ವಯಸ್ಸಾದ್ರೆ ಸಂಗಾತಿ ಬೇಡವಾ? ನಮಗೂ ಆಸೆ ಇರುತ್ತಲ್ವಾ ? – ಮದುವೆಯ ವಿರುದ್ಧದ ಟ್ರೋಲ್ ವಿರೋಧಿಸಿ ಆಶಿಶ್ ವಿದ್ಯಾರ್ಥಿ ಟಫ್ ರಿಯಾಕ್ಷನ್..!!

ವಯಸ್ಸಾದ್ರೆ ಸಂಗಾತಿ ಬೇಡವಾ? ನಮಗೂ ಆಸೆ ಇರುತ್ತಲ್ವಾ ? – ಮದುವೆಯ ವಿರುದ್ಧದ ಟ್ರೋಲ್ ವಿರೋಧಿಸಿ ಆಶಿಶ್ ವಿದ್ಯಾರ್ಥಿ ಟಫ್ ರಿಯಾಕ್ಷನ್..!!

ನ್ಯೂಸ್ ಆ್ಯರೋ‌ : ಬಹು ಭಾಷಾ ನಟ ಆಶಿಶ್ ವಿದ್ಯಾರ್ಥಿ ಇತ್ತೀಚೆಗೆ ತಮ್ಮ 60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ. ಅಸ್ಸಾಂ ಮೂಲದ ಫ್ಯಾಷನ್ ಉದ್ಯಮಿ ರೂಪಾಲಿ ಬರುವ ಅವರ ಜೊತೆ ಕಳೆದ ತಿಂಗಳು ಹಸೆಮಣೆಗೇರಿದ್ದ ಆಶಿಶ್ ಈ ವಿಷಯದಲ್ಲಿ ಟ್ರೋಲ್ ಗೆ ಒಳಗಾಗಿದ್ದರು. ಈಗ ಇದಕ್ಕೆ ಉತ್ತರಿಸಿದ್ದಾರೆ.

”ಟ್ರೋಲ್‌ಗಳು ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. ಮುದುಕ ಎಂಬಿತ್ಯಾದಿ ಅವಹೇಳನಕಾರಿಯಾಗಿ ಕಮೆಂಟ್​ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ವಯಸ್ಸಾಗುತ್ತದೆ. ವಯಸ್ಸಾಯ್ತು ಎಂಬ ಕಾರಣಕ್ಕೆ ನಾವು ಏನನ್ನೂ ಮಾಡಬಾರದು ಎಂದರೆ ಹೇಗೆ? ಖುಷಿ ಇಲ್ಲದೇ ಸಾಯಬೇಕಾ? ಸಂಗಾತಿ ಬೇಕು ಎನಿಸಿದರೆ ಯಾಕೆ ಪಡೆಯಬಾರದು?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

”ಅದೆಷ್ಟೋ ವಿಚಾರಗಳಲ್ಲಿ ನಮಗೆ ನಾವೇ ಗೋಡೆ ಕಟ್ಟಿಕೊಂಡು ಜೀವನ ನಡೆಸುತ್ತೇವೆ. ನಾನು ಲೀಗಲ್ ಆಗಿ ಕೆಲಸ ಮಾಡುತ್ತಾ ಸರಿಯಾದ ಸಮಯಕ್ಕೆ ಟ್ಯಾಕ್ಸ್‌ ಕಟ್ಟುವೆ. ವಯಸ್ಸಾಗಿದ್ದರೂ ಶ್ರಮದಿಂದ ಕೆಲಸ ಮಾಡುತ್ತೇನೆ. ಜೀವನದಲ್ಲಿ ಖುಷಿಯಾಗಿರಬೇಕು, ಸಂಸಾರ ಕಟ್ಟಬೇಕು ಎಂದು ಕುಟುಂಬಸ್ಥರ ಸಮ್ಮುಖದಲ್ಲಿ ಲೀಗಲ್ ಆಗಿ ಮದುವೆ ಆದೆ. ಜನರ ಟ್ರೋಲ್ ಮತ್ತು ಕಮೆಂಟ್‌ಗಳನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನನಗೆ ಇದೊಂದು ದೊಡ್ಡ ಶಾಕ್” ಎಂದು ಆಶಿಶ್ ಹೇಳಿದ್ದಾರೆ.

ಕನ್ನಡ ಸೇರಿದಂತೆ ಸುಮಾರು 11 ಭಾಷೆಗಳ ಅಂದಾಜು 200 ಚಿತ್ರಗಳಲ್ಲಿ ನಟಿಸಿರುವ ಜನಪ್ರಿಯ ನಟ ಆಶಿಶ್ ವಿದ್ಯಾರ್ಥಿ ಈ ಹಿಂದೆ ಹಿರಿಯ ನಟಿ ಶಕುಂತಲಾ ಅವರ ಪುತ್ರಿ ರಜೋಶಿ ಜೊತೆಗೆ ವಿವಾಹವಾಗಿದ್ದರು. ಹಲವು ವರ್ಷಗಳ ದಾಂಪತ್ಯದ ಬಳಿಕ ಇಬ್ಬರೂ 2022ರಲ್ಲಿ ದೂರಾವಾಗಿದ್ದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *