‘ಗಿಚ್ಚಿ ಗಿಲಿ ಗಿಲಿ’ ಸೀಸನ್ 2 ವಿನ್ನರ್ ಚಂದ್ರಪ್ರಭ ಗೆದ್ದಿದ್ದೆಷ್ಟು? – ಉಳಿದ ಸ್ಪರ್ಧಿಗಳು ಬಾಚಿಕೊಂಡಿದ್ದೆಷ್ಟು ಗೊತ್ತಾ?

‘ಗಿಚ್ಚಿ ಗಿಲಿ ಗಿಲಿ’ ಸೀಸನ್ 2 ವಿನ್ನರ್ ಚಂದ್ರಪ್ರಭ ಗೆದ್ದಿದ್ದೆಷ್ಟು? – ಉಳಿದ ಸ್ಪರ್ಧಿಗಳು ಬಾಚಿಕೊಂಡಿದ್ದೆಷ್ಟು ಗೊತ್ತಾ?

ನ್ಯೂಸ್ ಆ್ಯರೋ‌ : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಶೋ ‘ಗಿಚ್ಚಿ ಗಿಲಿ ಗಿಲಿ’ ಸೀಸನ್ 2 ಕಳೆದ ವಾರ ಅಂತ್ಯಗೊಂಡಿದೆ. ಚಾಂಪಿಯನ್ ಆಗಿ ಜನಪ್ರಿಯ ಹಾಸ್ಯನಟ ಚಂದ್ರಪ್ರಭ ಆಯ್ಕೆಯಾಗಿದ್ದಾರೆ.

ಬಹುಮಾನ ಮೊತ್ತ

ಪ್ರೇಕ್ಷಕರನ್ನು ರಂಜಿಸಿದ ವಿನ್ನರ್ ಚಂದ್ರಪ್ರಭ ಅವರಿಗೆ ವಿನ್ನರ್ ಟ್ರೋಫಿ ಜೊತೆಗೆ 3 ಲಕ್ಷ ರೂ. ನಗದು ಲಭಿಸಿದೆ. ಮೊದಲ ರನ್ನರ್ ಅಪ್ ಆಗಿ ರಾಘವೇಂದ್ರ ಆಯ್ಕೆಯಾಗಿದ್ದು ಅವರಿಗೆ ಟ್ರೋಫಿ ಜೊತೆಗೆ 2 ಲಕ್ಷ ರೂ. ನಗದು ವಿತರಿಸಲಾಗಿದೆ. ಮೂರನೇ ಸ್ಥಾನ ಪಡೆದ ಜಾಹ್ನವಿ ಟ್ರೋಫಿ ಜೊತೆಗೆ 1 ಲಕ್ಷ ರೂ. ನಗದು ತಮ್ಮದಾಗಿಸಿಕೊಂಡಿದ್ದಾರೆ.

ತನ್ನ ಕಾಮಿಡಿ ಟೈಮಿಂಗ್ ಮೂಲಕ ವೀಕ್ಷಕರನ್ನು ರಂಜಿಸಿದ ಚಂದ್ರಪ್ರಭ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಜಾಭಾರತ’ ಕಾಮಿಡಿ ಶೋ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದರು. ನಂತರ ಒಂದಿಷ್ಟು ಚಿತ್ರಗಳಲ್ಲಿ ಹಾಸ್ಯ ಪಾತ್ರಧಾರಿಯಾಗಿ ನಟಿಸಿದ್ದಾರೆ.

ಇತ್ತೀಚೆಗಷ್ಟೇ ಚಂದ್ರಪ್ರಭ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಗಿಚ್ಚಿ ಗಿಲಿ ಗಿಲಿ’ ಸೀಸನ್ 2 ವೇದಿಕೆ ಮೇಲೆ ಕೂಡ ಚಂದ್ರಪ್ರಭ ಅವರ ಮದುವೆ ನಡೆದಿದೆ. ಇದೀಗ ಅವರು ಮದುವೆ ಹಾಗೂ ಗಿಚ್ಚಿ ಗಿಲಿ ಗಿಲಿ ಸೀಸನ್ 2ನ ಗೆಲುವಿನ ಸಂಭ್ರಮದಲ್ಲಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *