
Aishwarya Rai : ಆ ನಿರ್ಮಾಪಕ ಐಶ್ವರ್ಯಾ ರೈಯನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಪ್ಲ್ಯಾನ್ ಹಾಕಿದ್ದ..!! – ಶಾಕಿಂಗ್ ಹೇಳಿಕೆ ನೀಡಿದ ಟ್ಯಾಲೆಂಟ್ ಕಂಪನಿ ಮ್ಯಾನೇಜರ್..!
- ಮನರಂಜನೆ
- October 31, 2023
- No Comment
- 1071
ನ್ಯೂಸ್ ಆ್ಯರೋ : ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಕುರಿತಾದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಹಾಲಿವುಡ್ ನಿರ್ಮಾಪಕ ಹಾರ್ವೆ ವೇಯ್ ಸ್ಟೇಯ್ನ್ ವಿರುದ್ಧ ಹಾಲಿವುಡ್‌ನ ಖ್ಯಾತ ನಟಿ ಏಂಜಲೀನಾ ಜೋಲಿ ಸೇರಿದಂತೆ ಖ್ಯಾತ ನಟಿಯರು ಲೈಂಗಿಕ ದೌರ್ಜನ್ಯ ಆರೋಪವನ್ನು ಮಾಡುತ್ತಿದ್ದು, ಇದರ ಬೆನ್ನಲ್ಲೇ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಹಾರ್ವೆ ಪ್ರಯತ್ನಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಈ ಶಾಕಿಂಗ್ ಹೇಳಿಕೆಯನ್ನು ನೀಡಿದ್ದು, ಐಶ್ವರ್ಯಾ ರೈ ಕೆಲಸ ಮಾಡುತ್ತಿದ್ದ ಟ್ಯಾಲೆಂಟ್ ಕಂಪನಿ ಮ್ಯಾನೇಜರ್ ಸಿಮೋನ್ ಶೆಫಿಲ್ಡ್ ಅವರು. ಬಾಲಿವುಡ್ ನಟಿ, ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈಯನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಹಾಲಿವುಡ್ ನಿರ್ಮಾಪಕ ಹಾರ್ವೆ ವೇಯ್ ಸ್ಟೇಯ್ನ್ ಹೊಂಚು ಹಾಕಿದ್ದ ಎನ್ನುವ ಸಂಗತಿಯನ್ನು ಅವರು ಬಯಲು ಮಾಡಿದ್ದಾರೆ.
ಸಿಮೋನ್ ಶೆಫಿಲ್ಡ್ ನೀಡಿದ ಹೇಳಿಕೆ ಹೀಗಿದೆ
ಹಲವು ಖ್ಯಾತ ನಟಿಯರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಈ ನಿರ್ಮಾಪಕ ಒಮ್ಮೆ ಐಶ್ವರ್ಯಾರನ್ನು ಹೊಸ ಸಿನಿಮಾದ ಚರ್ಚೆಗಾಗಿ ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಳ್ಳುವ ಹುನ್ನಾರ ನಡೆಸಿದ್ದ. ಆಗ ನಾನು ಅಲ್ಲಿಯೇ ಇದ್ದಿದ್ದು ಹಾರ್ವೆಗೆ ಇಷ್ಟವಾಗದೇ ಕೆಟ್ಟ ಉದ್ದೇಶದಿಂದ ನನ್ನನ್ನು ಹಲವು ಬಾರಿ ಹೊರ ಹೋಗುವಂತೆ ಹೇಳಿದ್ದ.
ಆದರೆ ಆತನ ಉದ್ದೇಶ ಗೊತ್ತಿದ್ದ ನಾನು ಹೋಗಿರಲಿಲ್ಲ. ಐಶ್ವರ್ಯಾ ಹೊರ ಹೋದ ಮೇಲೆ ಆತ ನನ್ನ ಬಳಿ ಯಾಕೆ ನೀನು ಆಕೆಯೊಂದಿಗೆ ನನ್ನನ್ನು ‘ಒಬ್ಬಂಟಿ’ಯಾಗಿ ಬಿಡಲಿಲ್ಲ ಎಂದು ಪ್ರಶ್ನಿಸಿರುವುದಾಗಿ ಸಿಮೋನ್ ಹೇಳಿಕೊಂಡಿದ್ದು, ಹಾರ್ವೆ ಲೈಂಗಿಕ ಕಿರುಕುಳ ನೀಡುವ ವ್ಯಕ್ತಿ ಎಂಬುದು ಬಟಾಬಯಲಾಗಿದೆ.