War Updates : ಗಾಜಾ ಬಿಡುವಂತೆ ಗಡುವು ನೀಡಿದ ಇಸ್ರೇಲ್ – ಮೂರೇ ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಗಾಜಾದಿಂದ ಪಲಾಯನ

War Updates : ಗಾಜಾ ಬಿಡುವಂತೆ ಗಡುವು ನೀಡಿದ ಇಸ್ರೇಲ್ – ಮೂರೇ ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಗಾಜಾದಿಂದ ಪಲಾಯನ

ನ್ಯೂಸ್ ಆ್ಯರೋ‌ : ಯುದ್ಧ ಭೂಮಿ ಗಾಜಾಪಟ್ಟಿಯಲ್ಲಿ ಪರಿಸ್ಥಿತಿ ತೀವ್ರ ಭೀಕರವಾಗಿದ್ದು, ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆ ಮಧ್ಯೆ ಕಾಳಗ ನಡೆಯುತ್ತಲೇ ಇದೆ. ಈ ಮಧ್ಯೆ ಗಾಜಾದಲ್ಲಿ ಇರುವವರಿಗೆ ದಕ್ಷಿಣ ಭಾಗಕ್ಕೆ ತೆರಳುವಂತೆ ಮೂರು ಗಂಟೆಯ ಗಡುವು ನೀಡಲಾಗಿತ್ತು. ಇದೀಗ ಕೇವಲ ಮೂರು ಗಂಟೆ ಅವಧಿಯಲ್ಲಿ 10 ಲಕ್ಷ ಮಂದಿ ಗಾಜಾದಿಂದ ಪಲಾಯನ ಮಾಡಿದ್ದಾರೆ.

ಮೂರು ಗಂಟೆಗಳ ಕಾಲ ಯಾವುದೇ ಕಾರ್ಯಾಚರಣೆ ನಡೆಸುವುದಿಲ್ಲ. ತದನಂತರ ವಾಯು, ಜಲ ಹಾಗೂ ಭೂಮಿಯ ಮೂಲಕ ದಾಳಿ ನಡೆಸಲಾಗುತ್ತದೆ. ಈ ಮೂರು ಗಂಟೆಯ ಅವಧಿಯಲ್ಲಿ ಹೊರಡುವವರು ಹೊರಡಿ ಎಂದು ಇಸ್ರೇಲ್ ಹೇಳಿದ್ದು, ಒಂದು ಮಿಲಿಯನ್ ಮಂದಿ ಪಲಾಯನ ಮಾಡಿದ್ದಾರೆ.

ಗಾಜಾದಲ್ಲಿ ಇರುವ ಹಮಾಸ್ ಉಗ್ರರನ್ನು ಮಟ್ಟಹಾಕುವ ಮುನ್ನ ಅಮಾಯಕ ಜೀವಗಳು ಬಲಿಯಾಗದಂತೆ ನೋಡಿಕೊಳ್ಳಳು ಇಸ್ರೇಲ್ ಈ ಕ್ರಮ ಕೈಗೊಂಡಿದೆ. ಈಗಾಗಲೇ 1,300 ಕ್ಕೂ ಹೆಚ್ಚು ಮಂದಿ ಇಸ್ರೇಲಿಗರು ಪ್ರಾಣ ಕಳೆದುಕೊಂಡಿದ್ದಾರೆ, ದಶಕಗಳಲ್ಲೇ ನಡೆದ ಭೀಕರ ದಾಳಿ ಇದಾಗಿದೆ.

ಇಸ್ರೇಲ್ ದಾಳಿಯಿಂದ ಗಾಯಗೊಂಡಿರುವ ಗಾಜಾಪಟ್ಟಿ ಪ್ರದೇಶದ ಸಾವಿರಾರು ಜನರು ಗಾಜಾದಲ್ಲಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಆಸ್ಪತ್ರೆಗಳ ಸಂಪನ್ಮೂಲಗಳು ಖಾಲಿಯಾಗುತ್ತಿವೆಯಾದ್ದರಿಂದ ಒಂದು ವೇಳೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬೇಕಾದ ಸೌಕರ್ಯಗಳು ಸಿಗದೇ ಹೋದರೆ ಸಾವಿರಾರು ಜನರು ಸಾವನ್ನಪ್ಪಲಿದ್ದಾರೆ ಎಂದು ಆಸ್ಪತ್ರೆಗಳ ವೈದ್ಯಾಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್‌ನಿಂದ ಭಾರಿ ಪ್ರಮಾಣದ ವಾಯುದಾಳಿ ಎದುರಿಸುತ್ತಿರುವ ಗಾಜಾಪಟ್ಟಿಯಲ್ಲಿ (Gaza Strip) ಜನರು ಈಗ ಆಹಾರ ಹಾಗೂ ನೀರಿಗಾಗಿ ತೀವ್ರ ಪರದಾಡುತ್ತಿದ್ದಾರೆ. ಸುರಕ್ಷಿತ ಜಾಗ ಮತ್ತು ಅನ್ನಾಹಾರಗಳನ್ನು ಅರಸಿಕೊಂಡು ಜನಸಾಮಾನ್ಯರು ಬೀದಿ ಬೀದಿ ಅಲೆಯುತ್ತಿರುವ ದೃಶ್ಯಗಳು ಸರ್ವೇಸಾಮಾನ್ಯವಾಗಿವೆ. ಈ ಹಿನ್ನೆಲೆಯಲ್ಲಿ 23 ಲಕ್ಷ ಜನಸಂಖ್ಯೆಯ ಗಾಜಾಪಟ್ಟಿಯಲ್ಲಿ ಹಮಾಸ್‌ ಉಗ್ರರ (Hamas militants) ನೆಲೆಯಾಗಿರುವ ಉತ್ತರ ಗಾಜಾವನ್ನು ಬಿಟ್ಟು ದಕ್ಷಿಣಕ್ಕೆ ತೆರಳಲು ನಾಗರಿಕರಿಗೆ ಇಸ್ರೇಲ್ ಸೂಚಿಸಿತ್ತು.

ಅದರಂತೆ ಲಕ್ಷಾಂತರ ಜನರು ದಕ್ಷಿಣಕ್ಕೆ ತೆರಳಿದ್ದಾರೆ. ಆದರೆ ಉತ್ತರದಲ್ಲಿ ಇನ್ನೂ ಸಾಕಷ್ಟು ಜನರಿದ್ದು, ಅವರು ಆಹಾರ, ನೀರು, ಔಷಧಗಳು (medicine) ಸಿಗದೆ, ಅಡಗಿಕೊಳ್ಳಲು ಸುರಕ್ಷಿತ ಜಾಗವೂ ಸಿಗದೆ ಎಲ್ಲೆಂದರಲ್ಲಿ ಅಲೆಯುತ್ತಿದ್ದಾರೆ. ಇಸ್ರೇಲ್‌ನ ವೈಮಾನಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಜನರೆಲ್ಲ ಆಸ್ಪತ್ರೆಗಳ ಬಳಿ ಬಂದು ನೆಲೆಸುತ್ತಿದ್ದು, ಗಾಜಾದ ಮುಖ್ಯ ಆಸ್ಪತ್ರೆ ಯಾಗಿರುವ ಅಲ್ ಶಿಫಾದಲ್ಲಿ ಅಂದಾಜು 35,000 ಜನರು ಮರದ ಕೆಳಗೆ, ರಕ್ತಸಿಕ್ತವಾದ ಆಸ್ಪತ್ರೆಯ ನೆಲವನ್ನೇ ಆಶ್ರಯಿಸಿದ್ದಾರೆ. ಇಲ್ಲಿನ ಶೇ.95ರಷ್ಟು ಸಂಪನ್ಮೂಲಗಳು ಖಾಲಿ ಆಗಿದ್ದು, ಒಂದು ವೇಳೆ ಜನರೇಟರ್‌ನ ಇಂಧನ ಖಾಲಿಯಾದರೆ ಸಾವಿರಾರು ರೋಗಿಗಳಿಗೆ ತೀವ್ರ ತೊಂದರೆಯಾಗಲಿದೆ.

ಸದ್ಯ ಇಸ್ರೇಲ್ ಸೇನೆ ಗಾಜಾ ಗಡಿಯಲ್ಲಿ 30 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನೇಮಿಸಿದೆ. ಇನ್ನು ಕನಿಷ್ಠ 10,000 ಸೈನಿಕರು ಈಗಾಗಲೇ ಗಾಜಾ ಕಡೆಗೆ ಹೆಜ್ಜೆಯಿಟ್ಟಿದ್ದು ಗಾಜಾ ಸಂಪೂರ್ಣ ಇಸ್ರೇಲ್ ವಶಕ್ಕೆ ಸಿಗುವವರೆಗೆ ಯುದ್ಧ ನಡೆಯುವ ನಿರೀಕ್ಷೆಯಿದೆ‌.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *