ಹಗಲಿನ ಹೊತ್ತು ಜಡ್ಜ್, ರಾತ್ರಿ ಪೋರ್ನ್ ಸ್ಟಾರ್ – ಈ ಅಸಾಮಿಯ ಕತೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತಿರಾ..!!

ಹಗಲಿನ ಹೊತ್ತು ಜಡ್ಜ್, ರಾತ್ರಿ ಪೋರ್ನ್ ಸ್ಟಾರ್ – ಈ ಅಸಾಮಿಯ ಕತೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತಿರಾ..!!

ನ್ಯೂಸ್ ಆ್ಯರೋ : ಒಬ್ಬ ಪೋರ್ನ್ ಸ್ಟಾರ್, ಅರ್ಥಾತ್‌ ನೀಲಿಚಿತ್ರಗಳ ನಟನೊಬ್ಬ ಉನ್ನತ ಸ್ಥಾನದಲ್ಲಿ ಕುಳಿತು ನ್ಯಾಯ ಹೇಳುವ ನ್ಯಾಯಾಧೀಶನಾದರೆ ಹೇಗಿರಬಹುದು. ಛೇ..ಛೇ ಏನಿದು ಕರ್ಮಕಾಂಡ ಅಂತ ಮುಖ ಸಿಂಡರಿಸುತ್ತಿದ್ದೀರಾ. ಆದ್ರೆ ಇದನ್ನು ನೀವು ನಂಬಲೇ ಬೇಕು. ಹಲಗಲಿನ ಹೊತ್ತು ಕೋರ್ಟಿನ ಜಡ್ಜ್ ಆಗಿ, ರಾತ್ರಿಯ ಹೊತ್ತು ಪೋರ್ನ್ ಸ್ಟಾರ್ ಆಗಿದ್ದ ಅಮೇರಿಕಾದ ವ್ಯಕ್ತಿಯೊಬ್ಬ ಇದೀಗ ವಜಾಗೊಂಡು ಮನೆಯಲ್ಲಿ ಕೂರುವಂತಾಗಿದೆ.

ನ್ಯೂಯಾರ್ಕ್ ಸಿಟಿಯ ಆಡಳಿತಾತ್ಮಕ ನ್ಯಾಯಾಧೀಶನಾಗಿ ಕರ್ತವ್ಯನಿರ್ವಹಿಸುತ್ತಿದ್ದ 33ವರ್ಷದ ಗ್ರೆಗೋರಿ ಎ.ಲಾಕ್, ನ್ಯಾಯಾಧೀಶನಾಗಿದ್ದುಕೊಂಡೇ 100ಕ್ಕೂ ಹೆಚ್ಚಿನ ನೀಲಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾನೆ ಎಂಬ ಮಾಹಿತಿ ಅಲ್ಲಿನ ಮಾಧ್ಯಮಗಳಿಂದ ಬಹಿರಂಗವಾಗಿದೆ‌. ಜೊತೆಗೆ ಸಾರ್ವಜನಿಕರಿಂದ ಈ ನ್ಯಾಯಾಧೀಶ ತೀವ್ರ ಟೀಕೆಗೆ ಗುರಿಯಾಗಿದ್ದಾನೆ.

ನ್ಯೂಯಾರ್ಕ್ ಪೋಸ್ಟ್ ಪ್ರಕಾರ ಈತ ಓನ್ಲಿ ಫ್ಯಾನ್ಸ್ ನಲ್ಲಿ ಪೋರ್ನ್ ಸ್ಟಾರ್ ಆಗಿದ್ದಾರೆ. ಕೊಳಕು ನಡವಳಿಕೆಯ ದೆಸೆಯಿಂದ ಸದ್ಯ ಈ ಜಡ್ಜ್ ನಗರದಿಂದ ಗಡಿಪಾರಾಗಿದ್ದಾನೆ.

ಇದಿಷ್ಟೇ ಅಲ್ಲದೆ, ಲಾಕ್ JustFor.Fans ನಲ್ಲಿ ಮತ್ತೊಂದು X-ರೇಟೆಡ್ ಖಾತೆಯನ್ನು ನಿರ್ವಹಿಸುತ್ತಿದ್ದಾನಂತೆ. ಅಲ್ಲಿ ಈತ $9.99 ಶುಲ್ಕ ವಿಧಿಸುತ್ತಾರೆ ಎನ್ನುವುದು ಕೂಡ ಬಹಿರಂಗವಾಗಿದೆ.

ಈತನ ಖಾತೆಯು ಹಾರ್ಡ್‌ಕೋರ್ ಅಶ್ಲೀಲತೆ ಮತ್ತು ಕಾಮೋದ್ರೇಕಗಳನ್ನು ಒಳಗೊಂಡ ಹತ್ತಾರು ಚಿತ್ರಗಳು ಮತ್ತು ವೀಡಿಯೊಗಳನ್ನು ಹೊಂದಿತ್ತು. ಈತನ ನಡವಳಿಕೆಯನ್ನು NYC ಅಧಿಕಾರಿಗಳು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಈ ನ್ಯಾಯಾಧೀಶ ಮಾತ್ರ, ‘ದಯಾದಿಂದ ವೈಟ್ ಕಾಲರ್ ವೃತ್ತಿಪರರು ರಾತ್ರಿಯಲ್ಲಿ ತುಂಬಾ ವೃತ್ತಿಪರವಲ್ಲ. ಯಾವಾಗಲೂ ಹವ್ಯಾಸಿ, ಯಾವಾಗಲೂ ಕಚ್ಚಾ, ಯಾವಾಗಲೂ ಕೊಳಕು,” ಎಂದು ಅವರು ಓನ್ಲಿ ಫ್ಯಾನ್ಸ್ ನಲ್ಲಿ ವಿವರಣೆ ನೀಡಿದ್ದಾನೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *