ಶತಮಾನದ ಬಳಿಕ ಬೂದು ತೋಳ ಪತ್ತೆ – ಅಳಿವಿನಂಚಿನಲ್ಲಿರುವ ತೋಳದ ಬಗ್ಗೆ ಮೂಡಿದೆ ಕುತೂಹಲ

ಶತಮಾನದ ಬಳಿಕ ಬೂದು ತೋಳ ಪತ್ತೆ – ಅಳಿವಿನಂಚಿನಲ್ಲಿರುವ ತೋಳದ ಬಗ್ಗೆ ಮೂಡಿದೆ ಕುತೂಹಲ

ನ್ಯೂಸ್ ಆ್ಯರೋ : ಸುಮಾರು 100 ವರ್ಷಗಳ ಬಳಿಕ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಅಳಿವಿನಂಚಿನಲ್ಲಿರುವ ಬೂದು ತೋಳ ಪತ್ತೆಯಾಗಿದೆ.

ಜೈಂಟ್ ಸಿಕ್ವೊಯಾ ರಾಷ್ಟ್ರೀಯ ಸ್ಮಾರಕದ ಬಳಿ ಪತ್ತೆಯಾದ ಈ ತೋಳವನ್ನು ಗುರುತಿಸುವಲ್ಲಿ ಮೊದಲು ಗೊಂದಲವಾಗಿತ್ತು. ಯಾಕೆಂದರೆ ಇದು ಬೂದು ಬಣ್ಣದಲ್ಲಿತ್ತು ಹಾಗೂ ತೋಳಕ್ಕಿಂತ ಚಿಕ್ಕದಾಗಿತ್ತು. ಅಲ್ಲದೇ ಅದು ತನ್ನ ತಲೆಯನ್ನು ಹಿಂದಕ್ಕೆ ತಿರುಗಿಸಿ ವಿಚಿತ್ರವಾಗಿ ಕೂಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದು, ಉತ್ತರ ಅಮೆರಿಕದ ಸ್ಥಳೀಯ ಕೊಯೊಟೆ ಜಾತಿಗೆ ಸೇರಿದ ತೋಳವಾಗಿರಬಹುದು ಎಂದು ಅವರು ಊಹಿಸಿದ್ದರು.

ಅಳಿವಿನಂಚಿನಲ್ಲಿರುವ ಈ ಪ್ರಾಣಿಯ ಕುರಿತು ಸಂಶೋಧನೆ ನಡೆಸಲು ಪ್ರಾರಂಭಿಸಿದ ಸಂಶೋಧಕರು, ಮೊದಲು ಈ ಪ್ರಾಣಿಯ ಕೂದಲು ಮತ್ತು ಮಲವನ್ನು ಸಂಶೋಧನೆಗೆ ಒಳಪಡಿಸಿದರು. ಇದರಿಂದ ಇದು ಹೆಣ್ಣು ಬೂದು ತೋಳ ಎಂಬುದು ಖಚಿತವಾಯಿತು. ಅಲ್ಲದೇ ಎರಡು ಗಂಡು ಹಾಗೂ ಎರಡು ಹೆಣ್ಣು ಮರಿಗಳೊಂದಿಗೆ ಇದು ಪತ್ತೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಬಳಿಕ ಇದಕ್ಕೆ ಡಿಎನ್‌ಎ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಈ ತೋಳವು 90 ವರ್ಷಗಳ ಅನಂತರ ಇದು ಪತ್ತೆಯಾಗಿದೆ. ಕ್ಯಾಲಿಫೋರ್ನಿಯಾದಲ್ಲಿ 2011 ರಲ್ಲಿ ಕಂಡುಬಂದಿದ್ದ ಮೊದಲ ತೋಳ ಎಂಬ ಹೆಗ್ಗಳಿಕೆ ಹೊಂದಿರುವ ಒಆರ್-7 ತೋಳದ ವಂಶಸ್ಥ ಈ ತೋಳಗಳು ಎನ್ನುವುದು ದೃಢಪಟ್ಟಿದೆ. ಈ ತೋಳಕ್ಕೆ ರೇಡಿಯೋ ಕಾಲರ್ ಅಳವಡಿಸಿ ಸಂಶೋಧನೆ ನಡೆಸಲಾಯಿತು.

ಬೂದು ತೋಳದ ಸಂತತಿ ರಕ್ಷಣೆಗೆ ಪಣ ತೊಟ್ಟಿರುವ ಪರಿಸರವಾದಿಗಳು, ಅದು ಓಡಾಡುವ ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಯಾಕೆಂದರೆ ಈ ಹಿಂದೆ ಅಂದರೆ 19 ಹಾಗೂ 20 ನೇ ಶತಮಾನಗಳಲ್ಲಿ ಕೆಲವೊಂದು ಕಾನೂನು ಬಾಹಿರ ಚಟುವಟಿಕೆಗಳು ಅಮೆರಿಕದಾದ್ಯಂತ ತೋಳಗಳ ಸಂತತಿ ಅಳಿವಿಗೆ ಕಾರಣವಾಗಿತ್ತು.

ಈಗಾಗಲೇ ಈ ಪ್ರದೇಶಗಳಲ್ಲಿ ತೋಳಗಳನ್ನು ಕೊಲ್ಲುವಂತಿಲ್ಲ ಎನ್ನುವ ಆದೇಶವಿದೆ. ಒಂದು ವೇಳೆ ಕೊಂದರೆ ಭಾರೀ ದಂಡ ಪಾವತಿಸಬೇಕಾಗುತ್ತದೆ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *