ಕೊನೆಗೂ ನಿಜಲಿಂಗಪ್ಪ ಮನೆ ಖರೀದಿಸಿದ ಕರ್ನಾಟಕ ಸರ್ಕಾರ; ಮಾಜಿ ಸಿಎಂ ಅವರ ಶ್ವೇತ ಭವನ ಇನ್ಮುಂದೆ ಮ್ಯೂಜಿಯಂ

Spread the love

ನ್ಯೂಸ್ ಆ್ಯರೋ: ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಚಿತ್ರದುರ್ಗದ ನಿವಾಸ ಶ್ವೇತ ಭವನವನ್ನು 24.18 ಕೋಟಿಗೆ ಗುರುವಾರ ಸರ್ಕಾರ ಖರೀದಿಸಿದೆ. ಎಸ್.ಎನ್.ಪುತ್ರ ಕಿರಣ್ ಶಂಕರ್‌ಈ ಸಂಬಂಧದ ಕ್ರಯ ಪತ್ರವನ್ನು ತಹಸೀಲ್ದಾರ್‌ ನಾಗವೇಣಿ ಅವರಿಗೆ ನೀಡುವುದರ ಮೂಲಕ ಮಾರಾಟ ಪ್ರಕ್ರಿಯೆಯ ಅಂತಿಮಗೊಳಿಸಿದರು.

ಹೇಳಿಕೆ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ನಿಜಲಿಂಗಪನವರ ಮನೆ ರಾಜ್ಯಪಾಲರ ಹೆಸರಿಗೆ ಖರೀದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ನಿಜಲಿಂಗಪ್ಪ ಅವರು ಬದುಕಿದ್ದಾಗಲೇ 28-3-1989 ರಂದು ತಮ್ಮ ಮೊಮ್ಮಗ ವಿನಯ್ ಹೆಸರಲ್ಲಿ ವಿಲ್ ಬರೆದಿದ್ದರು. ವಿಲ್ ಪ್ರಕಾರ ತನ್ನ ಮೂವರು ಮಕ್ಕಳು ಅನುಭವಿಸಿದ ನಂತರ ಮೊಮ್ಮಗ ವಿನಯ್ ಗೆ ಮನೆ ಹೋಗಬೇಕೆಂಬುದನ್ನು ಉಲ್ಲೇಖಿಸಲಾಗಿತ್ತು.

ನಿಜಲಿಂಗಪ್ಪ ಎರಡನೇ ಮಗ ರಾಜಶೇಖರ್ ನಿದನರಾಗಿದು, ಮೂರನೇ ಮಗ ಉಮಾಕಾಂತ. ಹಿರಿಯ ಮಗ ಕಿರಣ್ ಶಂಕರ್‌ಮ್ರನೆ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಟ್ಟಿದ್ದಾರೆ. ಇದಾದ ತರುವಾಯ ವಿನಯ್ ಮನೆ ಮೇಲೆ ಸಂಪೂರ್ಣ ಹಕ್ಕನ್ನು ಪಡೆದುಕೊಂಡಿದ್ದರು. ನಿಜಲಿಂಗಪ್ಪ ಅವರು ಬಳಸುತ್ತಿದ್ದ ವಸ್ತುಗಳು ಮಂಚ ಕುರ್ಚಿ, ದೀವಾನ ಕಾಟ್ ಸೇರಿ ಹಲವು ವಸ್ತುಗಳನ್ನಿಟ್ಟು ಮ್ಯೂಜಿಯಂ ಮಾಡುವ ಉದೇಶ ಹೊಂದಲಾಗಿದೆ.

ನಾಲ್ಕು ವರ್ಷಗಳ ಹಿಂದೆಯೇ ಮನೆಯನ್ನು ಸರ್ಕಾರಕ್ಕೆ ಮಾರಾಟ ಮಾಡುವ ಬಗ್ಗೆ ನಿಜಲಿಂಗಪ್ಪ ಕುಟುಂಬದವರು ಒಪ್ಪಿಗೆ ನೀಡಿದ್ದರು. ಆದರೆ ಸರ್ಕಾರ ನಿರುತ್ಸಾಹ ತೋರಿದ್ದರಿಂದ ಮಾರಾಟ ವಿಳಂಬವಾಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವುದಕ್ಕೆ ಸುಮಾರು ಒಂದು ದಶಕದ ಮೊದಲು ನಿರ್ಮಿಸಲಾದ ಮನೆ ಇದಾಗಿದೆ.

ನಿಜಲಿಂಗಪ್ಪ ನಿವಾಸವನ್ನು ಸರ್ಕಾರಕ್ಕೇ ಮಾರಾಟವಾಗುವಂತೆ ಮಾಡುವಲ್ಲಿ ಮಾಜಿ ಎಂಎಲ್‌ಸಿ ಮೋಹನ್ ಕೊಂಡಜ್ಜಿ ಪ್ರಮುಖ ಪಾತ್ರ ವಹಿಸಿದ್ದರು. ಸರ್ಕಾರದ ನಿರುತ್ಸಾಹದ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದರು ಎಂದೂ ವರದಿ ಉಲ್ಲೇಖಿಸಿದೆ. ಇನ್ನಾದರೂ ಸರ್ಕಾರ ಶೀಘ್ರ ಕಾರ್ಯಪ್ರವೃತ್ತವಾಗಿ ನಿಜಲಿಂಗಪ್ಪ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿ ಅವರ ಪರಂಪರೆಯನ್ನು ಗೌರವಿಸಬೇಕು ಎಂದು ಕೊಂಡಜ್ಜಿ ಆಗ್ರಹಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *