ಯಾತ್ರಾರ್ಥಿಗಳಿಗೆ ಗುಡ್ ನ್ಯೂಸ್: ದ. ಕ್ಷೇತ್ರಗಳ ಯಾತ್ರೆಗೆ ಸರ್ಕಾರದಿಂದ ಬಿಗ್‌ ಆಫರ್

karnataka bharat gaurav
Spread the love

ನ್ಯೂಸ್ ಆ್ಯರೋ: ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಕ್ಷೇತ್ರಗಳ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ರಾಮೇಶ್ವರ, ಕನ್ಯಾಕುಮಾರಿ, ಮಧುರೈ, ತಿರುವನಂತಪುರಂ ಕ್ಷೇತ್ರಗಳನ್ನು ಒಳಗೊಂಡ 6 ದಿನಗಳ ಪ್ರವಾಸ ಇದಾಗಿದೆ.

ಈ ಪ್ಯಾಕೇಜ್‌ಗೆ ಒಟ್ಟು 25,000 ರೂ. ತಗುಲಲಿದ್ದು,ಈ ಪೈಕಿ ಕರ್ನಾಟಕ ಸರ್ಕಾರದ ವತಿಯಿಂದ 10,000 ರೂ. ಭರಿಸಲಾಗುತ್ತದೆ. ಹಾಗೂ ಸಹಾಯಧನ 5,000 ರೂ. ಒಳಗೊಂಡಿರುತ್ತದೆ. ಯಾತ್ರಾರ್ಥಿಗಳು ಬುಕ್ಕಿಂಗ್‌ ಮೊತ್ತವಾಗಿ 10,000 ರೂ.ಮಾತ್ರ ಪಾವತಿಸಬೇಕಾಗುತ್ತದೆ.

ಪ್ರಯಾಣಿಸುವಾಗ ಆಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ. 3 ಟೈರ್‌ ಎಸಿ ರೈಲಿನಲ್ಲಿ ಪ್ರಯಾಣ, ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನದ ವ್ಯವಸ್ಥೆ ಇರುತ್ತದೆ. ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸಹಾಯ ವ್ಯವಸ್ಥೆ ಇರುತ್ತದೆ.‌

ಟಿಕೆಟ್‌ ಬುಕ್ಕಿಂಗ್‌ಗಾಗಿ https://www.irctctourism.com/Karnatakbgaurav?searchKey=&tagType=&travelType=Domestic&sector=All&bdar=6 ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಥವಾ 9003140710, 8595931292, 8595931294, 9731641611,8595931293, 8595931291 ಗೆ ಕರೆ ಮಾಡಬಹುದು.

Leave a Comment

Leave a Reply

Your email address will not be published. Required fields are marked *

error: Content is protected !!