
ಗ್ರಾ.ಪಂ. ಚುನಾವಣೆ ಭರ್ಜರಿಯಾಗಿ ಗೆದ್ದಿದ್ದ ಮಹಿಳೆಗೆ ಏಳು ವರ್ಷಗಳ ಜೈಲು – ಮೀಸಲಾತಿ ವಿಚಾರದಲ್ಲಿ ದಾರಿ ತಪ್ಪಿಸಿದ್ದ ಮಹಿಳೆಗೆ ಕೋರ್ಟ್ ಚಾಟಿ..!!
- ರಾಜಕೀಯ
- October 16, 2023
- No Comment
- 84
ನ್ಯೂಸ್ ಆ್ಯರೋ : ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರಿಗೆ ಹಾವೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಹಿಂದೂ ಗೊಂದಳಿ ಸಮುದಾಯದವರಾಗಿದ್ದ ಗುತ್ತಲ ಗ್ರಾಮ ಪಂಚಾಯತಿ ಸದಸ್ಯೆ ಮುಕ್ತಾಬಾಯಿ ರಂಗಪ್ಪ ಬೀಸ ಜೈಲು ಶಿಕ್ಷೆಗೆ ಒಳಗಾದವರು. ಇವರ ವಿರುದ್ಧ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಲು ಪರಿಶಿಷ್ಟ ಜಾತಿಗೆ ಸೇರಿರುವ ನಕಲಿ ಪ್ರಮಾಣ ಪತ್ರ ಸಲ್ಲಿಕೆ ಆರೋಪ ದೃಢಪಟ್ಟಿದೆ.
ಮುಕ್ತಾಬಾಯಿ ರಂಗಪ್ಪ ಬೀಸ ಹಿಂದೂ ಗೊಂದಳಿ (ಪ್ರ ವರ್ಗ-1)ಕ್ಕೆ ಸೇರಿದ್ದು, ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಇತರೆ ದಾಖಲಾತಿ ಸೃಷ್ಟಿಸಿ ಹಾವೇರಿ ತಹಶೀಲ್ದಾರ್ ಕಚೇರಿಗೆ ಸಲ್ಲಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದರು.
2010ರಲ್ಲಿ ಗುತ್ತಲ ಪಂಚಾಯಿತಿ ವಾರ್ಡ್ ನಂಬರ್ 10ರಿಂದ ಪರಿಶಿಷ್ಟ ಜಾತಿಗೆ ಮೀಸಲಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದರು.
ಗ್ರಾಮ ಪಂಚಾಯತಿ ಸದಸ್ಯೆ ಮುಕ್ತಾಬಾಯಿ ರಂಗಪ್ಪ ಬೀಸ ಹಾಗೂ ಅವರಿಗೆ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಲು ಸಹಕರಿಸಿದ ಮಾರುತಿ ಕಿಳ್ಳಿಕ್ಯಾತರ್ ಎಂಬರಿಗೂ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, ಏಳು ವರ್ಷ ಕಾರಾಗೃಹ ಶಿಕ್ಷೆ ಹಾಗೂ 37,000 ದಂಡ ವಿಧಿಸಿಲಾಗಿದೆ.