ ಪೈಲಟ್‌ ಗೆ ರೈಲು ನಿಲ್ಲಿಸಬೇಕೆ ಅಥವಾ ಬೇಡವೇ ಎಂದು ದೂರದಿಂದಲೇ ತಿಳಿಯುತ್ತದೆ. ಈ ಕಾರಣದಿಂದಲೂ ರಾತ್ರಿ ರೈಲಿನ ವೇಗವನ್ನು ಹೆಚ್ಚಿಸುತ್ತಾರೆ.

ಹಗಲಿನಲ್ಲಿ ಪ್ರಯಾಣಿಕರ ನೂಕು ನುಗ್ಗಲು ಇರುತ್ತದೆ ಮತ್ತು ಸಾಕಷ್ಟು ಜನ ದಟ್ಟಣೆ ಸಹ ಇರುತ್ತದೆ. ಹಾಗಾಗಿ ಹೆಚ್ಚು ಜಾಗರೂಕತೆಯಿಂದ ರೈಲನ್ನು ಚಾಲನೆ ಮಾಡಬೇಕಾಗುತ್ತದೆ. ಹೀಗಾಗಿ ಹಗಲು ವೇಗ ಸ್ವಲ್ಪ ಕಡಿಮೆ ಇರುತ್ತದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *