ಭೂಮಿಯತ್ತ ಗಂಟೆಗೆ 101,638 ಕಿ.ಮೀ. ವೇಗದಲ್ಲಿ ಧಾವಿಸುತ್ತಿರುವ ಕ್ಷುದ್ರಗ್ರಹ – ನಾಸಾ ಎಚ್ಚರಿಕೆ ನೀಡಿದ್ದು ಏನು ಗೊತ್ತಾ?

ಭೂಮಿಯತ್ತ ಗಂಟೆಗೆ 101,638 ಕಿ.ಮೀ. ವೇಗದಲ್ಲಿ ಧಾವಿಸುತ್ತಿರುವ ಕ್ಷುದ್ರಗ್ರಹ – ನಾಸಾ ಎಚ್ಚರಿಕೆ ನೀಡಿದ್ದು ಏನು ಗೊತ್ತಾ?

ನ್ಯೂಸ್‌ ಆ್ಯರೋ : ಬೃಹದಾಕಾರದ ಕ್ಷುದ್ರಗ್ರಹವೊಂದು ಅತ್ಯಂತ ಹೆಚ್ಚಿನ ವೇಗದಲ್ಲಿ ಭೂಮಿಯನ್ನು ಸಮೀಪಿಸುತ್ತಿದೆ. ಈ ದೈತ್ಯಾಕಾರದ ಬಂಡೆಯ ಬಗ್ಗೆ ನಾಸಾ ಮಾಹಿತಿ ಕಳೆಹಾಕಿದ್ದು, ಅವುಗಳನ್ನು ಬಿಡುಗಡೆ ಮಾಡಿದೆ.

ಭೂಮಿಗೆ ಡಿಕ್ಕಿ ಹೊಡೆಯಬಹುದಾದ ಯಾವುದೇ ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹಗಳನ್ನು ನಾಸಾ ಮತ್ತು ಈಶಾನಂತಹ ಬಾಹ್ಯಾಕಾಶ ಸಂಸ್ಥೆಗಳು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತವೆ.

65-ಅಡಿ ಕ್ಷುದ್ರಗ್ರಹವು ಭೂಮಿಯ ಸಮೀಪದಿಂದ ಸುರಕ್ಷಿತವಾಗಿ ಈಚೆಗೆ ಹಾದುಹೋಯಿತು. ಆದರೆ, ಅದರ ಸಾಮೀಪ್ಯವು ಈ ದೈತ್ಯಾಕಾರದ ಬಂಡೆಗಳಿಂದ ಸಂಭಾವ್ಯ ಬೆದರಿಕೆಗಳ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂಬುದನ್ನು ನೆನಪಿಸುತ್ತದೆ.

ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್,) ನಾಲ್ಕು ಹೊಸ ಕ್ಷುದ್ರಗ್ರಹಗಳನ್ನು ಗುರುತಿಸಿದೆ. ಅದು ಭೂಮಿಯನ್ನು ಸಮೀಪಿಸಲಿದ್ದು, ಈ ಕುರಿತು ನಾಸಾ ಎಚ್ಚರಿಕೆಯನ್ನು ನೀಡಿದೆ.

ಈ ನಾಲ್ಕು ಕ್ಷುದ್ರಗ್ರಹಗಳ ಪೈಕಿ 2019 ಎಫ್‌ಟಿ ಹೆಸರಿನ ಕ್ಷುದ್ರಗ್ರಹ ಭೂಮಿಗೆ ಅತ್ಯಂತ ಸಮೀಪ ಬರಲಿದೆ ಎಂದು ನಾಸಾದ ಸೆಂಟರ್ ಫಾರ್ ನಿಯರ್ ಅರ್ಥ್ ಆಬ್ಜೆಕ್ಟ್ ಸ್ಟಡೀಸ್ ಹೇಳಿದೆ. ಈ ಕ್ಷುದ್ರಗ್ರಹ ಸುಮಾರು 290 ಅಡಿ ವ್ಯಾಸವನ್ನು ಹೊಂದಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.

ಕುದ್ರಗ್ರಹ 2019 ಎಫ್‌ಟಿ ಮಾರ್ಚ್ 27ರಂದು ಭೂಮಿಗೆ ಹತ್ತಿರ ಬಂದಿದೆ. ಇದು ಭೂಮಿಗೆ ಸುಮಾರು 4.06 ಮಿಲಿಯನ್ ಮೈಲುಗಳಷ್ಟು ಹತ್ತಿರವಾಗಲಿದೆ.

ನಾಸಾದ ಸಿಎನ್‌ಇಒಎಸ್‌ ಪ್ರಕಾರ ಈ, ಕ್ಷುದ್ರಗ್ರಹವು ಗಂಟೆಗೆ ಬರೋಬ್ಬರಿ 101,638 ಕಿ.ಮೀ. ವೇಗದಲ್ಲಿ ಭೂಮಿಯ ಕಡೆಗೆ ಧಾವಿಸುತ್ತಿದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿ ಎಂದು ನಾಸಾ ಹೇಳಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *