ಚಿನ್ನ, ಬೆಳ್ಳಿ ಖರೀದಿಸೋರಿಗೆ ಗುಡ್ನ್ಯೂಸ್; ಬೆಲೆಯಲ್ಲಿ ಭಾರೀ ಇಳಿಕೆ
ನ್ಯೂಸ್ ಆ್ಯರೋ: 2025ರ ಹೊಸ ವರ್ಷ ಎಲ್ಲರ ಜೀವನದಲ್ಲೂ ಹರುಷ ತರಲಿ, ಬದುಕು ಬೆಳಗಿಸಲಿ. ನ್ಯೂ ಇಯರ್ದಂದೇ ಚಿನ್ನ, ಬೆಳ್ಳಿಯ ಆಭರಣಗಳನ್ನು ಖರೀದಿ ಮಾಡುವವರಿಗೆ ಶುಭಸುದ್ದಿ. ಈ ಮೌಲ್ಯಯುತ ವಸ್ತುಗಳಲ್ಲಿ ಬೆಲೆಗಳು ಏರಿಳಿತವಾಗುವುದು ಸಾಮಾನ್ಯ. ಯಾವಗಲೂ 10, 20 ರೂಪಾಯಿ ಇಳಿಕೆ ಕಾಣುತ್ತಿದ್ದ ಚಿನ್ನ, ಬೆಳ್ಳಿ ಹೊಸ ವರ್ಷದಂದು ಭಾರೀ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಖರೀದಿ ಮಾಡುವವರಿಗೆ ಇಂದು ಆರ್ಥಿಕ ಶುಭವಾಗುವುದು ಖಚಿತ.
ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹ 7,225 ಇದೆ. ಇದು ನಿನ್ನೆ ₹ 7,265 ಇತ್ತು. ಈ ಎರಡು ದಿನದ ಬೆಲೆ ಹೋಲಿಕೆ ಮಾಡಿದರೆ ದರದಲ್ಲಿ 40 ರೂಪಾಯಿ ಇಳಿಕೆ ಆಗಿದೆ.
22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 72,250 ಇದೆ. ಇದು ನಿನ್ನೆ ₹ 72,650 ಇತ್ತು. ಇಲ್ಲಿಯೂ ಬೆಲೆಯಲ್ಲಿ ಬದಲಾವಣೆ ಆಗಿದ್ದು ನಿನ್ನೆಗಿಂತ ಇಂದು 400 ರೂಪಾಯಿ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ ₹ 7,586 ಆಗಿದೆ. ಇದು ನಿನ್ನೆ ₹ 7,628 ಇತ್ತು. 24 ಕ್ಯಾರೆಟ್ ಬೆಲೆಯಲ್ಲೂ ವ್ಯತ್ಯಾಸ ಆಗಿದ್ದು 42 ರೂಪಾಯಿ ಇಳಿಕೆ ಕಂಡಿದೆ.
24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 75,860 ಇದೆ. ಇದು ನಿನ್ನೆ ₹ 76,280 ಇತ್ತು. ನಿನ್ನೆ ದರ, ಇವತ್ತಿನ ದರ ಈ ಎರಡರ ಬೆಲೆಯಲ್ಲಿ ಬದಲಾವಣೆ ಕಂಡು ಬಂದಿದೆ. 420 ರೂಪಾಯಿ ದರ ಕಡಿಮೆ ಆಗಿದೆ.
ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 98,000 ಇದ್ದು ನಿನ್ನೆ ಇದರ ಬೆಲೆ ₹ 1,00,000 ರೂಪಾಯಿ ಇತ್ತು. ನಿನ್ನೆಗಿಂತ ಇಂದು ಬೆಳ್ಳಿ ಒಟ್ಟು ₹ 2,000 ಇಳಿಕೆ ಕಂಡಿದೆ.
Leave a Comment