ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ ಮಾಡಿ

ಡ್ರೈ ಸ್ಕಿನ್ ಸಮಸ್ಯೆಗೆ ಸೌತೆಕಾಯಿ ಫೇಸ್ ಪ್ಯಾಕ್ ಬೆಸ್ಟ್; ನೀವೂ ಟ್ರೈ ಮಾಡಿ

ನ್ಯೂಸ್ ಆ್ಯರೋ : ಅಡುಗೆ, ಸಲಾಡ್, ಜ್ಯೂಸ್​ನಲ್ಲೂ ಬಳಸುವ ಸೌತೆಕಾಯಿಗಳು ಸೌಂದರ್ಯದ ದೃಷ್ಟಿಯಿಂದಲೂ ಬಹಳ ಕೊಡುಗೆ ನೀಡುತ್ತವೆ. ಈ ಪೌಷ್ಟಿಕ ತರಕಾರಿ ನಿಮ್ಮ ಚರ್ಮಕ್ಕೆ ಚಿಕಿತ್ಸೆ ನೀಡಲು ಉತ್ತಮ ಮಾರ್ಗವಾಗಿದೆ. ಸೌತೆಕಾಯಿಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ, ಜೊತೆಗೆ ಅವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಮತ್ತು ಫೋಲಿಕ್ ಆಮ್ಲದಂತಹ ಪೋಷಕಾಂಶಗಳಿಂದ ತುಂಬಿದೆ. ಹೀಗಾಗಿ, ಸೌತೆಕಾಯಿಯ ಫೇಸ್​ಪ್ಯಾಕ್ ಮಾಡಿಕೊಂಡರೆ ನಿಮ್ಮ ಚರ್ಮದ ಆರೋಗ್ಯ ಹೆಚ್ಚಾಗುತ್ತದೆ.

ಮನೆಯಲ್ಲೇ ಸುಲಭವಾಗಿ ಸೌತೆಕಾಯಿಯ ಫೇಸ್​ಪ್ಯಾಕ್ ತಯಾರಿಸಿಕೊಳ್ಳಬಹುದು. ನಿಮ್ಮ ಚರ್ಮದ ವಿನ್ಯಾಸ, ಟೋನ್ ಮತ್ತು ಒಟ್ಟಾರೆ ನೋಟವನ್ನು ಸುಧಾರಿಸಲು ವಿನಾಕಾರಣ ಕ್ರೀಂ, ಲೋಷನ್, ಫೇಸ್​ಪ್ಯಾಕ್​ಗಳಿಗೆ ಖರ್ಚು ಮಾಡಬೇಡಿ. ಆರೋಗ್ಯಕರ, ಹೊಳೆಯುವ ಮೈಬಣ್ಣವನ್ನು ಪಡೆಯಲು ನೀವು ಮನೆಯಲ್ಲೇ ಸೌತೆಕಾಯಿ ಫೇಸ್​ಪ್ಯಾಕ್ ಮಾಡಿಕೊಳ್ಳಬಹುದು.

ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳನ್ನು ಒಳಗೊಂಡಿರುವ ಸೌತೆಕಾಯಿಗಳು ನೈಸರ್ಗಿಕ ಪದಾರ್ಥಗಳಲ್ಲಿ ಒಂದಾಗಿದೆ. ಇದು ಹಲವಾರು ರೀತಿಯಲ್ಲಿ ನಿಮ್ಮ ಚರ್ಮಕ್ಕೆ ಪ್ರಯೋಜನವನ್ನು ನೀಡುತ್ತದೆ. ಸೌತೆಕಾಯಿ ನಿಮ್ಮ ಚರ್ಮದ ಊತವನ್ನು ಕಡಿಮೆ ಮಾಡುತ್ತದೆ. ಮೊಡವೆ ಪೀಡಿತ ಚರ್ಮಕ್ಕೆ ಸಹಾಯ ಮಾಡುತ್ತದೆ. ಚರ್ಮ ಅಕಾಲಿಕವಾಗಿ ವಯಸ್ಸಾಗುವುದನ್ನು ತಡೆಯುತ್ತದೆ. ಚರ್ಮದ ಕಿರಿಕಿರಿಯನ್ನು ಶಮನಗೊಳಿಸುತ್ತದೆ. ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.

ಸೌತೆಕಾಯಿ ಫೇಸ್ ಮಾಸ್ಕ್ ಮಾಡುವುದು ಹೇಗೆ?:

ನಿಮ್ಮ ಚರ್ಮವನ್ನು ರಿಫ್ರೆಶ್ ಮಾಡಲು ಅಥವಾ ಪುನರ್ಯೌವನಗೊಳಿಸಲು ನೀವು ಸುಲಭವಾದ ಮಾರ್ಗವನ್ನು ಹುಡುಕುತ್ತಿದ್ದರೆ ಸೌತೆಕಾಯಿ ಫೇಸ್​ ಪ್ಯಾಕ್ ಉತ್ತಮ ಆಯ್ಕೆಯಾಗಿದೆ. 3 ರೀತಿಯಲ್ಲಿ ಸೌತೆಕಾಯಿ ಫೇಸ್​ಪ್ಯಾಕ್ ಮಾಡಿಕೊಳ್ಳಬಹುದು.

1. ಸಿಪ್ಪೆ ಸುಲಿದ ಅರ್ಧ ಸೌತೆಕಾಯಿಯನ್ನು ಬ್ಲೆಂಡರ್ ಅಥವಾ ಫುಡ್ ಪ್ರೊಸೆಸರ್‌ನಲ್ಲಿ ಪೇಸ್​ನಂತೆ ಆಗುವವರೆಗೂ ರುಬ್ಬಿಕೊಳ್ಳಿ. ಆ ಮಿಶ್ರಣವನ್ನು ಸೋಸಿ, ರಸವನ್ನು ಮಾತ್ರ ತೆಗೆದುಕೊಳ್ಳಿ. ಸ್ವಚ್ಛವಾಗಿ ತೊಳೆದ ಮುಖಕ್ಕೆ ಸೌತೆಕಾಯಿ ರಸವನ್ನು ಹಚ್ಚಿಕೊಳ್ಳಿ. ನಿಮ್ಮ ಮುಖದ ಮೇಲೆ 15 ನಿಮಿಷಗಳ ಕಾಲ ಫೇಸ್​ ಪ್ಯಾಕನ್ನು ಒಣಗಲು ಬಿಡಿ. ನಂತರ ತಣ್ಣನೆಯ ಅಥವಾ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಬಳಿಕ, ಮೃದುವಾದ ಬಟ್ಟೆಯಿಂದ ನಿಮ್ಮ ಮುಖವನ್ನು ಒರೆಸಿಕೊಳ್ಳಿ.

2. ಸೌತೆಕಾಯಿ ಮತ್ತು ಅಲೋವೆರಾ ಫೇಸ್ ಮಾಸ್ಕ್ ಮಾಡಿಕೊಳ್ಳಬಹುದು. ಅಲೋವೆರಾ ನಿಮ್ಮ ಚರ್ಮ ಒಣಗುವುದನ್ನು ತಡೆಯುತ್ತದೆ. ಸಿಪ್ಪೆ ಸುಲಿದ ಅರ್ಧ ಸೌತೆಕಾಯಿಯನ್ನು ಬ್ಲೆಂಡರ್ ಅಥವಾ ಫುಡ್ ಪ್ರೊಸೆಸರ್‌ನಲ್ಲಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಸೋಸಿ, ಸೌತೆಕಾಯಿಯ ರಸಕ್ಕೆ 2 ಟೇಬಲ್ ಸ್ಪೂನ್ ಅಲೋವೆರಾ ಜೆಲ್ ಸೇರಿಸಿ. ಅವೆರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಮಾಸ್ಕ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು, ನಿಧಾನವಾಗಿ ಮಸಾಜ್ ಮಾಡಿ. 15 ನಿಮಿಷಗಳ ಕಾಲ ಹಾಗೇ ಬಿಟ್ಟು ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

3. ಸೌತೆಕಾಯಿ, ಓಟ್​ಮೀಲ್ ಮತ್ತು ಜೇನುತುಪ್ಪದ ಮಾಸ್ಕ್ ಕೂಡ ನಿಮ್ಮ ಚರ್ಮದ ಸೌಂದರ್ಯಕ್ಕೆ ಸಹಕಾರಿ. ಮೊಡವೆ ಪೀಡಿತ ಚರ್ಮಕ್ಕೆ ಈ ಫೇಸ್​ಪ್ಯಾಕ್ ಉತ್ತಮ ಆಯ್ಕೆಯಾಗಿದೆ. ಸೌತೆಕಾಯಿಯ ಸಂಕೋಚಕ ಗುಣಲಕ್ಷಣಗಳ ಜೊತೆಗೆ ಓಟ್ ಮೀಲ್ ಡೆಡ್ ಸ್ಕಿನ್​ಗಳನ್ನು ಎಫ್ಫೋಲಿಯೇಟ್ ಮಾಡಲು ಮತ್ತು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗೇ, ಜೇನುತುಪ್ಪವು ನಿಮ್ಮ ಚರ್ಮದ ಮೇಲಿನ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ.

ಸಿಪ್ಪೆ ಸುಲಿದ ಅರ್ಧ ಸೌತೆಕಾಯಿಯನ್ನು ಬ್ಲೆಂಡರ್ ಅಥವಾ ಫುಡ್ ಪ್ರೊಸೆಸರ್‌ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಆ ಮಿಶ್ರಣವನ್ನು ಸೋಸಿ, ರಸ ತೆಗೆದುಕೊಳ್ಳಿ. ಆ ಸೌತೆಕಾಯಿಯ ರಸಕ್ಕೆ 1 ಚಮಚ ಓಟ್ ಮೀಲ್ ಸೇರಿಸಿ. ಓಟ್ ಮೀಲ್ ಮತ್ತು ಸೌತೆಕಾಯಿ ರಸವನ್ನು ಮಿಕ್ಸ್ ಮಾಡಿ, ಅದಕ್ಕೆ 1 ಚಮಚ ಜೇನುತುಪ್ಪವನ್ನು ಸೇರಿಸಿ. ಈ ಮಿಶ್ರಣವನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೆ ಹಚ್ಚಿಕೊಂಡು, ನಿಮ್ಮ ಬೆರಳ ತುದಿಯಿಂದ ನಿಧಾನವಾಗಿ ಮಸಾಜ್ ಮಾಡಿ. ಈ ಫೇಸ್​ಪ್ಯಾಕನ್ನು ನಿಮ್ಮ ಮುಖದ ಮೇಲೆ 15 ನಿಮಿಷಗಳ ಕಾಲ ಇಟ್ಟುಕೊಳ್ಳಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *