
ಮನೆಗೊಂದು ಮಾಂತ್ರಿಕ ಕಿಟಕಿ ಇದ್ರೆ ಮನಸ್ಸು ಏಕಾಂತ ಬಯಸಲ್ಲ..! – ಆದರೆ ಮಾಂತ್ರಿಕ ಕಿಟಕಿ ಮಾಡಿಸೋದು ಸ್ವಲ್ಪ ದುಬಾರಿ ಕಣ್ರೀ..
- ಕೌತುಕ-ವಿಜ್ಞಾನಟೆಕ್ ನ್ಯೂಸ್
- October 31, 2023
- No Comment
- 68
ನ್ಯೂಸ್ ಆ್ಯರೋ : ಮನೆಯಲ್ಲಿ ಒಬ್ಬರೇ ಇದ್ದಾಗ, ಏಕಾಂತ ಬೇಕೆನಿಸಿದಾಗ ಸುಮ್ಮನೆ ಹೋಗಿ ಕಿಟಕಿ ಬಳಿ ಕುಳಿತುಕೊಳ್ಳುತ್ತೇವೆ. ಆದರೆ ಹೊರಗಡೆಯ ದೃಶ್ಯ ಕೆಲವೊಮ್ಮೆ ಮತ್ತಷ್ಟು ಮನವನ್ನು ಕಲಕುವಂತೆ ಮಾಡುತ್ತದೆ. ಹೀಗಾಗಿ ಕಿಟಕಿ ಬಾಗಿಲು ಮುಚ್ಚಿ ಮನದ ಬಾಗಿಲನ್ನು ಮುಚ್ಚಿ ಬಿಡುತ್ತೇವೆ.
ಮನಸ್ಸು ಎಷ್ಟೇ ಚಂಚಲವಾಗಿದ್ದರೂ ಪ್ರಕೃತಿಯ ಸುಂದರ ದೃಶ್ಯ ಮನಸ್ಸಿಗೆ ಮುದ ನೀಡುತ್ತದೆ. ಹೀಗಾಗಿ ಕೆಲವೊಮ್ಮೆ ನಮ್ಮ ಮನೆಯ ಕಿಟಕಿಯಲ್ಲಿ ಸಮುದ್ರದ ದೃಶ್ಯವೋ, ಮರುಭೂಮಿಯ ರಮಣೀಯ ನೋಟವೋ ಕಣ್ಣಿಗೆ ಕಾಣುವಂತಿದ್ದರೆ ಎನ್ನುವ ಕಲ್ಪನೆ ಮನ ಪಟಲದಲ್ಲಿ ಹಾಯ್ದು ಹೋಗುತ್ತದೆ. ಆದರೆ ನಮ್ಮ ಮನೆ ಸಮುದ್ರ ತಟದಲ್ಲೂ ಇಲ್ಲ. ಮರಳುಗಾಡಿನಲ್ಲೂ ಇಲ್ಲ. ಹಾಗಾದರೆ ಏನು ಮಾಡುವುದು ಎನ್ನುವ ಚಿಂತೆ ಬೇಡ. ಈಗ ಸಮುದ್ರವನ್ನು ಅಥವಾ ಮರುಭೂಮಿಯನ್ನು ಮನೆ ಸಮೀಪವೇ ಬರುವಂತೆ ಮಾಡಬಹುದು.
ಇದಕ್ಕಾಗಿ ಬೇಕಿರುವುದು ಒಂದು ಮಾಂತ್ರಿಕ ಕಿಟಕಿಯಷ್ಟೇ. ಈ ಕಿಟಕಿಯ ವಿಶೇಷತೆಯೆಂದರೆ ಇದಕ್ಕಾಗಿ ಹೆಚ್ಚು ಕಷ್ಟಪಡಬೇಕಾಗಿಲ್ಲ ಆದರೆ ತಂತ್ರಜ್ಞಾನವನ್ನು ಅವಲಂಬಿಸಬೇಕಾಗುತ್ತದೆ. ಹೆಚ್ಚಿನ ರೆಸಲ್ಯೂಶನ್ ಇರುವ ಡಿಜಿಟಲ್ ಕಿಟಕಿಯನ್ನು ಲಿಕ್ವಿಡ್ ವಿವ್ಸ್ ನಿಂದ ಮಾರಾಟ ಮಾಡಲಾಗುತ್ತಿದೆ. ಇದು ಸಾಂಪ್ರದಾಯಿಕ ಕಿಟಕಿಯಿಂದ ಭಿನ್ನವಾಗಿದ್ದು, ಕೆಲವೇ ಸೆಕೆಂಡ್ ಗಳಲ್ಲಿ ನಮ್ಮ ಕಣ್ಣುಗಳು ಬಯಸುವ ದೃಶ್ಯವನ್ನು ತೋರಿಸುತ್ತದೆ.
ಹೆಚ್ಚಿನ ರೆಸಲ್ಯೂಶನ್ ಡಿಜಿಟಲ್ ಪ್ಯಾನೆಲ್‌ಗಳಿಗೆ ಹೆಸರುವಾಸಿಯಾಗಿರುವ ಅಮೆರಿಕದ ಕಂಪೆನಿ ಲಿಕ್ವಿಡ್ ವಿವ್ಸ್ ಈ ಕಿಟಕಿಗಳನ್ನು ತಯಾರಿಸುತ್ತಿದೆ. ಎಲ್ಲಿ ಬೇಕಾದರೂ ಇದನ್ನು ಅಳವಡಿಸಬಹುದು. ವಿಷಯ ಗ್ರಂಥಾಲಯದೊಂದಿಗೆ ಬರುವ ಈ ವರ್ಚುವಲ್ ವಿಂಡೋವನ್ನು ಸಾಮಾನ್ಯ ವಿಂಡೋದಲ್ಲೇ ಸ್ಥಾಪಿಸಲಾಗುವುದು.
ನ್ಯಾಷನಲ್ ಜಿಯೋಗ್ರಾಫಿಕ್ ಮಟ್ಟದ ಸಿನೆಮ್ಯಾಟೋಗ್ರಾಫರ್‌ಗಳ ಫೀಚರ್ ಫಿಲ್ಮ್ ಮೋಷನ್ ಪಿಕ್ಚರ್‌ಗಳ ಕೆಮರಾಗಳೊಂದಿಗೆ ಹೊಂದಿರುವ ಈ ವಿಂಡೋದಲ್ಲಿ ಪ್ರತಿ 24 ಗಂಟೆಗಳಲ್ಲಿ ಸುಮಾರು 8 ಸಾವಿರ ವಿಡಿಯೋಗಳನ್ನು ಪ್ಲೇ ಮಾಡಲಾಗುತ್ತದೆ. ಇದಕ್ಕಾಗಿ ಸೂಕ್ತ ಕಿಟ್ ಇದರೊಂದಿಗೆ ಬರುತ್ತದೆ.
ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಮೂಲಕ ಇದರೊಂದಿಗೆ ಸಂಪರ್ಕ ಸಾಧಿಸಿ ಮನೆಯಲ್ಲೇ ಕುಳಿತು ನಾವು ಬಯಸುವ ಸ್ಥಳದ ಅನುಭವವನ್ನು ಪಡೆಯಬಹುದು. ಸಿಂಗಲ್ ಪ್ಯಾನೆಲ್ ವರ್ಚುವಲ್ ವಿಂಡೋದ ಬೆಲೆ ಸುಮಾರು 20- 95 ಲಕ್ಷ ರೂ. ವರೆಗೆ ಇರುತ್ತದೆ.