
ಇನ್ಮುಂದೆ ಮನೆಬಾಗಿಲಿಗೆ ಬರುತ್ತೆ ಅನ್ನಭಾಗ್ಯ ಪಡಿತರ ಅಕ್ಕಿ – ಆದರೆ ಷರತ್ತುಗಳು ಅನ್ವಯ, ಅದೇನ್ ಗೊತ್ತಾ?
- ಸರ್ಕಾರಿ ಸೇವೆಗಳು
- October 16, 2023
- No Comment
- 137
ನ್ಯೂಸ್ ಆ್ಯರೋ : ಅನ್ನ ಭಾಗ್ಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಒಂದು ಸಿಹಿ ಸುದ್ದಿ ಕೊಟ್ಟಿದೆ.
ಮಹಿಳೆಯರು, ಹಿರಿಯ ನಾಗರಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿರುವ ಕರ್ನಾಟಕ ಸರ್ಕಾರ ಈಗ ಪಡಿತರ ವಿತರಣೆಗೆ ಹೊಸ ಯೋಜನೆ ಹಾಕಿಕೊಳ್ಳುತ್ತಿದೆ.
ಮುಖ್ಯವಾಗಿ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಇನ್ನುಮುಂದೆ ಅನ್ನಭಾಗ್ಯ ಯೋಜನೆಯಡಿ ಮನೆ ಬಾಗಿಲಿಗೆ ಪಡಿತರ ಅಕ್ಕಿ ವಿತರಿಸುವ ಚಿಂತನೆ ನಡೆಸಲಾಗುತ್ತಿದೆ.
ಈಗಾಗಲೇ ಆಹಾರ ಇಲಾಖೆಯು ಈ ಹೊಸ ಯೋಜನೆಯ ರೂಪುರೇಷೆಯನ್ನು ಸಿದ್ದಪಡಿಸಿದ್ದು, ಮನೆಮನೆಗೆ ಪಡಿತರ ಅಕ್ಕಿಯನ್ನು ವಿತರಣೆ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಕೆಲವು ನಿಯಮಗಳನ್ನು ರೂಪಿಸಲಾಗಿದೆ.
ಇದು ಅನ್ನಭಾಗ್ಯ ಯೋಜನೆಯಡಿ ಬರುವ ಎಲ್ಲ ಫಲಾನುಭವಿಗಳಿಗೆ ಲಭ್ಯವಾಗುವುದಿಲ್ಲ. ಮನೆಯಲ್ಲಿ 90 ವರ್ಷ ಮೇಲ್ಪಟ್ಟವರು ಒಬ್ಬರೇ ಇದ್ದರೆ ಈ ಯೋಜನೆಯ ಲಾಭ ಪಡೆಯಬಹುದು. ಅದರಲ್ಲೂ ಪಡಿತರ ಚೀಟಿಯಲ್ಲಿ 90 ವರ್ಷ ಮೇಲ್ಪಟ್ಟವರು ಒಬ್ಬರೇ ಇರಬೇಕು. ಆಗ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು.
ಶೀಘ್ರದಲ್ಲೇ ಈ ಯೋಜನೆ ಜಾರಿಗೆ ತರಲು ಆಹಾರ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.