
ಪ್ರಪಂಚದಲ್ಲಿ ಇದೆ – ಮಕ್ಕಳೇ ಇಲ್ಲದ ಒಂದು ದೇಶ
- ಅಂತಾರಾಷ್ಟ್ರೀಯ ಸುದ್ದಿ
- October 31, 2023
- No Comment
- 51
ನ್ಯೂಸ್ ಆ್ಯರೋ: ಪುಟ್ಟ ಮಕ್ಕಳನ್ನು ಕಂಡರೆ ಎಂತವರಿಗೂ ಮುದ್ದಾಡ ಬೇಕು ಎನ್ನುವ ಬಯಕೆಯಾಗುತ್ತದೆ. ಆದರೆ ಕೆಲವರಿಗೆ ಆ ಭಾಗ್ಯವೇ ಸಿಗುವುದಿಲ್ಲ. ಇನ್ನು ಕೆಲವರಿಗೆ ಅದನ್ನು ಪಡೆಯುವ ಯೋಗವೂ ಬರುವುದಿಲ್ಲ.
ಪ್ರಪಂಚದಲ್ಲಿ ಒಂದು ದೇಶವಿದೆ ಇಲ್ಲಿ ಯಾರಿಗೂ ಮಕ್ಕಳನ್ನು ಪಡೆಯುವ ಅಧಿಕಾರವೇ ಇಲ್ಲ. ಯಾಕೆಂದರೆ ಈ ದೇಶದಲ್ಲಿ ಮಕ್ಕಳಿಗೆ ಜನ್ಮ ನೀಡುವುದಕ್ಕೂ ನಿಷೇಧವಿದೆ. ಒಂದು ವೇಳೆ ಯಾರಿಗಾದರೂ ಮಕ್ಕಳಾದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಮತ್ತು ಭಾರೀ ದಂಡವನ್ನು ಕಟ್ಟಬೇಕಾಗುತ್ತದೆ.
ಇಲ್ಲಿ ಹೇಳುತ್ತಿರುವುದು ಯುರೋಪ್ ನಲ್ಲಿರುವ ವ್ಯಾಟಿಕನ್ ಸಿಟಿ ದೇಶದ ಬಗ್ಗೆ. ಇಲ್ಲಿ ಮಕ್ಕಳಿಗೆ ಜನ್ಮ ನೀಡಲು ಯಾವುದೇ ಆಸ್ಪತ್ರೆಗಳಿಲ್ಲ. ಇಲ್ಲಿರುವ ಪುರುಷರು ಮತ್ತು ಮಹಿಳೆಯರಿಗೆ ಆ ಅಧಿಕಾರವೂ ಇಲ್ಲ. ಹೀಗಾಗಿ ಎಲ್ಲರೂ ಇಲ್ಲಿ ಬ್ರಹ್ಮಚಾರಿಗಳಾಗಿಯೇ ಇರುತ್ತಾರೆ.
ವಿಶ್ವದ ಅತ್ಯಂತ ಪುಟ್ಟ ದೇಶವಾಗಿರುವ ವ್ಯಾಟಿಕನ್ ಸಿಟಿಯಲ್ಲಿ ಕ್ರಿಶ್ಚಿಯನ್ ಧರ್ಮದ ಉನ್ನತ ನಾಯಕರು ಮಾತ್ರ ವಾಸಿಸುತ್ತಿದ್ದಾರೆ. ಇದು ಅವರ ಅಧಿಕೃತ ನಿವಾಸ. ತಾವು ಪಾಲಿಸುವ ಧರ್ಮದಿಂದಾಗಿ ಇಲ್ಲಿ ವಾಸ ಮಾಡುವ ಪಾದ್ರಿಗಳು ಮದುವೆಯಾಗುವುದಿಲ್ಲ ಮತ್ತು ಮಕ್ಕಳನ್ನು ಹೊಂದುವುದಿಲ್ಲ.
ಪ್ರಪಂಚದ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದಾಗಿರುವ ವ್ಯಾಟಿಕನ್ ನಗರವನ್ನು ಯಾರೂ ತಮ್ಮ ಜನ್ಮಸ್ಥಳವೆನ್ನಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಇರುವವರೆಲ್ಲರೂ ಇಲ್ಲಿಯವರಲ್ಲ. ಇಲ್ಲಿ ಬಂದಿರುವ ಯಾರಿಗೂ ಇಲ್ಲಿ ಮಕ್ಕಳಾಗಿಲ್ಲ. ಇಲ್ಲಿನ ಒಟ್ಟು ಜನ ಸಂಖ್ಯೆ ಕೇವಲ 800. ಇದರಲ್ಲಿ ಕೇವಲ 30 ಮಹಿಳೆಯರಿದ್ದಾರೆ. ಅವರೂ ಜೀವನ ಪರ್ಯಂತ ಅಲ್ಲಿ ಉಳಿಯುವುದಿಲ್ಲ.
ಇಲ್ಲಿ ಎಲ್ಲರಿಗೂ ವಸ್ತ್ರ ಸಂಹಿತೆ ಇದೆ. ಮಹಿಳೆಯರಿಗೆ ಮಿನಿ ಸ್ಕರ್ಟ್, ಶಾರ್ಟ್ಸ್ ಅಥವಾ ಸ್ಲೀವ್‌ಲೆಸ್ ಉಡುಪುಗಳನ್ನು ಧರಿಸುವುದು ನಿಷೇಧ. ಈ ದೇಶದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಪೌರತ್ವ ನೀಡಲಾಗುತ್ತದೆ. ಹೆಚ್ಚಿನ ಮಹಿಳೆಯರು ಇಲ್ಲಿ ಶಿಕ್ಷಕರು, ಪತ್ರಕರ್ತರಾಗಿದ್ದಾರೆ.
ವ್ಯಾಟಿಕನ್ ಪೋಪ್ ಮತ್ತು ಅವರ ಅರಮನೆಯ ಭದ್ರತೆಯಲ್ಲಿ ಕೇವಲ 130 ಮಂದಿ ತೊಡಗಿಸಿಕೊಂಡಿದ್ದಾರೆ. ಅವರೆಲ್ಲ 30 ವರ್ಷಕ್ಕಿಂತ ಕೆಳಗಿನ ಸ್ವಿಸ್ ಸೈನ್ಯದಿಂದ ಆಯ್ಕೆಯಾದವರು.
ಈ ದೇಶದಲ್ಲಿ ಯಾವುದೇ ಸಾರ್ವಜನಿಕ ಸಾರಿಗೆ ಇಲ್ಲ. 300 ಮೀಟರ್ ಉದ್ದದ ರೈಲು ಹಳಿ ಇದ್ದು ಇದರಲ್ಲಿ ಕೇವಲ ಸರಕುಗಳನ್ನು ಮಾತ್ರ ಸಾಗಿಸಲಾಗುತ್ತದೆ.
ಕೇವಲ 49 ಹೆಕ್ಟೇರ್‌ಗಳಲ್ಲಿ ವ್ಯಾಪಿಸಿರುವ ಈ ವ್ಯಾಟಿಕನ್ ಸಿಟಿಯಲ್ಲಿರುವ ಎಲ್ಲ ನಾಗರಿಕರು ಪಾಸ್‌ಪೋರ್ಟ್ ಮತ್ತು ಪರವಾನಗಿ ಸೌಲಭ್ಯವನ್ನು ಪಡೆದಿದ್ದಾರೆ. ಆದರೆ ಬಹುತೇಕ ಸೌಲಭ್ಯಗಳಿಂದ ಈ ದೇಶ ವಂಚಿತವಾಗಿದೆ ಎಂದೇ ಹೇಳಬಹುದು.