Shakeela : ಹಣಕ್ಕಾಗಿ ಪರಪುರುಷರ ಜತೆ ಮಲಗಿಸಿದ್ದೇ ನಮ್ಮಮ್ಮ..!! – ಯಾರೊಂದಿಗೆ ನಾನು ಕನ್ಯೆಯಾಗಿರಬೇಕಿತ್ತೋ ಅವರಿಗೆ ನಾನು ಕನ್ಯೆಯಾಗಿ ಸಿಗಲಿಲ್ಲ..!!

Shakeela : ಹಣಕ್ಕಾಗಿ ಪರಪುರುಷರ ಜತೆ ಮಲಗಿಸಿದ್ದೇ ನಮ್ಮಮ್ಮ..!! – ಯಾರೊಂದಿಗೆ ನಾನು ಕನ್ಯೆಯಾಗಿರಬೇಕಿತ್ತೋ ಅವರಿಗೆ ನಾನು ಕನ್ಯೆಯಾಗಿ ಸಿಗಲಿಲ್ಲ..!!

ನ್ಯೂಸ್ ಆ್ಯರೋ : ಮಾಜಿ ನೀಲಿ ಚಿತ್ರ ತಾರೆ ಶಕೀಲಾ ಅವರು ತಮ್ಮ ಹೇಳಿಕೆಗಳ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. 2013ರಿಂದ ಅಡಲ್ಟ್‌ ಸಿನಿಮಾಗಳಿಂದು ದೂರ ಉಳಿದಿರುವ ಶಕೀಲಾ ಅವರು ಇಂದಿಗೂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ಆಗಾಗ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಒಂದು ಕಾಲದಲ್ಲಿ ಶಕೀಲಾ ಅವರ ಅಡಲ್ಟ್‌ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದರೆ ಮಲಯಾಳಂನ ನಟರಾದ ಮಮ್ಮುಟ್ಟಿ, ಮೋಹನ್‌ಲಾಲ್‌ ಸಿನಿಮಾಗಳೇ ಪೋಸ್ಟ್‌ಪೋನ್‌ ಆಗುತ್ತಿದ್ದವು. ಅಷ್ಟರ ಮಟ್ಟಿಗೆ ಶಕೀಲಾ ಅವರು ಬೇಡಿಕೆಯನ್ನು ಹೊಂದಿದ್ದರು.

ಈ ಸಿನಿಮಾಗಳನ್ನು ಶಕೀಲಾ ಅವರು ಇಷ್ಟ ಪಟ್ಟು ಮಾಡುತ್ತಿರಲಿಲ್ವಂತೆ. ತಾಯಿಗೋಸ್ಕರ ವಯಸ್ಕ ಸಿನಿಮಾಗಳಲ್ಲಿ ಒಪ್ಪಿದರಂತೆ. ಆಗಿನ ಕಾಲದಲ್ಲಿ ಅಡಲ್ಟ್‌ ಸಿನಿಮಾಗಳಿಗೆ ಶಕೀಲಾ ಅವರು 3 ಲಕ್ಷದವರೆಗೆ ಸಂಭಾವನೆಯನ್ನು ಪಡೆಯುತ್ತಿದ್ದರು. ಆ ಮೂರು ಲಕ್ಷ ಇಂದು 3 ಕೋಟಿ ಸಮಾನವಾಗಿದ್ದು, ದುಡಿದ ಹಣವೆಲ್ಲವೂ ಅಕ್ಕನ ಬಳಿ ಇದೆ ಎಂಬುದು ಶಕೀಲಾ ಅವರು ತನ್ನ ಬಯೋಗ್ರಾಫಿಯಲ್ಲಿ ಈ ಘಟನೆ ಉಲ್ಲೇಖಿಸಿದ್ದಾರೆ. ಅದಲ್ಲದೆ ಅನೇಕ ವಿಚಾರಗಳನ್ನು ಈಚೆಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಹಣಕ್ಕಾಗಿ ಪರಪುರುಷನ ಜತೆ ಮಲಗಿಸಿದ್ದೇ ನನ್ನಮ್ಮ:

ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದ್ದ ಕಾರಣಕ್ಕೆ, ಪರಪುರುಷನ ಜತೆ ಮಲಗಿ ಸಂಪಾದಿಸು ಅಂತಾ ಹೇಳಿದ್ದೆ ನನ್ನಮ್ಮನೇ. ತಾಯಿಗೆ ಕಣ್ಣಿಗೆ ತನ್ನ ಎಲ್ಲ ಮಕ್ಕಳೂ ಒಂದೇ. ಆದರೆ ಚಿಕ್ಕಂದಿನಿಂದಲೇ ನನ್ನನ್ನು ಬೇರೆ ರೀತಿಯಲ್ಲಿಯೇ ಟ್ರೀಟ್‌ ಮಾಡುತ್ತಿದ್ದಳು. ಅದು ನನ್ನ ಗಮನಕ್ಕೂ ಬಂದಿತ್ತು. ಕೈತುಂಬ ಹಣ ಗಳಿಸುತ್ತಿರುವಾಗಲೂ ಅದು ಹಾಗೆಯೇ ಮುಂದುವರಿದಿತ್ತು. ನಾನು ಆಗಿನ್ನೂ ಸಿನಿಮಾಕ್ಕೆ ಬಂದಿರಲಿಲ್ಲ. ಒಂದಷ್ಟು ಸಿನಿಮಾಗಳ ಮಾತುಕತೆ ನಡೆದಿತ್ತು ಅಷ್ಟೇ. ಆ ಸಮಯದಲ್ಲಿ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇತ್ತು. ಹಾಗಾಗಿಯೇ ಹೊಟೇಲ್‌ಗೆ ಕರೆದೊಯ್ದು, ಪರಪುರುಷನ ಜತೆ ಮಲಗು ಎಂದು ಕೋಣೆಗೆ ಕಳಿಸಿದ್ದಳು”

ಮುಂದುವರಿದು, “ನಾನು ಕೋಣೆವೊಳಗೆ ಹೋದೆ ನಿಜ. ಆದರೆ, ನನ್ನ ಪಾಲಿಗೆ ಆ ಪ್ರಯತ್ನವೇ ಫೇಲ್‌ ಆಯಿತು. ಅಮ್ಮನ ಪಾಲಿಗೆ ಪಾಸ್‌ ಆಯಿತು. ಅಂದರೆ, ಒಳಗಿದ್ದ ವ್ಯಕ್ತಿಯ ಬಳಿ ನನ್ನ ಸಮಸ್ಯೆ ಎಲ್ಲವನ್ನೂ ಹೇಳಿಕೊಂಡೆ. ಪ್ಲೀಸ್‌ ಪ್ಲೀಸ್‌ ಎಂದು ಬೇಡಿಕೊಂಡೆ. ಆಗ ಆ ವ್ಯಕ್ತಿ, ನಾನು ನಿನಗೀಗ ಹಣ ನೀಡುವೆ. ನಿನ್ನ ಅಮ್ಮನ ಬಳಿಯೂ ಎಲ್ಲವೂ ಆಯಿತು ಎಂದೇ ಹೇಳುವೆ. ಆದರೆ, ನಾನು ಮುಂದಿನ ಸಲ ನಿನ್ನನ್ನು ಭೇಟಿಯಾಗಲು ಬಂದಾಗ ನೀನು ಕನ್ಯೆಯಾಗಿಯೇ ಇರಬೇಕು” ಎಂದು ಬೇಡಿಕೆಯಿಟ್ಟಿದ್ದ.

ಮೊದಲನೇ ಗಿರಾಕಿ ನಂತ್ರ ಅಮ್ಮ ಎರಡನೇ ಗಿರಾಕಿ ಹುಡುಕಲು ಶುರು ಮಾಡಿದರು. ದಿನ ಕಳೆದಂತೆ ಅದು ಹೆಚ್ಚಾಗುತ್ತಾ ಹೋಯಿತು. ಯಾವಾಗ ಸಿನಿಮಾ ಅವಕಾಶಗಳು ಹೆಚ್ಚಾಗುತ್ತ ಹೋದವೋ ಇವೆಲ್ಲವೂ ಕಡಿಮೆ ಆದವು. ಇನ್ನೊಂದು ವಿಚಾರ ಏನೆಂದರೆ, ಯಾರೊಂದಿಗೆ ನಾನು ಕನ್ಯೆಯಾಗಿರಬೇಕು ಎಂದು ಬಯಸಿದ್ದೆನೋ, ಆ ವ್ಯಕ್ತಿ ನನ್ನ ಜತೆಗಿದ್ದಾಗ ಆ ಕನ್ಯತ್ವ ನನ್ನ ಬಳಿ ಇರಲಿಲ್ಲ. ಆಗಲೇ ನಾನು ಅದನ್ನು ಕಳೆದುಕೊಂಡಿದ್ದೆ. ಅದು ಬೇಸರದ ಸಂಗತಿ” ಎಂದು ಸಂದರ್ಶನವೊಂದರಲ್ಲಿ ಶಕೀಲಾ ಅವರು ಮನಬಿಚ್ಚಿ ಮಾತನಾಡಿದ್ದಾರೆ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *