ನೀವು ಶೌಚಾಲಯದಲ್ಲಿ ಇದ್ದರೂ ಮೊಬೈಲ್ ಬಳಸುತ್ತಿದ್ದರೆ ಕೂಡಲೇ ನಿಲ್ಲಿಸಿ – ಇಲ್ಲದಿದ್ದರೆ ಈ ಖಾಯಿಲೆ ಬರುವುದು ಗ್ಯಾರಂಟಿ..

ನೀವು ಶೌಚಾಲಯದಲ್ಲಿ ಇದ್ದರೂ ಮೊಬೈಲ್ ಬಳಸುತ್ತಿದ್ದರೆ ಕೂಡಲೇ ನಿಲ್ಲಿಸಿ – ಇಲ್ಲದಿದ್ದರೆ ಈ ಖಾಯಿಲೆ ಬರುವುದು ಗ್ಯಾರಂಟಿ..

ನ್ಯೂಸ್ ಆ್ಯರೋ : ಎಲ್ಲಿ ಹೋದರೂ ಮೊಬೈಲ್ ನಮ್ಮ ಕೈಯಲ್ಲೇ ಇರಬೇಕಾದ ಮಟ್ಟಿಗೆ ನಾವು ಮೊಬೈಲ್‌ಗೆ ಜೋತು ಬಿದ್ದಿದ್ದೇವೆ. ಇನ್ನೂ ಶೌಚಾಲಯಕ್ಕೆ ಹೋಗುವಾಗಲು ಕೆಲವರಿಗೆ ಮೊಬೈಲ್‌ ಬೇಕೆ ಬೇಕು. ಆದರೆ ಈ ಅಭ್ಯಾಸ ನಿಮಗಿದ್ದರೆ ಕೂಡಲೇ ಅದನ್ನು ನಿಲ್ಲಿಸುವುದು ಆರೋಗ್ಯದ ದೃಷ್ಟಿಯಲ್ಲಿ ಉತ್ತಮ.

ಸ್ಟ್ಯಾನ್‌ಫೋರ್ಡ್ ಮತ್ತು ಹಾರ್ವರ್ಡ್‌ನಲ್ಲಿ ತರಬೇತಿ ಪಡೆದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ ಸೌರಭ್ ಸೇಥಿ ಅವರು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಟಾಯ್ಲೆಟ್‌ನಲ್ಲಿ ಸ್ಮಾರ್ಟ್‌ಫೋನ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ದೇಹಕ್ಕೆ ಉಂಟಾಗುವ ಅಪಾಯಗಳ ಬಗ್ಗೆ ವಿವರಿಸಿದ್ದಾರೆ.
ಟಾಯ್ಲೆಟ್‌ನಲ್ಲಿ ನಿಮ್ಮ ಪ್ರಾತಃ ವಿಧಿಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾ ಸ್ಕ್ರಾಲಿಂಗ್ ಮಾಡುವುದರಿಂದ ಮೂಲವ್ಯಾಧಿಯಂತಹ ಪ್ರಮುಖ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.

ಫೋನ್ ಬಳಕೆ ಮೂಲವ್ಯಾಧಿಗೆ ಹೇಗೆ ಪರೋಕ್ಷವಾಗಿ ಕಾರಣವಾಗಿದೆ?

ಕೇರ್ ಹಾಸ್ಪಿಟಲ್ಸ್, ಬಾರಿಯಾಟ್ರಿಕ್ ಮತ್ತುಬ ಜಿಐ ಶಸ್ತ್ರಚಿಕಿತ್ಸೆಯ ವೈದ್ಯಕೀಯ ನಿರ್ದೇಶಕರಾದ ಡಾ ಕೃಷ್ಣಮೋಹನ್ ಸೇಥಿ ಹೇಳಿಕೆಯನ್ನು ಇನ್ನಷ್ಟು ವಿಸ್ತಾರವಾಗಿ ಉಲ್ಲೇಖಿಸಿದ್ದು, ಮೂಲವ್ಯಾಧಿಗೆ ಫೋನ್ ಬಳಕೆ ನೇರ ಕಾರಣವಲ್ಲ.ಆದರೆ 15 ನಿಮಿಷದಲ್ಲಿ ಶೌಚಾಲಯದಲ್ಲಿ ಮಾಡುವ ಕಾರ್ಯವನ್ನು ಮೊಬೈಲ್‌ನಲ್ಲಿ ನಿರತರಾಗಿರುವ ವ್ಯಕ್ತಿ 30 ನಿಮಿಷ ತೆಗೆದುಕೊಳ್ಳುತ್ತಾನೆ. ಅದಲ್ಲದೆ ಒಮದೇ ಭಂಗಿಯಲ್ಲೇ ಅಧಿಕ ಸಮಯ ಕುಳಿತುಕೊಳ್ಳುವುದರಿಂದ ಮೂಲವ್ಯಾಧಿ ಸಂಭವಿಸುವ ಸಾಧ್ಯತೆಗಳು ಜಾಸ್ತಿ ಇದೆ.

ಮೂಲವ್ಯಾಧಿಯನ್ನು ಇಂಗ್ಲಿಷ್‌ನಲ್ಲಿ ಪೈಲ್ಸ್ ಎಂದೂ ಕರೆಯುತ್ತಾರೆ. ಗುದನಾಳದ ಕೆಳಭಾಗದಲ್ಲಿ ಮತ್ತು ಗುದದ್ವಾರದಲ್ಲಿ ಊದಿಕೊಂಡ ನಳಿಕೆಯ ಭಾಗದಲ್ಲಿ ಅಸ್ವಸ್ಥತೆ ಹಾಗೂ ರಕ್ತಸ್ರಾವ ಕಾಣಿಸಿಕೊಳ್ಳಬಹುದು.

ಕರುಳಿನ ಚಲನೆ, ದೀರ್ಘಕಾಲದ ಮಲಬದ್ಧತೆ ಅಥವಾ ಅತಿಸಾರ, ಅಧಿಕ ತೂಕ ಅಥವಾ ಗರ್ಭಾವಸ್ಥೆಯ ಸಮಯದಲ್ಲಿ ಗುದನಾಳದ ಕೆಳಭಾಗದಲ್ಲಿ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತವೆ.

ದೀರ್ಘಕಾಲ ಕುಳಿತುಕೊಳ್ಳುವುದು

ಟಾಯ್ಲೆಟ್‌ನಲ್ಲಿ ಫೋನ್ ಬಳಸುವುದರಿಂದ ಒಬ್ಬ ವ್ಯಕ್ತಿ ಅಲ್ಲಿಯೇ ಒಂದೇ ಭಂಗಿಯಲ್ಲಿ ಹೆಚ್ಚು ಕಾಲ ಕುಳಿತುಕೊಳ್ಳಬೇಕಾಗುತ್ತದೆ. ಇದು ಗುದನಾಳದ ವಲಯದಲ್ಲಿ ವೈನ್ಸ್ (ಸಿರೆ) ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ.

ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಮೂಲವ್ಯಾಧಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಹಾಗೂ ಅವುಗಳ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಇದರಿಂದ ಆಲಸ್ಯ ಶೈಲಿಯ ಜೀವನಕ್ಕೂ ಇದು ಕಾರಣವಾಗಿದೆ ಎಂಬುದು ವೈದ್ಯರ ಮಾತಾಗಿದೆ.

ಆಯಾಸ ಹಾಗೂ ಒತ್ತಡ

ಫೋನ್‌ನಲ್ಲಿ ವಿಷಯದ ಮೇಲೆ ಕೇಂದ್ರೀಕರಿಸುವುದು ಒತ್ತಡಕ್ಕೆ ಕಾರಣವಾಗಬಹುದು. ಇದರಿಂದ ಕರುಳಿನ ಚಲನೆಯ ಮೇಲೂ ಪರಿಣಾಮಕಾರಿ ಎಂದು ವೈದ್ಯರು ತಿಳಿಸುತ್ತಾರೆ. ಕರುಳಿನ ಚಲನೆಯ ಸಮಯದಲ್ಲಿ ಆಯಾಸಗೊಳ್ಳುವುದು ಮೂಲವ್ಯಾಧಿಗೆ ಪರಿಣಾಮಕಾರಿಯಾಗಿದೆ.

ಪ್ರಾತಃಕಾಲದ ವಿಧಿ ವಿಧಾನಗಳ ಸಮಯದಲ್ಲಿ ಏಕಾಗ್ರತೆ ಇಲ್ಲದಿರುವುದು ಹಾಗೂ ಫೋನ್‌ನಲ್ಲಿರುವ ವಿಷಯಗಳ ಮೇಲೆ ಹೆಚ್ಚು ಗಮನಹರಿಸುವುದು ಅನಿಯಮಿತ ಕರುಳಿನ ಅಭ್ಯಾಸಗಳಿಗೆ ಕಾರಣವಾಗಬಹುದು.

ಇದರಿಂದ ಮಲಬದ್ಧತೆ ಹಾಗೂ ಅತಿಸಾರ ಉಂಟಾಗಬಹುದು ಎಂದು ಹೇಳುತ್ತಾರೆ. ಇವುಗಳಿಂದ ಕೂಡ ಮೂಲವ್ಯಾಧಿ ಇನ್ನಷ್ಟು ಹದಗೆಡಬಹುದು ಎಂಬುದು ವೈದ್ಯರ ಸೂಚನೆಯಾಗಿದೆ.

ಅಸಮರ್ಪಕ ಭಂಗಿ

ಫೋನ್ ಬಳಸುವ ಸಮಯದಲ್ಲಿ ಹೆಚ್ಚು ಬಾಗುವುದು ಶೌಚಾಲಯದಲ್ಲಿ ಅಸಮರ್ಪಕ ಭಂಗಿಗೆ ಕಾರಣವಾಗುತ್ತದೆ ಇದು ಗುದನಾಳದವನ್ನು ಇನ್ನಷ್ಟು ತಗ್ಗಿಸುತ್ತದೆ ಹಾಗೂ ಮೂಲವ್ಯಾಧಿಗಳಿಗೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸುತ್ತಾರೆ.

ಉತ್ತಮ ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸಲು ಮತ್ತು ಮೂಲವ್ಯಾಧಿ ಅಪಾಯವನ್ನು ಕಡಿಮೆ ಮಾಡಲು, ಶೌಚಾಲಯದಲ್ಲಿ ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂಬುದು ವೈದ್ಯರ ಮಾತಾಗಿದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *