ಬೋಳು ತಲೆಯಾಗುವ ಸಮಸ್ಯೆಯಿಂದ ಪಾರಾಗಲು ಈ 5 ಯೋಗಾಸನಗಳನ್ನು ಮಾಡಿ – ವಿವರಗಳು ಇಲ್ಲಿವೆ ನೋಡಿ.‌

ಬೋಳು ತಲೆಯಾಗುವ ಸಮಸ್ಯೆಯಿಂದ ಪಾರಾಗಲು ಈ 5 ಯೋಗಾಸನಗಳನ್ನು ಮಾಡಿ – ವಿವರಗಳು ಇಲ್ಲಿವೆ ನೋಡಿ.‌

ನ್ಯೂಸ್ ಆ್ಯರೋ : ಯೋಗ ಮಾಡುವುದರಿಂದ ದೇಹ ಹಾಗೂ ಮನಸ್ಸಿಗೆ ಹಲವು ರೀತಿಯ ಪ್ರಯೋಜನಗಳಿವೆ ಎಂಬುದನ್ನು ನಾವು ತಿಳಿದಿದ್ದೇವೆ. ಯೋಗವು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ನಿವಾರಣೆಗೆ ಸಹಕಾರಿ. ಅದಾಗ್ಯೂ ನಿರಂತರ ಒತ್ತಡ, ಅಸಮರ್ಪಕ ಆಹಾರಕ್ರಮ, ಜೀವನಶೈಲಿ ಸೇರಿದಂತೆ ಅನುವಂಶೀಯ ಸಮಸ್ಯೆಗಳಿಂದ ಕೂದಲ ಉದುರುವ ಸಮಸ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಇತ್ತೀಚೆಗೆ ಪ್ರತಿಯೊಬ್ಬರನ್ನೂ ಕಾಡುತ್ತಿರುವ ಸಮಸ್ಯೆಗಳಲ್ಲಿ ಇದೂ ಒಂದು. ಕೂದಲು ಉದುರಲು ಹಲವು ಅಂಶಗಳು ಕಾರಣವಾಗಬಹುದು. ಆದರೆ ಯೋಗಾಸನದ ಮೂಲಕ ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲ, ಹೊಸ ಕೂದಲ ಬೆಳವಣಿಗೆಯೂ ಸಾಧ್ಯ.

ಕೂದಲು ಉದುರುವುದನ್ನು ತಡೆಯುವ ಹಾಗೂ ಕೂದಲ ಬೆಳವಣಿಗೆಯನ್ನು ಉತ್ತೇಜಿಸಲು ನೆರವಾಗುವ ಕೆಲವು ಯೋಗ ಆಸನಗಳು ಇಲ್ಲಿವೆ. ಇವು ಕೂದಲು ಉದುರುವುದನ್ನು ತ್ವರಿತವಾಗಿ ಶಮನ ಮಾಡುತ್ತವೆ.

ಯೋಗಕ್ಕೆ ಸಂಬಂಧಿಸಿದ ಒಂದಿಷ್ಟು ಲೇಖನಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಬಾಲಯಂ ಮುದ್ರಾ

ಎರಡು ಕೈ ಉಗುರುಗಳನ್ನು ಪರಸ್ಪರ ಉಜ್ಜುವ ಪ್ರಕ್ರಿಯೆಯನ್ನು ಬಲಯಂ ಮುದ್ರೆ ಎಂದು ಕರೆಯಲಾಗುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡಲು ಇದು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ದಿನದಲ್ಲಿ 10 ರಿಂದ 15 ನಿಮಿಷಗಳ ಕಾಲ ಇದನ್ನು ಮಾಡಬಹುದು.

ಶೀರ್ಷಾಸನ

ತಲೆ ಕೆಳಗೆ ಮಾಡಿ, ಕಾಲು ಮೇಲೆ ಮಾಡಿ ತಲೆಯ ಮೇಲೆ ನಿಲ್ಲುವಂತಹ ಯೋಗಾಸನವು ಕೂದಲಿಗೆ ಆಮ್ಲಜನಕವನ್ನು ಒದಗಿಸುತ್ತದೆ ಮತ್ತು ಕೂದಲಿಗೆ ಶಕ್ತಿ ಒದಗಿಸುತ್ತದೆ. ಶೀರ್ಷಾಸನ ಎಂದುಆ ಆಸನವನ್ನು ಕರೆಯಲಾಗುತ್ತದೆ.

ವಜ್ರಾಸನ

ವಜ್ರಾಸನವು ಕಾಲುಗಳನ್ನು ಹಿಂದೆ ಚಾಚಿ ಕಾಲಿನ ಮೇಲೆ ನಿತಂಬವನ್ನು ಉರಿ ಕುಳಿತುಕೊಳ್ಳುವ ಆಸನ. ಈ ಆಸನವು ಒತ್ತಡವನ್ನು ಕಡಿಮೆ ಮಾಡುತ್ತದೆ. ಒತ್ತಡವು ಕೂದಲು ಉದುರಲು ಒಂದು ಪ್ರಮುಖ ಕಾರಣವಾಗಿದೆ.

ಬಾಲಾಸನ

ಇದು ಕಾಲನ್ನು ಹಿಂದಕ್ಕೆ ಮಡಚಿ, ನಿತಂಬದ ಮೇಲೆ ಕುಳಿತು ದೇಹವನ್ನು ಮುಂದಕ್ಕೆ ಬಾಗಿಸಿ, ಹಣೆಯನ್ನು ನೆಲಕ್ಕೆ ತಾಗಿಸುವಂತಹ ಆಸನವಾಗಿದೆ. ಈ ಆಸನವು ಇಡೀ ದೇಹಕ್ಕೆ ವಿಶ್ರಾಂತಿ ಒದಗಿಸುತ್ತದೆ. ಈ ಆಸನದಿಂದ ಹಣೆಗೆ ಮಸಾಜ್‌ ಮಾಡಿದ ಅನುಭವ ಸಿಗುತ್ತದೆ. ಒಂದು ಒಟ್ಟಾರೆ ದೇಹಕ್ಕೆ ವಿಶ್ರಾಂತಿ ಸಿಗುವಂತೆ ಮಾಡಿ ಕೂದಲು ಉದುರುವುದನ್ನು ತಡೆಯಲು ನೆರವಾಗುತ್ತದೆ.

ಅಧೋ ಮುಖ ಸ್ವಾನಾಸನ

ಈ ಅಧೋ ಮುಖ ಸ್ವಾನಾಸನವು 12 ಸೂರ್ಯ ನಮಸ್ಕಾರಗಳ ಭಂಗಿಗಳಲ್ಲಿ ಒಂದಾಗಿದೆ. ಇದನ್ನು ಮಾಡುವುದರಿಂದ ನಿಮ್ಮ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಿಕೊಳ್ಳಬಹುದು. ಅಲ್ಲದೆ, ನೆತ್ತಿಗೆ ರಕ್ತದ ಹರಿವು ಮತ್ತು ಆಮ್ಲಜನಕದ ಪರಿಚಲನೆಯನ್ನು ಸುಧಾರಿಸಲು ಈ ಆಸನವು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಪ್ರತಿನಿತ್ಯ ಈ ಅಧೋ ಮುಖ ಸ್ವಾನಸನ ಮಾಡುವುದರಿಂದ ಕೂದಲು ಉದುರುವಿಕೆಯ ಸಮಸ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿಕೊಳ್ಳಬಹುದು.

ಕೂದಲು ಉದುರಲು ಹಲವು ಆರೋಗ್ಯ ಸಮಸ್ಯೆಗಳು ಕಾರಣವಾಗಬಹುದು. ಆ ಕಾರಣಕ್ಕೆ ನಮ್ಮ ಒಟ್ಟಾರೆ ದೈಹಿಕ ಆರೋಗ್ಯ ಸಮಸ್ಯೆಗಳ ಪರಿಹಾರದತ್ತ ಹೆಚ್ಚು ಗಮನ ಕೊಡಬೇಕು. ಆ ಕಾರಣಕ್ಕೆ ದೇಹ ಹಾಗೂ ಮನಸ್ಸು ಎರಡನ್ನೂ ಭಾದಿಸುವ ಸಮಸ್ಯೆಗಳ ನಿವಾರಣೆಗೆ ಯೋಗವು ಉತ್ತಮ ಮಾರ್ಗವಾಗಿದೆ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *