
ಮತ್ತೆ ಸದ್ದು ಮಾಡ್ತಿದೆ ಮಲೈಕಾ ಅರೋರಾ ಮೈಕುಣಿಸಿದ ಚೈಂಯಾ ಚೈಂಯಾ ಹಾಡು – ಒಂದು ಕಾಲದ ವೈರಲ್ ಹಾಡು ಮತ್ತೆ ಸುದ್ದಿಯಾಗ್ತಿರೋದು ಯಾಕೆ ಗೊತ್ತಾ?
- ಮನರಂಜನೆ
- October 18, 2023
- No Comment
- 57
ನ್ಯೂಸ್ ಆ್ಯರೋ : ಕೆಲವೊಂದು ಸಿನಿಮಾದ ಕಥೆಗಳು ಅಷ್ಟೊಂದು ನೆನಪಾಗಿ ಉಳಿಯದೇ ಇದ್ದರೂ ಒಂದು ಹಾಡು ಮಾತ್ರ ಹಿಟ್ ಆಗಿ ಸದಾ ಜನರ ಮನದಲ್ಲಿ ಗುನುಗುನಿಸುವಂತೆ ಮಾಡುತ್ತದೆ. ಅಂತಹ ಹಿಟ್ ಹಾಡುಗಳಲ್ಲಿ ಬಾಲಿವುಡ್ ನ ಚೈಂಯಾ ಚೈಂಯಾ ಚಲೋ ಚೈಂಯಾ ಚೈಂಯಾ.. ಹಾಡು ಕೂಡ ಒಂದು.
ಬಾಲಿವುಡ್‌ನ ಎವರ್ಗ್ರೀನ್ ಹಾಡು ಎಂದೆನಿಸಿಕೊಂಡಿರುವ ಇದರಲ್ಲಿ ಬಳುಕುವ ಬಳ್ಳಿಯಂತಿರುವ ಮಲೈಕಾ ಅರೋರಾ ಸೊಂಟ ಬಳುಕಿಸಿ ಎಲ್ಲರ ಮನ ಗೆದ್ದಿದ್ದಾರೆ. ಇವರಿಗೆ ಕಿಂಗ್ ಖಾನ್ ಶಾರುಖ್ ಜೋಡಿಯಾಗಿ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದು ಇಂದಿಗೂ ಬಹುತೇಕ ಚಿತ್ರ ನೋಡಿದ ಎಲ್ಲರಿಗೂ ನೆನಪಲ್ಲಿದೆ.
ಚಲಿಸುವ ರೈಲಿನ ಮೇಲೆ ಚಿತ್ರೀಕರಿಸಿದ ದಿಲ್ ಸೇ ಚಿತ್ರದ ಈ ಹಾಡು ಎಲ್ಲರ ಮಾನದಂಗಳದಲ್ಲೂ ಇನ್ನೂ ಹಾಗೆ ಇದೆ. 1998ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿ ರತ್ನಂ ಆಕ್ಷನ್ ಕಟ್ ಹೇಳಿದ್ದರು. ಆರಂಭದಲ್ಲಿ ಈ ರೈಲಿನ ಮೇಲೆ ಹತ್ತಿ ಡ್ಯಾನ್ಸ್ ಮಾಡಲು ಮಲೈಕಾ ಅರೋರಾ ಹೆದರಿದ್ದರು. ಆದರೆ ಸಿನೆಮಾ ಬಿಡುಗಡೆ ಆದಾಗ ಈ ಹಾಡೇ ಸೂಪರ್ ಹಿಟ್ ಆಗಿತ್ತು.
ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಹಾಡಿಗೆ ಸುಕ್ವಿಂದರ್ ಸಿಂಗ್ ಮತ್ತು ಸಪ್ನಾ ಅವಸ್ತಿ ಧ್ವನಿ ನೀಡಿದ್ದರು. ಇದು ಸೂಪರ್ ಹಾಡು ಎಂದೇ ಪರಿಗಣಿಸಲಾಗಿದ್ದು ಮಾರುಕಟ್ಟೆಯಲ್ಲಿ ಇದು ಮೊಬೈಲ್, ಆಟಿಕೆಗಳ ಮ್ಯೂಸಿಕ್ ಟ್ಯೂನ್ ಆಗಿ ಎಲ್ಲರ ಹಾಟ್ ಫೆವರೀಟ್ ಎಂದೆನಿಸಿಕೊಂಡಿತ್ತು.
ಈ ಹಾಡನ್ನೂ ಈಗಲೂ ವಿದೇಶದಲ್ಲಿ ಪಬ್ಗಳಲ್ಲಿ ಹಾಕಲಾಗುತ್ತಿದೆ. ಈಗ ಈ ಹಾಡಿನ ಚರ್ಚೆ ಯಾಕೆ ಗೊತ್ತೇ ? ಕಾರಣ ಈ ಹಾಡಿಗೆ ಬಳಸಿರುವ ರೈಲು. ಈ ಹಾಡನ್ನು ಸಂಪೂರ್ಣವಾಗಿ ಚಲಿಸುವ ರೈಲಿನ ಮೇಲೆ ಚಿತ್ರೀಕರಣ ಮಾಡಲಾಗಿತ್ತು. ಆ ರೈಲಿಗೆ ಈಗ 115ನೇ ವರ್ಷ.