
‘ಜವಾನ್’ ರಿಲೀಸ್ ಬೆನ್ನಲ್ಲೇ ಬಾಯ್ಕಾಟ್ ಟ್ರೆಂಡ್ ಶುರು – ಶಾರುಖ್ ಖಾನ್, ಉದಯನಿಧಿ ಮೇಲೆ ಸಿಟ್ಟಾದ ನೆಟ್ಟಿಗರಿಂದ ಆಕ್ರೋಶ, ಕಾರಣವೇನು?
- ಮನರಂಜನೆ
- September 8, 2023
- No Comment
- 47
ನ್ಯೂಸ್ ಆ್ಯರೋ : ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಹಾಗೂ ಲೇಡಿ ಸೂಪರ್ ಸ್ಟಾರ್ ನಯನತಾರ ನಟನೆಯ ‘ಜವಾನ್’ ಸಿನೆಮಾ ರಿಲೀಸ್ ಆಗಿದೆ. ಅಭಿಮಾನಿಗಳು ಚಿತ್ರಕ್ಕಾಗಿ ಕಾಯುತ್ತಿರುವಾಗ ಟ್ವಿಟರ್ ಬಳಕೆದಾರರು ಶಾರುಖ್ ಖಾನ್ ದೇವಸ್ಥಾನಕ್ಕೆ ಪ್ರವೇಶಿಸಿದ ವಿಡಿಯೋವನ್ನು ಅಪ್‌ಲೋಡ್ ಮಾಡಿ ‘ಬಾಯ್ಕಾಟ್ ಜವಾನ್’ ಎಂದಿದ್ದಾರೆ.
ಬಾಯ್ಕಾಟ್ ಜವಾನ್ ಎನ್ನುತ್ತಿರುವುದೇಕೆ?
ಈಚೆಗೆ ಶಾರುಖ್ ಖಾನ್ ಅವರು ನಟಿ ನಯನತಾರ ಹಾಗೂ ಚಿತ್ರತಂಡದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಶಾರುಖ್ ಖಾನ್ ಸುತ್ತಾ ಜನರು ಸುತ್ತುವರೆದಿದ್ದು, ಜನರ ಕಡೆ ಕೈ ಬೀಸಿದ್ದಾರೆ. ಕೇವಲ 20 ಸೆಕೆಂಡ್‌ಗಳ ಅವಧಿಯ ಈ ಕಿರು ವೀಡಿಯೋ ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ ಬಳಕೆದಾರರು ನಮ್ಮ ದೇವಸ್ಥಾನಗಳು ನಿಮ್ಮ ಸ್ಟುಡಿಯೋದ ಹಾಗೇ ಪ್ರಚಾರಕ್ಕೆ ಬಳಸಿಕೊಳ್ಳಬೇಡಿ ಎಂದು ಅಡಿ ಬರಹ ಬರೆದುಕೊಂಡಿದ್ದಾರೆ. ಸಿನಿಮಾ ರಿಲೀಸ್‌ಗೂ ಮುನ್ನಾ ಯಾಕೆ ನೀವು ನಮ್ಮ ಹಿಂದೂ ದೇವಸ್ಥಾನವನ್ನು ನೆನಪಿಸಿಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಸಚಿವ ಉದಯನಿಧಿ ಹೇಳಿಕೆಗೂ ಜವಾನ್ ಸಿನೆಮಾ ಬಾಯ್ಕಾಟ್ ಅನ್ನುತ್ತಿರುವುದೇಕೆ?
ಅದಲ್ಲದೆ ಈಚೆಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲೀನ್ ಅವರು ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ವಿಚಾರವಾಗಿಯೂ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎಂದಿದ್ದಾರೆ. ಹಿಂದಿ ಸೇರಿದಂತೆ ತಮಿಳು, ತೆಲುಗು ಭಾಷೆಯಲ್ಲಿ ಜವಾನ್ ಸಿನೆಮಾ ರಿಲೀಸ್ ಆಗಿದೆ. ತಮಿಳುನಾಡಿನಲ್ಲಿ ಈ ಸಿನೆಮಾದ ಹಂಚಿಕೆ ಹಕ್ಕನ್ನು ಸಚಿವ ಉದಯನಿಧಿ ಸ್ಟಾಲಿನ್ ಅವರು ತೆಗೆದುಕೊಂಡಿದ್ದಾರೆ. ಅವರ ಒಡೆತನದ ರೆಡ್ ಜಿಯಂಟ್ ಮೂವೀಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ತಮಿಳುನಾಡಿನಲ್ಲಿ ಹಂಚಿಕೆ ಮಾಡುತ್ತಿದ್ದಾರೆ. ಈಚೆಗೆ ಉದಯನಿಧಿ ಸ್ಟಾಲಿನ್ ಅವರು ಹಿಂದೂ ಧರ್ಮದ ಬಗ್ಗೆ ನೀಡಿದ ಹೇಳಿಕೆಯನ್ನು ಇಟ್ಟುಕೊಂಡು ‘ಜವಾನ್’ ಚಿತ್ರವನ್ನು ಬಾಯ್ಕಾಟ್‌ಗೆ ಅಗ್ರಹಿಸಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಜವಾನ್ ಬಾಯ್ಕಾಟ್ ಟ್ರೆಂಡಿಂಗ್‌ನಲ್ಲಿದೆ. ಪ್ರಚಾರಕ್ಕಷ್ಟೇ ಹಿಂದೂ ದೇವರನ್ನು ಬಳಸಿಕೊಂಡು ಗಿಮಿಕ್ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಹ್ಯಾಶ್‌ಟ್ಯಾಗ್ ಮಾಡಿದ್ದಾರೆ.
ಜವಾನ್ ಸಿನೆಮಾದಲ್ಲಿ ನಾಯಕನಾಗಿ ಶಾರುಖ್ ಖಾನ್, ನಾಯಕಿಯಾಗಿ ನಯನತಾರಾ, ವಿಜಯ್ ಸೇತುಪತಿ, ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ ಹಾಹೂ ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾ ಬಳಗವಿದೆ.
ಜವಾನ್ ಸಿನೆಮಾವನ್ನು ಖ್ಯಾತ ನಿರ್ದೇಶಕ ಆಟ್ಲಿ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾವನ್ನು ಶಾರುಖ್ ಪತ್ನಿ ಗೌರಿ ಖಾನ್ ಅವರು ನಿರ್ಮಾಣ ಮಾಡಿದ್ದು, ಸಿನೆಮಾ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಗೊಂಡಿದೆ. ಸಿನೆಮಾವನ್ನು ಯಶ್ ರಾಜ್ ಫಿಲ್ಮ್ಸ್, ರೆಂಡ್ ಜಿಯಂಟ್ ಮೂವಿಸ್, ಎಸ್‌ವಿಎಫ್, ಪೆನ್ ಸ್ಡೂಡಿಯೋಸ್, ಶ್ರೀ ವೆಂಕಟೇಶ್ವರ ಕ್ರಿಯೇಶನ್ಸ್ ಅವರು ಹಂಚಿಕೆ ಹಕ್ಕನ್ನು ಪಡೆದುಕೊಂಡಿದ್ದಾರೆ.