ಮೋದಿ ಬರ್ತ್’ಡೇ ಗೆ ನಮೀಬಿಯಾದಿಂದ ತಂದಿದ್ದ ಚೀತಾಗಳ ಪೈಕಿ ಒಂದು ಚೀತಾ ಸಾವು – ಕಾರಣ ಏನು ಗೊತ್ತಾ?

ಮೋದಿ ಬರ್ತ್’ಡೇ ಗೆ ನಮೀಬಿಯಾದಿಂದ ತಂದಿದ್ದ ಚೀತಾಗಳ ಪೈಕಿ ಒಂದು ಚೀತಾ ಸಾವು – ಕಾರಣ ಏನು ಗೊತ್ತಾ?

ನ್ಯೂಸ್ ಆ್ಯರೋ : ಜಗತ್ತು ಡಿಜಿಟಲೀಕರಣಕ್ಕೆ ತುತ್ತಾಗುತ್ತಿದ್ದಂತೆ ಸಾಕಷ್ಟು ವನ್ಯಜೀವಿಗಳು ಕಣ್ಮರೆಯಾಗುತ್ತಿದೆ. ಮನುಷ್ಯನ ಮಿತಿಮೀರಿದ ಸೌಕರ್ಯಗಳ ತೆವಲಿನಿಂದಾಗಿ ನೂರಾರು ಪ್ರಭೇದದ ಜೀವಸಂಕುಲಗಳು ಅಳಿಯುತ್ತಿವೆ. ಒಂದು ಕಾಲದಲ್ಲಿ ಭಾರತದಲ್ಲೂ ಹೆಚ್ಚಾಗಿ ಕಂಡುಬರುತ್ತಿದ್ದ ಕಪ್ಪು ಚುಕ್ಕೆಯ ಚೀತಾಗಳು ಬರುಬರುತ್ತ‌ ನಶಿಸಿ ಹೋದವು. ಇದೇ ಕಾರಣದಿಂದ ಇತ್ತೀಚೆಗಷ್ಟೇ ಭಾರತಕ್ಕೆ ನಮೀಬಿಯಾದಿಂದ 8 ಚೀತಾಗಳನ್ನು ತರಲಾಗಿತ್ತು. ಆದರೆ ಇದೀಗ ಅವುಗಳಲ್ಲಿ 1 ಚೀತಾ ಸಾವನಪ್ಪಿದೆ.

ಕಳೆದ ವರ್ಷ ಸೆಪ್ಟಂಬರ್ 17ರಂದು ದೇಶಕಂಡ ಅಪ್ರತಿಮ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನ ನಮೀಬಿಯಾ ದೇಶದಿಂದ ಅಪರೂಪದ ಕಪ್ಪು ಚುಕ್ಕೆಯ 8 ಚೀತಾಗಳನ್ನು ಭಾರತದ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿತ್ತು. ಇವುಗಳಲ್ಲಿ ಮೊದಲನೇ‌ ಬ್ಯಾಚ್ ಐದು ಹೆಣ್ಣು ಚೀತಾಗಳಿದ್ದವು. ಇದೀಗ ಆ ಮೊದಲ ಬ್ಯಾಚ್ ನಲ್ಲಿದ್ದ ಒಂದು ಚೀತಾ ಜೀವಾಂತ್ಯ ಕಂಡಿದೆ.

ಈ ಕಪ್ಪು ಚುಕ್ಕೆಯ ಚೀತಾಗಳನ್ನು ತಂದ ಮೊದಲು ಭಾರತದ ಹವಾಗುಣಕ್ಕೆ ಹೊಂದಿಕೊಂಡಿದ್ದವಾದರೂ ಆನಂತರ ಕೊಂಚ ಮಟ್ಟಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಸದ್ಯ, ಸಾವನಪ್ಪಿರುವ ಚೀತಾಗೆ ಮೂತ್ರಪಿಂಡದ ಸಮಸ್ಯೆ ಎದುರಾಗಿತ್ತು ಎಂಬುದನ್ನು‌ ಕುನೋ ರಾಷ್ಟ್ರೀಯ ಉದ್ಯಾನವನದ ತಜ್ಞ ವೈದ್ಯರ ತಂಡ ಬಹಿರಂಗ ಪಡಿಸಿದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *