
ಭಾರತದಲ್ಲಿ ಕಳೆದ ವರ್ಷ ಅತಿ ಹೆಚ್ಚು ಮಾರಾಟವಾದ ವಿಸ್ಕಿ ಯಾವುದು? – ಮದ್ಯಪ್ರಿಯರಿಗೆ ಹೆಮ್ಮೆ ಅನಿಸೋ ಮಾಹಿತಿ ಇಲ್ಲಿದೆ ನೋಡಿ..
- ವಾಣಿಜ್ಯ ಸುದ್ದಿ
- October 18, 2023
- No Comment
- 86
ನ್ಯೂಸ್ ಆ್ಯರೋ : ಮದ್ಯ ಪ್ರಿಯರು ಎಲ್ಲ ಕಡೆಯೂ ಇದ್ದಾರೆ. ಕೆಲವರಿಗೆ ನಿರ್ದಿಷ್ಟ ಬ್ರಾಂಡ್ ನ ಮದ್ಯವೇ ಬೇಕು. ಎಷ್ಟು ದುಬಾರಿಯಾದರೂ ಚಿಂತೆ ಮಾಡುವುದಿಲ್ಲ.
ವಿಶ್ವದಲ್ಲೇ ಭಾರತವು ಮದ್ಯ ಮಾರಾಟಕ್ಕೆ ದೊಡ್ಡ ಮಾರುಕಟ್ಟೆಯಾಗಿದೆ. ಹೀಗಾಗಿ ಹಲವಾರು ತೆರನಾದ ಮದ್ಯ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೂ ಭಾರತೀಯರು ವಿಸ್ಕಿಯನ್ನು ಹೆಚ್ಚು ಇಷ್ಟ ಪಡುತ್ತಾರೆ. ಬೆಲೆ ವಿಚಾರದಲ್ಲೂ ಇದು ಕೈಗೆಟಕುವುದರಿಂದ ಹೆಚ್ಚು ಬೇಡಿಕೆಯನ್ನು ಹೊಂದಿದೆ.
ದೇಶಾದ್ಯಂತ ಕಳೆದ ವರ್ಷ ಅತೀ ಹೆಚ್ಚು ಮಾರಾಟವಾದ 12 ವಿಸ್ಕಿ ಬ್ರ್ಯಾಂಡ್‌ಗಳಲ್ಲಿ ಯಾವುದು ಮದ್ಯ ಪ್ರಿಯರಿಗೆ ಇಷ್ಟ ಎನ್ನುವುದು ಅಂಕಿ ಅಂಶಗಳು ಬಹಿರಂಗವಾಗಿದೆ.
ಮೊದಲನೇ ಸ್ಥಾನದಲ್ಲಿ ಮೆಕ್‌ಡೊವೆಲ್ಸ್ ನಂ 1 ಇದ್ದು, ಇದು ಯುನೈಟೆಡ್ ಸ್ಪಿರಿಟ್ಸ್ ಕಂಪೆನಿಗೆ ಸೇರಿದೆ. ಕಳೆದ ವರ್ಷ ಇದು 30.8 ಮಿಲಿಯನ್ ಮಾರಾಟವಾಗಿದೆ.
ಎರಡನೇ ಸ್ಥಾನದಲ್ಲಿ ರಾಯಲ್ ಸ್ಟ್ಯಾಗ್ ಇದ್ದು, ಪೆರ್ನಾಡ್ ರಿಕಾರ್ಡ್ ಇಂಡಿಯಾ ಕಂಪೆನಿಗೆ ಸೇರಿದೆ. ಕಳೆದ ವರ್ಷ 27.1 ಮಿಲಿಯನ್ ವಿಸ್ಕಿ ಕೇಸ್‌ಗಳು ಮಾರಾಟವಾಗಿವೆ.
ಅಲೈಡ್ ಬ್ಲೆಂಡರ್ಸ್ ಮತ್ತು ಡಿಸ್ಟಿಲ್ಲರ್ಸ್ ಕಂಪೆನಿಯ ಆಫಿಸರ್ ಚಾಯ್ಸ್ ಮೂರನೇ ಸ್ಥಾನದಲ್ಲಿದ್ದು, ಕಳೆದ ವರ್ಷ 24.9 ಮಿಲಿಯನ್ ಮಾರಾಟವಾಗಿದೆ.
ಪೆರ್ನಾಡ್ ರಿಕಾರ್ಡ್ ಇಂಡಿಯಾ ಕಂಪೆನಿಯ ಇಂಪೀರಿಯಲ್ ಬ್ಲೂ ನಾಲ್ಕನೇ ಸ್ಥಾನದಲ್ಲಿದ್ದು, ಕಳೆದ ವರ್ಷ 24 ಮಿಲಿಯನ್ ಕೇಸ್‌ಗಳು ಮಾರಾಟವಾಗಿವೆ.
ಪೆರ್ನಾಡ್ ರಿಕಾರ್ಡ್ ಇಂಡಿಯಾ ಕಂಪೆನಿಯ ಬ್ಲೆಂಡರ್ಸ್ ಪ್ರೈಡ್ ಐದನೇ ಸ್ಥಾನದಲ್ಲಿದ್ದು, ಹಿಂದಿನ ವರ್ಷದಲ್ಲಿ 9.7 ಮಿಲಿಯನ್ ಕೇಸ್‌ಗಳು ಮಾರಾಟವಾಗಿವೆ.
ರಾಡಿಕೋ ಖೈತಾನ್ ಕಂಪೆನಿಯ 8ಪಿಎಂ ವಿಸ್ಕಿ ಕಳೆದ ವರ್ಷ 9.1 ಮಿಲಿಯನ್ ಕೇಸ್ ಮಾರಾಟವಾಗಿದ್ದು, ಆರನೇ ಸ್ಥಾನ ಪಡೆದಿದೆ.
ಯುನೈಟೆಡ್ ಸ್ಪಿರಿಟ್ಸ್ ಕಂಪೆನಿಯ ರಾಯಲ್ ಚಾಲೆಂಜ್ ಏಳನೇ ಸ್ಥಾನದಲ್ಲಿದ್ದು, ಕಳೆದ ವರ್ಷ 7.2 ಮಿಲಿಯನ್ ಮಾರಾಟವಾಗಿದೆ.
ಎಂಟನೇ ಸ್ಥಾನದಲ್ಲಿರುವ ಅಲೈಡ್ ಬ್ಲೆಂಡರ್ಸ್ ಮತ್ತು ಡಿಸ್ಟಿಲ್ಲರ್ಸ್ ಹೊರ ತಂದಿರುವ ಸ್ಟರ್ಲಿಂಗ್ ರಿಸರ್ವ್ ವಿಸ್ಕಿ ಕಳೆದ ವರ್ಷ 5 ಮಿಲಿಯನ್ ಕೇಸ್ ಸೇಲ್ ಆಗಿತ್ತು.
ಒಂಬತ್ತನೇ ಸ್ಥಾನದಲ್ಲಿರುವ ಎಡಿಎಸ್ ಸ್ಪಿರಿಟ್ಸ್ ಕಂಪೆನಿಯ ರಾಯಲ್ ಗ್ರೀನ್ ಕೇವಲ 3.1 ಮಿಲಿಯನ್ ಕೇಸ್ ಸೇಲ್ ಆಗಿದೆ.
ಹತ್ತನೇ ಸ್ಥಾನದಲ್ಲಿ ಡೈರೆಕ್ಟರ್ ಸ್ಪೆಷಲ್ ಇದ್ದು ಯುನೈಟೆಡ್ ಸ್ಪಿರಿಟ್ಸ್ ಕಂಪೆನಿ ಇದನ್ನು ತಯಾರಿಸುತ್ತಿದೆ. ಕಳೆದ ವರ್ಷ 3 ಮಿಲಿಯನ್ ಕೇಸ್ ಮಾರಾಟವಾಗಿದೆ.
ರಾಡಿಕೋ ಖೈತಾನ್ ಕಂಪೆನಿಯ 8ಪಿಎಂ ಪ್ರೀಮಿಯಂ ಬ್ಲ್ಯಾಕ್ ಕೇವಲ 2.8 ಮಿಲಿಯನ್ ಕೇಸ್ ಮಾರಾಟವಾಗುವ ಮೂಲಕ 11 ಸ್ಥಾನ ಗಳಿಸಿದೆ.
ಯುನೈಟೆಡ್ ಸ್ಪಿರಿಟ್ಸ್ ನ ಸಿಗ್ನೇಚರ್ 12ನೇ ಸ್ಥಾನದಲ್ಲಿದ್ದು, ಕಳೆದ ವರ್ಷ 2.5 ಮಿಲಿಯನ್ ಕೇಸ್ ಮಾರಾಟವಾಗಿದೆ.