
ಭಾರತ- ಪಾಕಿಸ್ತಾನ ಪಂದ್ಯದಿಂದ ನಟಿ ಊರ್ವಶಿ ರೌಟೆಲಾಗೆ ಭಾರೀ ನಷ್ಟ – ಚಿನ್ನದ ಐಫೋನ್ ಕಳೆದುಕೊಂಡ ಬಿಟೌನ್ ಬೆಡಗಿ..!
- ಮನರಂಜನೆ
- October 16, 2023
- No Comment
- 90
ನ್ಯೂಸ್ ಆ್ಯರೋ : ಅಹಮದಾಬಾದ್ ನಲ್ಲಿ ಇತ್ತೀಚಿಗೆ ನಡೆದ ಭಾರತ- ಪಾಕಿಸ್ತಾನ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ನಟಿ ಊರ್ವಶಿ ರೌಟೇಲಾ ಅವರು ತಮ್ಮ ದುಬಾರಿ ಫೋನ್ ಅನ್ನು ಕಳೆದುಕೊಂಡಿದ್ದಾರೆ.
ಮೊದಲಿಗೆ ತಮ್ಮ ಫೋನ್ ಕಳೆದುಕೊಂಡ ಬಗ್ಗೆ ನಟಿ ಊರ್ವಶಿ ಇನ್ ಸ್ಟಾ ಗ್ರಾಮ್ ನಲ್ಲಿ ನಾನೀಗ ಸಾಮಾನ್ಯ ಫೋನ್ ಅನ್ನು ಹೊಂದಿದ್ದೇನೆ ಮತ್ತು ತಮ್ಮ “ಚಿನ್ನದ ಐಫೋನ್” ಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದರು.
ಬಳಿಕ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಟ್ವಿಟ್ ಮಾಡಿರುವ ಅವರು, ಅಕ್ಟೋಬರ್ 14 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಮ್ಮ 24 ಕ್ಯಾರೆಟ್ ನ ಚಿನ್ನದ ಐಫೋನ್ ಕಳೆದುಹೋಗಿದೆ. ದಯಮಾಡಿ ಇದನ್ನು ಹುಡುಕಿಕೊಡಿ ಹೇಳಿ ಅಹಮದಾಬಾದ್ ಪೊಲೀಸರಿಗೆ ಟ್ಯಾಗ್ ಮಾಡಿದ್ದರು.
ತಮ್ಮ ಮೊಬೈಲ್ ಫೋನ್ ವಿವರಗಳನ್ನೂ ಅವರು ಹಂಚಿಕೊಂಡಿದ್ದರು. ಬಳಿಕ ರೌಟೇಲಾ ಅವರು ಪೊಲೀಸ್ ದೂರಿನ ಚಿತ್ರವನ್ನು ಪೋಸ್ಟ್ ಮಾಡಿದ್ದೂ ಈ ಕುರಿತು ಸಾಮಾಜಿಕ ಜಾಲತಾಣ ಬಳಕೆದಾರರು ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಒಬ್ಬರು ದುಬಾರಿ ವಸ್ತುಗಳೊಂದಿಗೆ ಜಾಗರೂಕರಾಗಿರಬೇಕು ಎಂದು ಹೇಳಿದ್ದರೆ, ಇನ್ನೊಬ್ಬರು ಐಫೋನ್ ಅನ್ನು ಪತ್ತೆಹಚ್ಚಬಹುದಾಗಿದೆ ಎಂದು ತಿಳಿಸಿದ್ದಾರೆ. ಮತ್ತೊಬ್ಬರು, ಗೋಲ್ಡ್ ಐಫೋನ್‌ಗಳಿವೆಯೇ? ಎಂದು ಪ್ರಶ್ನಿಸಿದ್ದು, ಆ ಪಂದ್ಯವು ದುಬಾರಿಯಾಗಿತ್ತು ಎಂದು ಇನ್ನೊಬ್ಬ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ಈ ಪಂದ್ಯದಲ್ಲಿ ತಮ್ಮ ಐಫೋನ್ ಕಳೆದುಕೊಂಡಿರುವ ಕನಿಷ್ಠ ಮೂವರನ್ನು ನಾನು ನೋಡಿದ್ದೇನೆ ಮತ್ತು ಈಗ ಇದು ಎಂದು ಸೇರಿಸಿದ್ದಾರೆ.
ಇನ್ನೊಬ್ಬರು ಕಾಮೆಂಟ್ ಸೆಕ್ಷನ್ ನಲ್ಲಿ ನನಗೆ ತಿಳಿದಿರುವಂತೆ ನಿಮ್ಮ ಫೋನ್ ಅನ್ನು ಕದ್ದವರು ಎಂದಿಗೂ ಹಿಂತಿರುಗುವುದಿಲ್ಲ. ಯಾಕೆಂದರೆ ಅದರಲ್ಲಿ 24 ಸಾವಿರ ನಿಜವಾದ ಚಿನ್ನವಿದೆ. ಅದನ್ನು ಕದ್ದವರು ಚಿನ್ನವನ್ನು ಪಡೆಯಲು ಅದನ್ನು ಒಡೆದು ಬಳಿಕ ಕಸದಲ್ಲಿ ಎಸೆಯುತ್ತಾರೆ. ಅದು ಮತ್ತೆ ನಿಮ್ಮ ಬಳಿಗೆ ಬರುತ್ತದೆ ಎಂದು ಭಾವಿಸಬೇಡಿ ಎಂದು ಹೇಳಿದ್ದಾರೆ.